ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌರ ವಿದ್ಯುತ್‌ ಕೋಶ : ಬೆಂಗಳೂರಿನ ಐಐಎಸ್‌ಸಿ ವಿಜ್ಞಾನಿಗಳ ಸಾಧನೆ

By Staff
|
Google Oneindia Kannada News

ನವದೆಹಲಿ: ಸೌರಶಕ್ತಿಯನ್ನು ವಿದ್ಯುತ್ತಾಗಿ ಪರಿವರ್ತಿಸುವ ಹೊಸ ಮಾದರಿಯ ಕೋಶವೊಂದನ್ನು ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದಾರೆ.

ಬಹಳ ತೆಳುವಾದ ಈ ಸೌರ ಕೋಶಕ್ಕೆ ಈಗ ಬಳಸಲಾಗುತ್ತಿರುವ ಸಿಲಿಕಾನ್‌ನ ಅಗತ್ಯ ಇರುವುದಿಲ್ಲ. ಸ್ಥಿತಿ ಸ್ಥಾಪಕ ಗುಣ ಹೊಂದಿರುವ ಈ ಕೋಶವನ್ನು ಪೇಪರ್‌ ಸುರುಳಿಯಂತೆ ಸುತ್ತಬಹುದಾಗಿದ್ದು, ಇದನ್ನು ಯಾವುದೇ ವಸ್ತುವಿನ ಸುತ್ತ ಸುತ್ತಿ ನಿರಂತರವಾಗಿ ವಿದ್ಯುತ್‌ ಉತ್ಪಾದಿಸಬಹುದಾಗಿದೆ ಎಂದು ಇಲ್ಲಿ ನಡೆಯುತ್ತಿರುವ ವಿಜ್ಞಾನ ಸಮಾವೇಶದಲ್ಲಿ ತಿಳಿಸಲಾಯಿತು.

ಸೀರೆಗೆ ಈ ಕೋಶವನ್ನು ಜೋಡಿಸಿದರೆ, ಅದನ್ನು ಉಡುವ ಮಹಿಳೆ ಸಂಚಾರಿ ವಿದ್ಯುತ್‌ ಉತ್ಪಾದನಾ ಸ್ಥಾವರವಾಗಬಹುದು ಅಥವಾ ಕಿವಿ ಕೇಳಿಸದವರು ತಮ್ಮ ಶ್ರವಣ ಯಂತ್ರಕ್ಕೆ ನಿರಂತರವಾಗಿ ವಿದ್ಯುತ್‌ ಪೂರೈಕೆ ಮಾಡಿಕೊಳ್ಳಲು ಸಹ ಇದು ನೆರವಾಗಲಿದ್ದು, ಆ ವ್ಯಕ್ತಿ ತಾನು ಧರಿಸುವ ಕನ್ನಡಕಕ್ಕೆ ಈ ಕೋಶವನ್ನು ಸುತ್ತಿ ಇಡಬಹುದು.

ಈಗ ಕಟ್ಟಡಗಳ ಮೇಲೆ ಅಳವಡಿಸಲಾಗುವ ಸೌರ ವಿದ್ಯುತ್‌ ಕೋಶಗಳಲ್ಲಿ ಹಲವು ಚಿಕ್ಕ ಸಿಲಿಕಾನ್‌ ಎಳೆಗಳನ್ನು ಜೋಡಿಸುವುದರಿಂದಾಗಿ ಅವು ಸ್ಥಿತಿ ಸ್ಥಾಪಕ ಗುಣ ಹೊಂದಿರುವುದಿಲ್ಲ ಎಂದೂ ಸಮಾವೇಶದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X