ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಹೆಚ್ಚೆಚ್ಚು ಬರವಣಿಗೆ ಹಾಗೂ ಅಧ್ಯಯನದಲ್ಲಿ ತೊಡಗಿರುವುದೇ ಮಾನಸಿಕ ದಣಿವಿಗೆ ಕಾರಣ. ಇದನ್ನೆಲ್ಲಾ ಮರೆಸುವಂಥಾ ಸಂತೋಷ ಫಲಿತಾಂಶ ರೂಪದಲ್ಲಿ ನಿಮ್ಮದಾಗಲಿದೆ.ವೃಷಭ :ಭವಿಷ್ಯದ ಭದ್ರತೆಯ ಬಗ್ಗೆ ಆತಂಕದಲ್ಲಿದ್ದೀರಿ. ದಿನ ಬೆಳಗಾದರೆ ಕಾಲಿಗೆ ಚಕ್ರ ಕಟ್ಟಿಕೊಳ್ಳುವ ದಿನಚರಿ ಬದಲಾಗುವ ಬಗ್ಗೆ ಇಂದೇ ಸೂಚನೆ ದೊರೆಯಲಿದೆ. ಗಾಳಿ ಬಂದಾಗ ತೂರಿಕೊಳ್ಳಿ.
ಮಿಥುನ : ಕಳೆದುಹೋದದ್ದರ ಬಗ್ಗೆ ಯಾಕೆ ಚಿಂತಿಸುತ್ತೀರಿ. ನಿಮ್ಮೆದುರು ತೆರೆದುಕೊಂಡಿದೆ ನೋಡಿ ಗುಲಾಬಿ ತೋಟ. ಆದರೂ, ಅವರು ಕೊಡುವ ಕೆಂಪು ಗುಲಾಬಿಯೇ ನಿಮಗೆ ಹೆಚ್ಚು ಮೆಚ್ಚು.
ಕಟಕ : ಹೆಚ್ಚು ಹೆಚ್ಚು ಜನಮುಖಿಯಾಗುವ ನಿಮ್ಮ ನಡವಳಿಕೆ ವೃತ್ತಿಯಲ್ಲಿ ಗೌರವ ತರುತ್ತದೆ. ಗೆಳೆಯರು ಅಸೂಯೆ ಪಡುವಂತೆ ಧನಲಾಭ, ಪ್ರಣಯ ಲಾಭ ಹೊಂದಲಿದ್ದೀರಿ.
ಸಿಂಹ : ಮೇಲಧಿಕಾರಿ ಕಿರಿಕಿರಿಗೆ ಅಲವತ್ತು ಕೊಳ್ಳುವುದರಿಂದ ಏನೂ ಉಪಯೋಗವಿಲ್ಲ . ಅಜ್ಜನ ಕಾಲದ ಐಡಿಯಾಗಳನ್ನು ಬಿಟ್ಟು , ತಲೆಗಷ್ಟು ಕೆಲಸ ಕೊಡಿ. ಮೇಲೆ ಬರುತ್ತೀರಿ.
ಕನ್ಯಾ : ಗೆಳೆಯರೊಂದಿಗೆ ಕುಟುಂಬದ ವಿಷಯಗಳನ್ನು ಚರ್ಚಿಸುವ ನಿಮ್ಮ ಇರಾದೆ ಸರಿಯಲ್ಲ . ಮನೆಯ ವಿಷಯಗಳು ಮನೆಯಲ್ಲಿಯೇ ಬಗೆಹರಿಯಬೇಕು. ಸಮಾಧಾನ ಚಿತ್ತರಾಗಿರಿ.
ತುಲಾ : ದೇಶ ಸುತ್ತಿ ಕೋಶ ಓದುವ ದಿನ. ಉನ್ನತ ಶಿಕ್ಷಣದಲ್ಲಿ ಭಾರೀ ಯಶಸ್ಸು . ಈ ಎಲ್ಲವೂ ವೃತ್ತಿಯಲ್ಲಿನ ಬಡ್ತಿಗೆ ಮೆಟ್ಟಿಲಾಗಲಿವೆ.
ವೃಶ್ಚಿಕ : ಚಟುವಟಿಕೆಗಳನ್ನು ಮಾರ್ಪಡಿಸಿಕೊಳ್ಳಲು ಸರಿಯಾದ ದಿನ. ಮನರಂಜನೆ ಈ ಸಂಜೆಯ ಮೋಹಕಗೊಳಿಸಲಿದೆ. ರಂಗಾಗುವಾಗ ಮನಸ್ಸು ನಿಯಂತ್ರಣದಲ್ಲಿರಲಿ.
ಧನಸ್ಸು : ಸಂಗಾತಿಯಾಂದಿಗೆ ವಿರಸವೇ? ನಮ್ಮಲ್ಲಿ ಬನ್ನಿ - ಜಾಹೀರಾತುಗಳನ್ನು ನಂಬಿ ಕೈ ಸುಟ್ಟುಕೊಳ್ಳಬೇಡಿ. ಎಲ್ಲರ ಮನೆಯ ಕಾವಲಿಯೂ ಕಪ್ಪೇ ಎಂದು ಅರಿತರೆ ನಿಮ್ಮ ಚಿಂತೆ ಖತಂ.
ಮಕರ : ಮನಸ್ಸನ್ನು ಹಗುರಾಗಿಸಿಕೊಳ್ಳುವುದಕ್ಕಾಗಿ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಅತಿಥಿಗಳು ಮನೆತುಂಬುವ ಹೊತ್ತು . ಜೇಬಿನ ಬಗ್ಗೆ ನಿಗಾ ಅಗತ್ಯ.
ಕುಂಭ : ಭವಿಷ್ಯದ ಬಗ್ಗೆ ಇಂದೇ ಯೋಚಿಸುವ ನಿಮ್ಮ ಮನೋಭಾವ ಒಳ್ಳೆಯದು. ಶಂಕೆ ಇಲ್ಲದೆ ಉಳಿತಾಯ ಯೋಜನೆಯಲ್ಲಿ ತೊಡಗಿಸಿಕೊಳ್ಳಿ.
ಮೀನ : ಜಂಜಡದ ದಿನಚರಿಯಲ್ಲಿ ಕಳಕೊಂಡಿರುವ ನೆಮ್ಮದಿಯನ್ನು ಪಡೆಯಲು ಧ್ಯಾನ ಮಾಡುವುದು ಒಳ್ಳೆಯದು. ಬಹಳ ದಿನಗಳ ನಂತರ ಕುಟುಂಬದೊಂದಿಗೆ ಸುಂದರ ಸಂಜೆ ಕಳೆಯುತ್ತೀರಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications