ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಹೊಸ ಸಂಬಂಧಗಳಿಗಾಗಿ ಹಂಬಲಿಸುತ್ತಿದ್ದೀರಿ. ಹೆಚ್ಚೆಚ್ಚು ಭಾವನಾತ್ಮಕವಾಗುವುದು ನೋವಿಗೆ ಕಾರಣವಾದುದರಿಂದ ಸಂಬಂಧಗಳ ವಿಶ್ಲೇಷಣೆಯಲ್ಲಿ ತುಸು ಜಾಗರೂಕರಾಗಿರಿ.ವೃಷಭ :ಈ ನಡುವೆ ದೊಡ್ಡದಾಗಿರುವ ಜೇಬಿನ ತೂತಿಗೆ ಹೊಲಿಗೆ ಹಾಕುವ ಯೋಚನೆಯಲ್ಲಿದ್ದೀರಿ. ನೀವು ಅಂದುಕೊಳ್ಳುತ್ತಿರುವ ಹೆಚ್ಚುವರಿ ಆದಾಯದ ಮೂಲಗಳು ಹತ್ತಿರದಲ್ಲೇ ಇವೆ.
ಮಿಥುನ : ಯಾರಿಗೆ ಯಾರುಂಟು.. ಎಂದು ಕೊರಗುತ್ತಿದ್ದೀರಿ. ಆದರೆ, ದೊಡ್ಡ ಜವಾಬ್ದಾರಿ ನಿಮ್ಮ ಮೇಲಿರುವುದರಿಂದ ನಾಳಿನ ಹುಮ್ಮಸ್ಸಿಗೆ ಎದ್ದು ನಿಲ್ಲಲೇಬೇಕು.
ಕಟಕ : ಸುಮಾರು ದಿನದಿಂದ ಮುಂದೂಡುತ್ತಿರುವ ಪ್ರಯಾಣ ಕೂಡಿಬಂದಿದೆ. ಧೋ ಅನ್ನುವ ನಿಮ್ಮ ಲಹರಿಯಂತೆಯೇ ವಾತಾವರಣವೂ ಇದೆ. ಖುಷಿಯ ದಿನ.
ಸಿಂಹ : ಸಂಜೆಯ ರಂಗಿನ ಪಾರ್ಟಿಗೆ ಹಳೆಯ ಗೆಳೆಯರು ಜೊತೆಯಾಗುತ್ತಾರೆ. ನಿಮಗೆ ಲಾಭವೆನ್ನಿಸುವ ಸಲಹೆಗಳು ಪುಕ್ಕಟೆಯಾಗಿ ಸಿಗುವ ಅವಕಾಶಗಳನ್ನು ಬಳಸಿಕೊಳ್ಳಿ.
ಕನ್ಯಾ : ಲಾಟರಿ, ಸಟ್ಟಾ ವ್ಯವಹಾರಗಳಲ್ಲಿ ಜಯ. ನೀವು ಬಾಲ ಹಿಡಿಯುವ ಕುದುರೆಯೇ ಇಂದು ಮುಂದೆ. ಏನಪ್ಪಾ ಎಡವಟ್ಟು ಅಂದರೆ... ಮನೆಯಲ್ಲಿ ಕಿರಿಕಿರಿ.
ತುಲಾ : ನಿಮ್ಮ ಪ್ರಸ್ತಾವನೆಗಳನ್ನು ಇಂದು ಯಾರೂ ಸುಲಭವಾಗಿ ತಳ್ಳಿ ಹಾಕಲಾರರು. ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿರುವ ವಿಷಯವನ್ನು ಪ್ರಕಟಿಸಲು ಇದಕ್ಕಿಂಥಾ ಸುಮುಹೂರ್ತ ಬೇಕೆ?
ವೃಶ್ಚಿಕ : ಗೆಳೆಯರ ಸಂಕಟದ ದಿನಗಳಲ್ಲಿ ಜೊತೆಯಾಗಲು ಸಾಧ್ಯವಿಲ್ಲ ಎನ್ನುವ ಕೊರಗು ಬೇಡ. ನಿಮ್ಮ ತುರ್ತನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ.
ಧನಸ್ಸು : ತೀರಾ ವ್ಯವಹಾರಸ್ಥರಾದರೆ ಸಂಬಂಧಗಳು ದಕ್ಕುವುದಿಲ್ಲ . ನೀವು ಅನುಭವಿಸುತ್ತಿರುವುದೂ ಇದನ್ನೇ. ಒಮ್ಮೆ ಮಳೆಯಂತೆ ಭೋರ್ಗರೆದು ಬಿಡಿ. ಆಮೇಲಿನ ಗಮಲಿಗೆ ಹುಚ್ಚೆದ್ದು ಹೋಗುತ್ತೀರಿ.
ಮಕರ : ದಿನವನ್ನು ನೀವು ಆಲೋಚಿಸಿರಲಿಕ್ಕೇ ಇಲ್ಲ . ಇಂಥಾ ಸಂದರ್ಭಗಳೇ ವ್ಯಕ್ತಿತ್ವವನ್ನು ಗಟ್ಟಿಗೊಳಿಸುತ್ತವೆ. ನೀವು ಸಾಗಬೇಕಾದ ಹಾದಿ ಇನ್ನೂ ದೀರ್ಘವಾಗಿದೆ.
ಕುಂಭ : ಇರುವುದೆಲ್ಲವ ಬಿಟ್ಟು ಮನೆಯಲ್ಲಿ ಮಂಕಾಗಿದ್ದೀರಿ. ಇದು ನಿಮ್ಮದೇ ದುಡುಕು. ಕುಲದೇವರನ್ನು ಪ್ರಾರ್ಥಿಸಿ. ಸೂರ್ಯ ಮತ್ತೆ ಮೂಡುತ್ತಾನೆ.
ಮೀನ : ಕುಟುಂಬ ಸೌಖ್ಯ. ಪ್ರಣಯ ಲಾಭ. ಸೃಜನಶೀಲ ಕಾರ್ಯಗಳಲ್ಲಿ ಪ್ರಗತಿ. ಇಷ್ಟಿದ್ದೂ ನಿಮಗೆ ನೆಮ್ಮದಿಯಿಲ್ಲದಿದ್ದರೆ ಅದಕ್ಕೆ ನಿಮ್ಮ ಚಿತ್ತ ಚಾಂಚಲ್ಯವೇ ಕಾರಣ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications