ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಬಾಸುಮತಿ ನಂಬರ್ 1
ಚೆನ್ನೈ : ಬಾಸುಮತಿ ಅಕ್ಕಿಯ ಒಡೆಯರು ನಾವೇ ಎಂದು ಅಮೆರಿಕ ಕಂಪನಿಗಳು ಎಷ್ಟು ಬಾಯಿ ಮಾಡಿ ಬಡಾಯಿ ಕೊಚ್ಚಿಕೊಂಡರೂ ವಿಶ್ವ ಮಾರುಕಟ್ಟೆಯಲ್ಲಿ ಭಾರತದ ಬಾಸುಮತಿಯ ಪ್ರಾಬಲ್ಯ ಮುಂದುವರಿದಿದೆ.
ಅಮೆರಿಕ ಹಾಗೂ ಥಾಯ್ ಕಂಪನಿಗಳ ಬಾಸುಮತಿ ಅಕ್ಕಿ ಗ್ರಾಹಕರ ಮನಸ್ಸನ್ನು ಗೆಲ್ಲುವಲ್ಲಿ ವಿಫಲವಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಬಾಸುಮತಿಯ ಯಜಮಾನ್ಯ ಮುಂದುವರಿದಿದೆ ಎಂದು ಭಾರತದ ಬಾಸುಮತಿ ಅಕ್ಕಿಯ ರಫ್ತಿನ ಅತ್ಯಂತ ದೊಡ್ಡ ಘಟಕ ಕೆಆರ್ಬಿಎಲ್ನ ಜಂಟಿ ನಿರ್ವಹಣಾ ನಿರ್ದೇಶಕ ಅನೂಪ್ ಕೆ. ಗುಪ್ತ ತಿಳಿಸಿದ್ದಾರೆ. ದೇಶೀಯ ಬಾಸುಮತಿ ಮಾರುಕಟ್ಟೆಯಲ್ಲಿ ಕೂಡ ಕೆಆರ್ಬಿಎಲ್ ದೊಡ್ಡ ಪಾಲು ಹೊಂದಿದೆ.
ಭಾರತದ ಬಾಸುಮತಿಗೆ ಹೋಲಿಸಿದರೆ, ಪಾಕಿಸ್ತಾನಿ ಬಾಸುಮತಿಯ ಪ್ರಾಬಲ್ಯ ಜಾಗತಿಕ ಮಾರುಕಟ್ಟೆಯಲ್ಲಿ ಅಷ್ಟಿಲ್ಲ ಎನ್ನುವುದನ್ನು ಎತ್ತಿ ತೋರುವ ಗುಪ್ತ , ನಿರ್ದಿಷ್ಟ ಭಾರತೀಯ ಬಾಸುಮತಿ ತಳಿಯ ಪೇಟೆಂಟ್ ಬಗೆಗಿನ ಸಮರ ಇನ್ನೂ ಮುಂದುವರಿದಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಹಿಮಾಲಯದ ತಪ್ಪಲಿನಲ್ಲಿ ಬಾಸುಮತಿ ಅಕ್ಕಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದ್ದು , ಇಲ್ಲಿನ ವಿಶಿಷ್ಟವಾದ ನೀರು ಹಾಗೂ ಮಣ್ಣು ಭಾರತದ ಬಾಸುಮತಿಯನ್ನು ವಿಶಿಷ್ಟವಾಗಿಸಿವೆ. ಸಿಹಿ ಕಂಪಿನ ಇಂಥಾ ಅಕ್ಕಿಯನ್ನು ಮತ್ತೆಲ್ಲೂ ಬೆಳೆಯಲು ಸಾಧ್ಯವಿಲ್ಲ ಎಂದು ಭಾರತದ ಬಾಸುಮತಿಯ ಮಾರುಕಟ್ಟೆಯಲ್ಲಿನ ಯಶಸ್ಸನ್ನು ಗುಪ್ತ ವಿಶ್ಲೇಷಿಸಿದ್ದಾರೆ.
(ಯುಎನ್ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications