Get Updates
Get notified of breaking news, exclusive insights, and must-see stories!

ನಾಳಿನ ಪರೀಕ್ಷೆಗೆ ನಾಮೂವರೂ ರೆಡಿ

*ಡಿ. ರಾಮ್‌ರಾಜ್‌

ಭಾರ-ತೀ-ಯ ಕ್ರಿಕೆ-ಟ್‌-ನ ಘನ-ತೆ-ಗೆ 2000 ವರ್ಷ-ದ-ಲ್ಲಿ ಹತ್ತಿ-ದ ಮಸಿ ಗಂಗಾ-ಜ-ಲ-ವೂ ತೊ-ಳೆ-ಯ--ಲಾರ-ದಂಥ-ಹದ್ದು . ಮನೆ ದೇವ-ರಿ-ಗಿಂ-ತಾ ಮಿಗಿ-ಲಾ-ಗಿ ಕ್ರಿಕೆ-ಟ್‌ ರಸಿ-ಕ-ರು ಆರಾ-ಧಿ-ಸು-ತ್ತಿ-ದ್ದ -ಘ-ಟಾ-ನು-ಘ-ಟಿ-ಗ-ಳೆ-ಲ್ಲಾ ಮ್ಯಾಚ್‌-ಫಿ-ಕ್ಸಿಂ-ಗ್‌ ಪ್ರಕ-ರ-ಣ-ದಲ್ಲಿ ಎಂಜ-ಲು ತಿಂದ-ದ್ದು ಬಯ-ಲಾ-ದ-ದ್ದೇ ತಡ, ಇನ್ನೇ-ನು -ದೇ-ಶ-ದ-ಲ್ಲಿ ಕ್ರಿಕೆ-ಟ್‌ ನೆಲ ಕಚ್ಚಿ-ತು ಎಂದು ಅಂದು-ಕೊಂ-ಡವ-ರೇ ಹೆಚ್ಚು . ಹಾಗೇ-ನೂ ಆಗ-ಲಿ-ಲ್ಲ . ತಪ್ಪಿ-ತ-ಸ್ಥ-ರು ಮನೆ-ಗೆ ಹೋದ-ರು. ಹೊಸ-ಬ-ರು ಚೆನ್ನಾಗಿ ಆಡು-ತ್ತಿ-ದ್ದಾ-ರೆ. ಭಾರ-ತೀ-ಯ ಕ್ರಿಕೆ-ಟ್‌ ರಸಿ-ಕ ಯಥಾ ಪ್ರಕಾ-ರ ಆಟ-ವ-ನ್ನು ಆಸ್ವಾ-ದಿ-ಸು-ತ್ತಿ-ದ್ದಾ-ನೆ.

ಹೊಸ ಕ್ಯಾಲೆಂ-ಡ-ರ್‌ ವರ್ಷ 2001 ಮತ್ತೆ ಹಲ-ವು ನಿರೀ-ಕ್ಷೆ-ಗ-ಳ-ನ್ನು ಹೊ-ತ್ತು ತಂದಿ-ದೆ. ಈ ವರ್ಷ-ದ-ಲ್ಲಿ ನಮ್ಮ ಕ್ರಿಕೆ-ಟ್‌ ಕಲಾ-ವಿ-ದ-ರು ಬಯ-ಸು-ವು-ದಾ-ದ-ರೂ ಏನ-ನ್ನು ? ಈ ಕುರಿ-ತು ನಮ್ಮ-ವ-ರೇ ಆದ ವಿಶ್ವ ಖ್ಯಾತ ಕ್ರಿಕೆ-ಟ್‌ ತಾರೆ-ಗ-ಳು ತಮ್ಮ ಅನ್ನಿ-ಸಿ-ಕೆ-ಗ-ಳ-ನ್ನು ನಮ್ಮೊಂ-ದಿ-ಗೆ ಹಂಚಿ-ಕೊಂ-ಡಿ-ದ್ದಾ-ರೆ. ಹೆಕ್ಕಿ-ಕೊ-ಳ್ಳಿ.

ರಾಹುಲ್‌ ಡ್ರಾವಿಡ್‌ : ಬಹಳ ಸಮಯದ ನಂತರ ನಾವು ಜಾಸ್ತಿ ಟೆಸ್ಟ್‌ ಕ್ರಿಕೆಟ್‌ ಆಡುತ್ತಿರುವುದರಿಂದ ನನಗೆ ತೀವ್ರ ಸಂತೋಷ ಆಗುತ್ತಿದೆ. ಈ ಸಂಗತಿ ಹೊಸ ವರ್ಷಕ್ಕೆ ಹೊಸ ರಂಗು ತಂದಿದೆ. ಟೆಸ್ಟ್‌ ಕ್ರಿಕೆಟ್‌ ಅಂದರೆ ಆಟಗಾರರ ದೈಹಿಕ ಸಾಮರ್ಥ್ಯದ ಸತ್ವ ಪರೀಕ್ಷೆ . ಇದು ನಮಗೆಲ್ಲ ಒಂದು ದೊಡ್ಡ ಸವಾಲು. ಈ ಸವಾಲನ್ನು ಸಮರ್ಥವಾಗಿ ಎದುರಿಸುವುದು ಅಷ್ಟು ಸುಲಭದ ಮಾತಲ್ಲ. ವಿಶೇಷವಾಗಿ ಆಸ್ಟ್ರೇಲಿಯ ತಂಡದ ಭಾರತ ಪ್ರವಾಸ ಕಾರ್ಯಕ್ರಮ ನಮ್ಮ ಮುಂದಿದೆ. ಅವರು ವಿಶ್ವವಿಜೇತರು, ಘಟಾನುಘಟಿಗಳು. ಇನ್ನು ವಿದೇಶ ಪ್ರವಾಸ ನಮಗೆ ನಿರೀಕ್ಷಿತ ಯಶಸ್ಸುಗಳನ್ನು ತಂದು ಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ನಾವು ಎಲ್ಲ ವಿದೇಶೀ ಪ್ರವಾಸಗಳನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಬೇಕು. ನಮ್ಮ ತಂಡದಲ್ಲಿ ಯುವಕರೇ ಹೆಚ್ಚಾಗಿ ಆಡುತ್ತಿರುವುದರಿಂದ ಈ ಸಾರಿ ಚೆನ್ನಾಗಿ ಆಡಿ ಗೆಲ್ಲುತ್ತೇವೆ ಎಂಬ ಭರವಸೆ ನನಗಿದೆ.

ಜಾವಗಲ್‌ ಶ್ರೀನಾಥ್‌ : ಒಂದೇ ಮಾತಿನಲ್ಲಿ ಹೇಳುವುದಾದರೆ ಮುಂದಿನ ವ್ವಿ ಕಪ್‌ ಪಂದ್ಯಾವಳಿಗಳಿಗೆ ನಾವು ಈಗಿಂದೀಗಲೇ ತಯಾರಾಗಬೇಕು. ಇದೇ ನಮ್ಮ ಮೊದಲ ಆದ್ಯತೆ ಮತ್ತು ಗುರಿ. (ಮುಂದಿನ ವಿಶ್ವಕಪ್‌ ದಕ್ಷಿಣ ಆಫ್ರಿಕಾದಲ್ಲಿ 2003 ) ಎರಡನೆಯದೆಂದರೆ, ವಿದೇಶೀ ನೆಲದಲ್ಲಿ ನಡೆಯುವ ಎಲ್ಲ ಸರಣಿ ಹಾಗೂ ಪಂದ್ಯಾವಳಿಗಳನ್ನು ಗೆಲ್ಲುವುದರತ್ತ ನಮ್ಮ ಗಮನ ಕೇಂದ್ರೀಕೃತವಾಗಬೇಕು. ಸದ್ಯ ನಾನು ಮೈಸೂರಿಗೆ ಹೋಗುತ್ತಿದ್ದೇನೆ. ಬಂದ ಮೇಲೆ ನನ್ನ ಆಶಯಗಳನ್ನು ವಿವರವಾಗಿ ಹೇಳುತ್ತೇನೆ.

Anil kumble

ಅನಿಲ್‌ ಕುಂಬ್ಳೆ : ಬೌಲಿಂಗ್‌ ಮಾಡಲು ಹಾತೊರೆಯುತ್ತಿದ್ದೇನೆ. ಚೆನ್ನಾಗಿ ಬೌಲ್‌ ಮಾಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಬೇಕೆನ್ನುವುದೆ ನನ್ನ ಇವತ್ತಿನ ಆಸೆ. ಆಸ್ಟ್ರೇಲಿಯಾ ವಿರುದ್ಧದ ಮ್ಯಾಚ್‌ಗಳು ಕ್ಲಿಷ್ಟಕರವಾಗಿರುತ್ತದೆ. ನಮ್ಮ ತಂಡದ ಉದಯೋನ್ಮುಖ ಆಟಗಾರರಿಗೆ ಈ ಅವಕಾಶವೊಂದು ಸತ್ವಪರೀಕ್ಷೆ ಯೇ ಸರಿ. ಈ ಹಣಾಹಣಿ ಸ್ಪರ್ಧೆಯಲ್ಲಿ ಯಾರು ಗಮನ ಸೆಳೆಯುವ ಆಟ ಆಡುತ್ತಾರೆನ್ನುವುದು ತಂಡದ ಯಶಸ್ಸನ್ನು ಅವಲಂಬಿಸಿದೆ.

ಜಿಂಬಾಬ್ವೆ, ದಕ್ಷಿಣ ಆಫ್ರಿಕ ಮತ್ತು ಶ್ರೀಲಂಕ ಪ್ರವಾಸ ನಮ್ಮ ಮುಂದಿದೆ. ಇವೆಲ್ಲವೂ ಪ್ರಯಾಸಕರ. ಸವಾಲೆನಿಸುವ ಈ ಸ್ಪಧೆಗಳಲ್ಲಿ ನಾವು ಶಕ್ತಿಮೀರಿ ಹೋರಾಡಬೇಕು. ಇಂಗ್ಲೆಂಡ್‌ ಟೂರು ಕೂಡ ಅಷ್ಟೆ. ಸುಲಭ ಎಂದು ಮೈಮರೆಯುವ ಹಾಗಿಲ್ಲ. ಮೊನ್ನೆ ತಾನೆ ಅವರು ಪಾಕಿಸ್ತಾನ್‌ಗೆ ಮಣ್ಣು ಮುಕ್ಕಿಸಿದ್ದಾರೆ ಎನ್ನುವುದನ್ನು ನಾವು ನೆನಪಿಲ್ಲಿಟ್ಟುಕೊಂಡು ಮೈದಾನಕ್ಕಿಳಿಯಬೇಕು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+