ಕ್ರಿಕೆಟ್ : ಕಾರ್ಯಕ್ರಮ ಬದಲಾವಣೆಗೆ ಎಸಿಬಿ ಕೆಂಡಾಮಂಡಲ
ನವದೆಹಲಿ : ಮುಂದಿನ ಫೆಬ್ರವರಿಯಲ್ಲಿ ಭಾರತಕ್ಕೆ ಪ್ರವಾಸ ಬೆಳೆಸಲಿರುವ ಸ್ಟೀವ್ ವಾ ನೇತೃತ್ವದ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪ್ರವಾಸ ಕಾರ್ಯಕ್ರಮದಲ್ಲಿ ಬಿಸಿಸಿಐ ಮಾಡಿರುವ ಅಂತಿಮ ಕ್ಷಣದ ಬದಲಾವಣೆಗೆ ಕೆಂಡಾಮಂಡಲಾಗಿದೆ. ಬಿಸಿಸಿಐನ ಬದಲಾವಣೆಗೆ ಸ್ಪಂದಿಸಲು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಲಿ (ಎಸಿಬಿ) ಸುತರಾಂ ಒಪ್ಪುತ್ತಿಲ್ಲ.
ಶಾರ್ಜಾದಲ್ಲಿ ಬರುವ ಏಪ್ರಿಲ್‌ನಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ಜೊತೆ ತ್ರಿಕೋನ ಸರಣಿಯಲ್ಲಿ ಭಾಗವಹಿಸಲು ಬಿಸಿಸಿಐ ಒಪ್ಪಿರುವುದೇ ಈ ಹಠಾತ್ ಬದಲಾವಣೆಗೆ ಕಾರಣ. 6 ತಿಂಗಳ ಮುಂಚೆ ಎಸಿಬಿಗೆ ಬಿಸಿಸಿಐ ಕೊಟ್ಟಿದ್ದ ಕಾರ್ಯಕ್ರಮ ಪಟ್ಟಿಯ ಪ್ರಕಾರ ಭಾರತದಲ್ಲಿ ಆಸ್ಟ್ರೇಲಿಯಾ ಪ್ರವಾಸ ಏಪ್ರಿಲ್ 6ಕ್ಕೆ ಬೆಂಗಳೂರಿನ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯದೊಂದಿಗೆ ಮುಗಿಯಬೇಕಿತ್ತು.
ಆದರೆ ಶಾರ್ಜಾ ಟೂರ್ನಿ ಏಪ್ರಿಲ್ 4ರಿಂದಲೇ ಶುರುವಾಗಲಿರುವುದರಿಂದ ಮಂಡಲಿ ಅಧ್ಯಕ್ಷರ ಇಲೆವೆನ್ ನಡುವಣ ಕೊಚ್ಚಿಯಲ್ಲಿ ಆಸ್ಟ್ರೇಲಿಯಾ ಆಡಬೇಕಿರುವ 3 ದಿನದ ಒಂದು ಪಂದ್ಯವನ್ನು ರದ್ದು ಪಡಿಸಲು ಬಿಸಿಸಿಐ ನಿರ್ಧರಿಸಿದೆ. ಇನ್ನೂ ಈ ಕುರಿತ ಅಧಿಕೃತ ಪ್ರಕಟಣೆ ಹೊರ ಬಿದ್ದಿಲ್ಲ.
ಎಸಿಬಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮಾಲ್ಕಂ ಸ್ಪೀಡ್ ಅವರಿಗೆ ಬಿಸಿಸಿಐನ ಹಠಾತ್ ಬದಲಾವಣೆಯಿಂದ ಬೇಸರ ಉಂಟಾಗಿದೆ. ಇಂಗ್ಲಿಷ್ ಪತ್ರಿಕೆಯಾಂದು ಅವರನ್ನು ಮಾತನಾಡಿಸಿ, ಬದಲಾವಣೆ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಅವರು ಹೀಗೆಂದಿದ್ದಾರೆ- ಇದರಿಂದ ನನಗೆ ತೃಪ್ತಿಯಾಗಿಲ್ಲ. 6 ತಿಂಗಳ ಹಿಂದೆ ಬಿಸಿಸಿಐ ಹೇಗೆ ಹೇಳಿತ್ತೋ ಹಾಗೇ ನಡೆಯಬೇಕು. ಈ ಬಗ್ಗೆ ಮಾತನಾಡಲು ಈ ವಾರ ನಾನೇ ಖುದ್ದು ಭಾರತಕ್ಕೆ ಹೋಗಬೇಕೆಂದಿದ್ದೇನೆ.
ಆಸ್ಟ್ರೇಲಿಯಾ ತಂಡ ಫೆಬ್ರವರಿ 14ರಂದು ಭಾರತಕ್ಕೆ ಬಂದಿಳಿಯಲಿದೆ. ಕಾರ್ಯಕ್ರಮದ ಅಂತಿಮ ಪಟ್ಟಿಯನ್ನು ಜನವರಿ 22ಕ್ಕೆ ಪ್ರಕಟಿಸುತ್ತೇವೆ. ಒಂದು ವೇಳೆ ಕಾರ್ಯಕ್ರಮದ ಬದಲಾವಣೆಗೆ ಎಸಿಬಿ ತೀವ್ರ ವಿರೋಧ ತೋರಿದಲ್ಲಿ ಶಾರ್ಜಾ ಟೂರ್ನಿಯನ್ನೇ ಸ್ವಲ್ಪ ಮುಂದೂಡುವಂತೆ ಸಂಯೋಜಕರನ್ನು ಕೇಳಿಕೊಳ್ಳುತ್ತೇವೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯವಂತ ಲೆಲೆ ಹೇಳಿದ್ದಾರೆ.
ಒಂದೇ ಸಾಲಿನಲ್ಲಿ 15 ಟೆಸ್ಟ್‌ಗಳನ್ನು ಗೆದ್ದು ಬೀಗುತ್ತಿರುವ ವಿಶ್ವ ಚಾಂಪಿಯನ್ ಕಾಂಗರೂಗಳು ಭಾರತದ ವಿರುದ್ಧ 3 ಟೆಸ್ಟ್ ಹಾಗೂ 5 ಒಂದು ದಿನದ ಪಂದ್ಯಗಳನ್ನಾಡಲಿದ್ದಾರೆ. ಕಳೆದ 31 ವರ್ಷಗಳಲ್ಲಿ ಭಾರತದ ನೆಲದಲ್ಲಿ ಆಸ್ಟ್ರೇಲಿಯಾ ಯಾವುದೇ ಟೆಸ್ಟ್ ಸರಣಿ ಗೆದ್ದಿಲ್ಲ. ಭರವಸೆಯ ಹೊಸಬರನ್ನು ಹೊಂದಿರುವ ಭಾರತ ತಂಡ ಆಸ್ಟ್ರೇಲಿಯಾದ ಗೆಲುವಿನ ಸರಪಣಿ ತುಂಡು ಮಾಡುವುದೇ ಎಂಬ ನಿರೀಕ್ಷೆ ಕ್ರಿಕೆಟ್ ಅಭಿಮಾನಿಗಳದು.
(ಸುದ್ದಿ ಸಂಸ್ಥೆಗಳು)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications