ನೆಗಡಿ ಎಂದು ಈ ಔಷಧಿ ತಗೊಂಡರೆ ಜೀವ ಕಳಕೊಂಡೀರಿ!
ನವದೆಹಲಿ : ನೆಗಡಿ- ತಲೆ ಸಿಡಿತ, ಮೂಗು ಕಟ್ಟಿದೆ. ಯಾವುದೋ ಮೆಡಿಕಲ್ ಶಾಪ್‌ಗೆ ಹೋಗಿ ಒಂದು ಡಜನ್ನು ಮಾತ್ರೆ ಕೇಳಿ ತಂದು ನುಂಗುತ್ತೀರಿ. ಆದರೆ ಆ ಮಾತ್ರೆಯಲ್ಲೇನೇನಿದೆ ಅಂತ ಗಮನಿಸೋರು ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು. ಇನ್ನು ಮುಂದೆ ಅದನ್ನು ನೀವೂ ಖಂಡಿತ ಗಮನಿಸಿ. ಇಲ್ಲವಾದರೆ ಜೀವ ಹೋದೀತು! ನೀವು ಉಪಯೋಗಿಸೋ ಮಾತ್ರೆಯಲ್ಲಿ ಫೀನೈಲ್ ಪ್ರೊಪೊನಾಲಮೈನ್ (ಪಿಪಿಎ) ಬಳಕೆಯಾಗಿದ್ದರೆ ಈ ಕ್ಷಣವೇ ಅದನ್ನು ಬಿಸುಟಿಬಿಡಿ. ಯಾಕೆ ಅಂದಿರಾ? ಇಲ್ಲೋದಿ...
ಅಮೆರಿಕೆಯ ಯಾಲೆ ವೈದ್ಯಕೀಯ ವಿಶ್ವ ವಿದ್ಯಾಲಯ ‘ಹಿಮೊರ್ಯಾಜಿಕ್ ಸ್ಟ್ರೋಕ್’ ಎಂಬ 5 ವರ್ಷ ಕಾಲದ ಅಧ್ಯಯನ ನಡೆಸಿದೆ. ಅಮೆರಿಕ ಔಷಧೀಯ ಆಡಳಿತ (ಯುಎಸ್‌ಎಫ್‌ಡಿಎ) ಕೂಡ ಅಧ್ಯಯನದ ಸಹಯೋಗಿ. ಇದರಿಂದ ಸ್ಪಷ್ಟವಾಗಿರುವುದೇನೆಂದರೆ, ಪಿಪಿಎ ಹೊಂದಿರುವ 100ಎಂಜಿ ಗಿಂತ ಹೆಚ್ಚಿನ ಯಾವುದೇ ಮಾತ್ರೆಯನ್ನು ದಿನಕ್ಕೆ 4ರಂತೆ ಸತತ 3 ದಿನಗಳ ಕಾಲ ಸೇವಿಸಿದರೆ ಜೀವಕ್ಕೇ ಸಂಚಕಾರ. ಈ ರಾಸಾಯನಿಕ ಮಿದುಳಿನಲ್ಲಿ ರಕ್ತಸ್ರಾವ ಉಂಟು ಮಾಡುತ್ತದೆ. ನಿತ್ರಾಣಕ್ಕೆ ಎಡೆ ಮಾಡಿಕೊಟ್ಟು, ಜೀವವನ್ನೇ ಬಲಿ ತೆಗೆದುಕೊಳ್ಳುವಷ್ಟು ಮಾರಕವಾಗಿದೆ ಎನ್ನುತ್ತಾರೆ ಯಾಲೆಯ ಸಂಶೋಧಕ ಡಾ. ಗುಲ್ಹಾತಿ.
ಸಾಮಾನ್ಯವಾಗಿ ಕೆಮ್ಮು- ಶೀತ ನಿವಾರಣೆಗೆ ಕೊಡುವ ಔಷಧಿಗಳಲ್ಲಿನ ರಾಸಾಯನಿಕಗಳು ಇಂತಿರುತ್ತವೆ- ಪ್ಯಾರಾಸೆಟಮೋಲ್ (500 ಎಂಜಿ), ಪಿಪಿಎ (25 ಎಂಜಿ) ಹಾಗೂ ಕೆಫೆನ್(32 ಎಂಜಿ). ಭಾರತದ ಕೆಲ ಔಷಧಿಗಳಲ್ಲಿ ಪಿಪಿಎ ಬದಲಿಗೆ ಸೂಡೋ ಎಫಿಡ್ರೆೃನ್ ಬಳಸುತ್ತಿದ್ದಾರೆ. ಇದು ಸ್ವಲ್ಪ ದುಬಾರಿಯಾದರೂ ಪಿಪಿಎಯಂತೆ ಹಾನಿಕಾರಕವಲ್ಲ. ಪಿಪಿಎ ಇರುವಂಥ ಔಷಧಿಗಳನ್ನು ಮಾರಕೂಡದು ಎಂದು ಯುಎಸ್‌ಫ್‌ಡಿಎ ನವೆಂಬರ್ 6, 2000ದಂದೇ ಒಂದು ನೋಟೀಸು ಹೊರಡಿಸಿದೆ. ಆದರೂ ಕೆಲ ವ್ಯಾಪಾರಿಗಳು ಮಾರಾಟ ನಿಲ್ಲಿಸಿಲ್ಲ.
ಯೂರೋಪು- ಅಮೆರಿಕಾದಲ್ಲಿ ನಿಷೇಧಿಸಿದ್ದು ಭಾರತದಲ್ಲಿ ಬಿಕರಿ
ಪಿಪಿಎ ಔಷಧಿ ಮಾರಾಟ ನಿಷೇಧಕ್ಕೆ ಕಾನೂನು ಕ್ರಮ ಇನ್ನೂ ಜಾರಿಯಾಗಿಲ್ಲ. ಈ ಕಾರಣ ಔಷಧಿ ಅಂಗಡಿಗಳು ಈ ಹೊತ್ತೂ ಪಿಪಿಎ ಇರುವ ಗುಳಿಗೆಗನ್ನು ಮಾರುತ್ತಿದ್ದಾರೆ. ಅಷ್ಟೇ ಅಲ್ಲ. ಯೂರೋಪ್ ಮತ್ತು ಅಮೆರಿಕಾದಲ್ಲಿ ನಿಷೇಧಿಸಲಾಗಿರುವ ಕೆಲ ಔಷಧಿಗಳು ಮತ್ತು ಸ್ಟಿರಾಯಿಡ್‌ಗಳು ಭಾರತದ ಮಾರುಕಟ್ಟೆಯಲ್ಲಿ ಮನಸೋ ಇಚ್ಛೆ ಬಿಕರಿಯಾಗುತ್ತಿವೆ. ಸದ್ಯಕ್ಕೆ ಜನ ಎಚ್ಚೆತ್ತುಕೊಳ್ಳಬೇಕಷ್ಟೆ ಎನ್ನುತ್ತಾರೆ ಡಾ. ಗುಲ್ಹಾತಿ.
ಮೊದಲ ಬಾರಿಗೆ ಎನ್‌ಡಿಟಿವಿ ಈ ವಿಷಯ ಹೆಕ್ಕಿ, ಕೇಂದ್ರ ಆರೋಗ್ಯ ಸಚಿವ ಡಾ.ಸಿ.ಪಿ.ಠಾಕೂರ್ ಅವರನ್ನು ಈ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತಿದೆ ಎಂದು ಕೇಳಿದಾಗ,- ಇಂಥ 12 ವಿವಿಧ ಹೆಸರಿನ ಔಷಧಿಗಳು ಬಿಕರಿಯಾಗುತ್ತಿವೆ. ಯಾವುದು ಅಸಲಿ ಯಾವುದು ನಕಲಿ ಎಂಬುದನ್ನ ಪತ್ತೆ ಮಾಡಲು ಒಂದು ಸಮಿತಿಯನ್ನು ರಚಿಸಲಾಗುವುದು. ಪಿಪಿಎ ಇರುವ ಔಷಧಿಗಳಿಂದ ಗಂಭೀರ ಸಮಸ್ಯೆ ತಲೆದೋರುತ್ತಿದೆ. ಇದರ ಬಗೆಗೂ ಸರ್ಕಾರ ವಿಶೇಷ ಗಮನ ಕೊಡುತ್ತಿದೆ ಎಂದರು.
ನಮಗೇನು ಗೊತ್ತು ? ಒಬ್ಬೊಬ್ಬರು ಒಂದೊಂದು ಹೇಳುತ್ತಾರೆ. ಭಾರತದ ಔಷಧಿ ನಿಯಂತ್ರಕರು (ಡ್ರಗ್ ಕಂಟ್ರೋಲರ್ ಆಫ್ ಇಂಡಿಯಾ) ಯಾವುದನ್ನು ಮಾರಲು ಅನುಮತಿ ಕೊಡುವರೋ ಅದೇ ಮಾರುಕಟ್ಟೆಗೆ ಬರುತ್ತದೆ ಎಂಬುದು ಔಷಧಿ ಅಂಗಡಿ ವ್ಯಾಪಾರಿಗಳ ಮಾತು. ಒಟ್ಟಿನಲ್ಲಿ ಇನ್ನೂ ತಡವಾದರೆ ಎಷ್ಟೋ ಜೀವಗಳು ಹಾರಿ ಹೋಗುತ್ತವೆ. ಸರ್ಕಾರ ಮನಗಾಣಲಿ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications