Get Updates
Get notified of breaking news, exclusive insights, and must-see stories!

ಭಾನುವಾರ ನಗರದಲ್ಲಿ ನಡೆಯಬೇಕಿದ್ದ ನೆಡುಮಾರನ್‌ ಸನ್ಮಾನ ರದ್ದು

Nedumaranಬೆಂಗಳೂರು : ಅಗ್ನಿ ಬಳಗ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ತಮಿಳು ರಾಷ್ಟ್ರೀಯವಾದಿ ಚಳವಳಿ ನಾಯಕ ಪಿ. ನೆಡುಮಾರನ್‌ ಸನ್ಮಾನ ಸಮಾರಂಭ ಹಠಾತ್‌ ರದ್ದಾಗಿದೆ. ಸನ್ಮಾನಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ವ್ಯಕ್ತವಾದ ವಿರೋಧದ ಹಿನ್ನೆಲೆಯಲ್ಲಿ ಮನನೊಂದ ನೆಡುಮಾರನ್‌, ಸನ್ಮಾನ ಸಮಾರಂಭದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದರಿಂದ ಈ ಕಾರ್ಯಕ್ರಮ ರದ್ದು ಪಡಿಸಲಾಗಿದೆ.

ವೀರಪ್ಪನ್‌ ಒತ್ತೆಯಿಂದ ವರನಟ ರಾಜ್‌ಕುಮಾರ್‌ ಅವರನ್ನು ಸುರಕ್ಷಿತವಾಗಿ ಬಿಡಿಸಿಕೊಂಡು ಬಂದ ನೆಡುಮಾರನ್‌ ಅವರನ್ನು ಸನ್ಮಾನಿಸಲು ಸಂಘಟಕರು ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಸಾಗರ ಸಂಗಮ ಎಂಬ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಜ್‌ ದಂಪತಿಗಳೂ ಸಮ್ಮತಿಸಿದ್ದರು.

ಬದಲಾದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಶನಿವಾರ ನಗರದಲ್ಲಿ ಏರ್ಪಡಿಸಿದ್ದ ರಾಷ್ಟ್ರದ ಹಿತಕ್ಕಾಗಿ ರಾಜ್ಯಗಳ ಸ್ವಾಯತ್ತತೆ ವಿಷಯ ಕುರಿತ ವಿಚಾರ ಸಂಕಿರಣವನ್ನೂ ಮುಂದೂಡಲಾಗಿದೆ. ಈ ವಿಷಯವನ್ನು ಅಗ್ನಿ ಪತ್ರಿಕೆಯ ಸಂಪಾದಕ ಶ್ರೀಧರ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪೊಲೀಸ್‌ ಅನುಮತಿ ನಿರಾಕರಣೆ : ಕನ್ನಡ ಪರ ಸಂಘಟನೆಗಳು ನೆಡುಮಾರನ್‌ ಸನ್ಮಾನಕ್ಕೆ ವಿರೋಧ ವ್ಯಕ್ತ ಪಡಿಸಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಬರಬಹುದೆಂಬ ಕಾರಣದಿಂದ ಈ ಸಮಾರಂಭ ನಡೆಸಲು ಅನುಮತಿ ನಿರಾಕರಿಸುವಂತೆ ಕೋರಿ ಸ್ಥಳೀಯ ಪೊಲೀಸರು ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಎಂದೂ ಗೊತ್ತಾಗಿದೆ.

ಮಡಿಯಾಳ್‌ - ರಾಜ್‌ ಭೇಟಿ: ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದ ಡಾ. ರಾಜ್‌ಕುಮಾರ್‌ ಅವರ ಮನೆಗೆ ತೆರಳಿದ ರಾಜ್ಯದ ಸಚಿವರು ಹಾಗೂ ಪೊಲೀಸ್‌ ಕಮೀಷನರ್‌ ಮಡಿಯಾಳ್‌ ಬಹುಕಾಲ ಮಾತುಕತೆ ನಡೆಸಿ ಹೊರಬಂದ ಬೆನ್ನಲ್ಲೇ ಕಾರ್ಯಕ್ರಮ ಮುಂದೂಡಿಕೆಯಾದಯ - ರದ್ದಾದ ವಿಷಯ ಹೊರಬಿದ್ದಿದೆ.

ಕೃಷ್ಣ - ಕರುಣಾನಿಧಿ ಮಾತುಕತೆ: ಈ ಮಧ್ಯೆ ಮುಖ್ಯಮಂತ್ರಿ ಕೃಷ್ಣ ಅವರು, ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರೊಂದಿಗೆ ಮಾತುಕತೆ ನಡೆಸಿ, ಭಾನುವಾರ ನಗರದಲ್ಲಿ ನಡೆಯುವ ಸನ್ಮಾನ ಸಮಾರಂಭದಲ್ಲಿ ನೆಡುಮಾರನ್‌ ಪಾಲ್ಗೊಳ್ಳದಂತೆ ಮನವೊಲಿಸಿ ಎಂದು ಕೋರಿದ್ದರು ಎಂದೂ ಮೂಲಗಳಿಂದ ತಿಳಿದುಬಂದಿದೆ.

ಈ ಇಬ್ಬರು ಮುಖ್ಯಮಂತ್ರಿಗಳ ಮಾತುಕತೆಯ ಫಲಶ್ರುತಿಯಿಂದಾಗಿ ನೆಡುಮಾರನ್‌ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದರು ಎನ್ನಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+