ಕಪಿಲ್, ವಾಡೇಕರ್ ಪ್ರಶ್ನಿಸಲು ತುದಿಗಾಲಲ್ಲಿ ನಿಂತಿರುವ ಮಾಧವನ್
ನವದೆಹಲಿ : ಮೋಸದಾಟ ಸಂಬಂಧ ಕಪಿಲ್ದೇವ್ ಹಾಗೂ ಅಜಿತ್ ವಾಡೇಕರ್ ಅವರ ಹೇಳಿಕೆಗಳನ್ನೊಳಗೊಂಡ ವರದಿಯನ್ನು ಜನವರಿ ಕೊನೆಯಾಳಗೆ ಸಲ್ಲಿಸುವ ವಿಶ್ವಾಸವನ್ನು ಬಿಸಿಸಿಐ ವಿಶೇಷ ತನಿಖಾ ಆಯುಕ್ತ ಕೆ. ಮಾಧವನ್ ಶನಿವಾರ ಖಾಸಗಿ ವಾಹಿನಿಯಾಂದಕ್ಕೆ ನೀಡಿರುವ ಸಂದರ್ಶನದಲ್ಲಿ ವ್ಯಕ್ತ ಪಡಿಸಿದ್ದಾರೆ.
ಕಳೆದ ವಾರ ಕಪಿಲ್ ಹಾಗೂ ವಾಡೇಕರ್ ಅವರ ಬಿಡುವಿರದ ಕಾರ್ಯಕ್ರಮಗಳಿಂದಾಗಿ ಮಾಧವನ್ರೊಂದಿಗಿನ ಅವರ ಭೇಟಿಯ ಕಾರ್ಯಕ್ರಮ ರದ್ದಾಗಿತ್ತು . ಬರುವ ಸೋಮವಾರ (ಜ.8) ವಾಡೇಕರ್ರನ್ನು ಹಾಗೂ ಬುಧವಾರ (ಜ.10) ಕಪಿಲ್ ಅವರನ್ನು ಮಾಧವನ್ ಪ್ರಶ್ನಿಸುವರು. ಮೋಸದಾಟ ಪ್ರಕರಣದ ವರದಿಯಲ್ಲಿ ಸಿಬಿಐ ಹೆಸರಿಸಿರುವ ಅನೇಕ ಪಂದ್ಯಗಳು ಕಪಿಲ್ ಹಾಗೂ ವಾಡೇಕರ್ ನೇತೃತ್ವದಲ್ಲಿ ನಡೆದಿರುವುದರಿಂದ ಅವರನ್ನು ಪ್ರಶ್ನಿಸಲು ಬಿಸಿಸಿಐ ಮಾಧವನ್ರಿಗೆ ತಿಳಿಸಿದೆ.
ಸಿಬಿಐ ಹಾಗೂ ಇತರ ವರದಿಗಳ ಹಿನ್ನೆಲೆಯಲ್ಲಿ ಕಪಿಲ್ ಹಾಗೂ ವಾಡೇಕರ್ ಅವರನ್ನು ಪ್ರಶ್ನಿಸುತ್ತೇನೆ ಎಂದು ಟೀವಿ ಸಂದರ್ಶನದಲ್ಲಿ ಹೇಳಿರುವ ಮಾಧವನ್, ಬಿಸಿಸಿಐ ಸೇರಿದಂತೆ ಯಾರಿಂದಲೂ ತಾವು ಯಾವುದೇ ವಿಧವಾದ ಒತ್ತಡಕ್ಕೆ ಒಳಗಾಗಿಲ್ಲ , ತನಿಖೆಯ ಬಗ್ಗೆ ಮುಕ್ತ ಮನಸ್ಸಿನಿಂದ ಇರುವೆ ಹಾಗೂ ವರದಿ ಸಲ್ಲಿಸಲು ತಮಗೆ ತಾವೇ ಜನವರಿ 31 ರ ಗಡುವು ಹಾಕಿಕೊಂಡಿರುವುದಾಗಿ ಸ್ಪಷ್ಟಪಡಿಸಿದರು.
(ಯುಎನ್ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications