ವೈಕುಂಠ ಏಕಾದಶಿ : ತಿಮ್ಮಪ್ಪನ ದರ್ಶನಕ್ಕೆ ಮೈಲಿಗಟ್ಟಲೆ ಕ್ಯೂ
ಬೆಂಗಳೂರು : ಇಂದು ಶನಿವಾರ ತಿರುಪತಿ ಗಿರಿವಾಸ ಶ್ರೀ ವೆಂಕಟೇಶ್ವರನ ವಾರ. ಮಿಗಿಲಾಗಿ ಶ್ರೀ ವೈಕುಂಠ ಏಕಾದಶಿ. ವೈಷ್ಣವರಿಗೆ ಹಾಗೂ ಶ್ರೀಮನ್ನಾರಾಯಣನ ಭಕ್ತರಿಗೆ ಪವಿತ್ರದಿನವಾದ ಇಂದು ಶ್ರೀ ವೆಂಕಟೇಶ್ವರನ ದರ್ಶನ ಮಾಡಿ ತಮ್ಮ ಜೀವನವನ್ನು ಧನ್ಯ ಮಾಡಿಕೊಳ್ಳಲು ಬೆಂಗಳೂರೂ ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ವೆಂಕಟೇಶನ ದೇವಾಲಯಗಳಲ್ಲೂ ಭಕ್ತಾದಿಗಳು ಮೈಲಿಗಟ್ಟಲೆ ಕ್ಯೂ ನಿಂತಿದ್ದರು.
ಸುಪ್ರಭಾತದಲ್ಲೇ ಎದ್ದು ಶುಚಿರ್ಭೂತರಾಗಿ, ಮಡಿ ಬಟ್ಟೆಯುಟ್ಟು, ಕೃಷ್ಣರಾಜ ಮಾರುಕಟ್ಟೆ ಬಳಿಯ ಕೋಟೆ ವೆಂಕಟರಮಣ ದೇವಾಲಯದ ಮುಂದೆ, ಬನಶಂಕರಿಯ ದೇವಗಿರಿಯ ವೆಂಕಟರಮಣ ದೇವಾಲಯದ ಎದುರು, ರಾಜಾಜಿನಗರದಲ್ಲಿರುವ ವಿಶ್ವ ವಿಖ್ಯಾತ ಇಸ್ಕಾನ್ ದೇವಾಲಯದಲ್ಲಿ ಭಕ್ತಾದಿಗಳು ಭಗವಂತನ ದರ್ಶನಕ್ಕಾಗಿ ಸರತಿಯ ಸಾಲಿನಲ್ಲಿ ನಿಂತು ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಇರುವ ಶ್ರೀನಿವಾಸನ ದೇವಾಲಯದಲ್ಲೂ ವೈಕುಂಠ ಏಕಾದಶಿಯ ಪ್ರಯುಕ್ತ ವಿಶೇಷ ಪೂಜೆ, ಪುರಸ್ಕಾರಗಳು ನಡೆದವು. ದೇವಾಲಯವನ್ನು ಸಂಪರ್ಕಿಸುವ ಪ್ರಮುಖ ಬೀದಿಗಳಲ್ಲಿ ಹೂವಿನ ಕಮಾನುಗಳನ್ನು ಹಾಕಿ, ರಸ್ತೆಯುದ್ದಕ್ಕೂ ವಿದ್ಯುತ್ ದೀಪಗಳನ್ನು ಜೋಡಿಸಲಾಗಿತ್ತು. ರಾಜ್ಯದ ಬಹುತೇಕ ಎಲ್ಲ ವೆಂಕಟೇಶನ ದೇವಾಲಯಗಳನ್ನೂ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.
ಇಸ್ಕಾನ್ ದೇವಾಲಯದಲ್ಲಿ ಏಕಾದಶಿ ಉತ್ಸವ ನಡೆಯಿತು. ಶ್ರೀನಿವಾಸನಿಗೆ ಲಕ್ಷಾರ್ಚನೆಯೂ ನಡೆಯಿತು. ಪಲ್ಲಕ್ಕಿ ಉತ್ಸವ, ಭಜನೆ, ಕೀರ್ತನೆ, ಪ್ರಸಾದ ವಿನಿಯೋಗವೂ ನಡೆಯಿತು. ವೈಕುಂಠ ಏಕಾದಶಿ ಪ್ರಯುಕ್ತ ಇಸ್ಕಾನ್ ದೇಗುಲದಲ್ಲಿ ಬೆಳಗ್ಗೆ 9ರಿಂದ ರಾತ್ರಿ 9 ಗಂಟೆ ವರೆಗೆ ವಿಶೇಷ ದರ್ಶನ ಏರ್ಪಡಿಸಲಾಗಿದೆ.
ರಾಜ್ಯದ ಚಿಕ್ಕ ತಿರುಪತಿಯಲ್ಲೂ ವಿಶೇಷ ಪೂಜೆಗಳು ನಡೆದವು. ಸಾವಿರಾರು ಜನರು ವೆಂಕಟರಮಣನ ದರ್ಶನ ಮಾಡಿದರು. ಮಧ್ಯಾಹ್ನ 3 ಗಂಟೆಯ ಸಮಯದಲ್ಲೂ ಇಸ್ಕಾನ್, ಕೋಟೆ ವೆಂಕಟರಮಣ ದೇವಾಲಯ, ಬನಶಂಕರಿಯ ದೇವಗಿರಿಯ ದೇವಾಲಯ, ಜೆಪಿ ನಗರ ವೆಂಟರಮಣ ದೇವಾಲಯ ಹೀಗೆ ಭಕ್ತ ಸಮುದಾಯ ಸಾವಿ ಸಾವಿರ ಸಂಖ್ಯೆಯಲ್ಲಿ ಸಾಲಾಗಿ ನಿಂತು ತಿಮ್ಮಪ್ಪನ ದರ್ಶನ ಪಡೆದರು.
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications