Get Updates
Get notified of breaking news, exclusive insights, and must-see stories!

ದ್ವಿದಳವಾಗಿದ್ದ ದಳ ಬಳಗಳ ವಿಲೀನಕ್ಕೆ ಹೆಗಡೆ ಹಸಿರು ನಿಶಾನೆ

ಬೆಂಗಳೂರು: ಇಬ್ಭಾಗವಾಗಿದ್ದ ಜನತಾದಳದ ಉಭಯ ಬಣಗಳ ವಿಲೀನಕ್ಕೆ ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಶುಕ್ರವಾರ ಹಸಿರು ನಿಶಾನೆ ತೋರಿದ್ದಾರೆ. ಇದರಿಂದಾಗಿ ಈ ವರೆಗೆ ಇದ್ದ ತೊಡಕು ನಿವಾರಣೆಯಾಗಿ ವಿಲೀನ ಪ್ರಕ್ರಿಯೆ ಸುಗಮವಾಗುವ ಹಂತ ತಲುಪಿದೆ.

ಪಕ್ಷದ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರ ಒತ್ತಡಕ್ಕೆ ಮಣಿದ ಹೆಗಡೆ ಅವರು, ಕೆಲವು ಷರತ್ತುಗಳನ್ನು ವಿಧಿಸಿ ವಿಲೀನಕ್ಕೆ ಸಹಮತ ಸೂಚಿಸಿದ್ದಾರೆ. ಶುಕ್ರವಾರ ಹೆಗಡೆ ಅವರ ನಿವಾಸದಲ್ಲಿ ನಡೆದ ದಳ (ಯು) ಮುಖಂಡರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಅಧಿಕೃತವಾದ ನಿರ್ಣಯ ಹಾಗೂ ಪ್ರಕಟಣೆ ಶನಿವಾರ ನಡೆಯಲಿರುವ ಸಂಯುಕ್ತ ಜನತಾದಳದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹೊರಬೀಳಲಿದೆ.

ಶುಕ್ರವಾರ ನಡೆದ ಸಭೆಯಲ್ಲಿ ಪಕ್ಷದ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಹಿರಿಯ ಮುಖಂಡರು ದೀರ್ಘಕಾಲ ಚರ್ಚೆ ನಡೆಸಿ, ವಿಲೀನಕ್ಕೆ ಕೊನೆಗೂ ಹೆಗಡೆ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು. ಸಂಜೆ 6ಕ್ಕೆ ಆರಂಭವಾದ ಸಭೆ ಸುಮಾರು ಎರಡೂವರೆ ಗಂಟೆಗಳಿಗೂ ಹೆಚ್ಚು ಕಾಲ ನಡೆಯಿತು. ಈ ನಿರ್ಧಾರದಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿದ್ದ ವಿಲೀನದ ಮಾತುಕತೆಗೆ ಮಹತ್ವದ ಚಾಲನೆ ದೊರಕಿದೆ.

ಸಭೆಯಲ್ಲಿ ಪಕ್ಷದ ಅಧ್ಯಕ್ಷ ಬೈರೇಗೌಡ, ನಾಯಕರುಗಳಾದ ಪಿ.ಜಿ.ಆರ್‌. ಸಿಂಧ್ಯಾ, ಬಚ್ಚೇಗೌಡ, ಎಂ.ಪಿ. ಪ್ರಕಾಶ್‌, ನಾಡಗೌಡ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು. ಆರಂಭದಲ್ಲಿ ಹೆಗಡೆ ಅವರು ದಳ ವಿಭಜನೆಗೆ ಮುನ್ನ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಅವರ ಮಕ್ಕಳಿಂದ ಆದ ಕಿರುಕುಳಗಳ ಬಗ್ಗೆ ವಿವರಿಸಿ, ಇಷ್ಟೆಲ್ಲಾ ನರಕಯಾತನೆ ಅನುಭವಿಸಿಯೂ ನಾವು ಮತ್ತೆ ಒಂದಾಗಬೇಕೆ? ನೀವು ಬೇಕಾದರೆ ಒಂದಾಗಿ ನಾನು ಒಬ್ಬಂಟಿಯಾಗೇ ಹೋರಾಡುತ್ತೇನೆ ಎಂದೂ ಪಟ್ಟು ಹಿಡಿದಿದ್ದರು.

ಆದರೆ, ದಳ (ಯು) ಮುಖಂಡರು ಪಕ್ಷದ ಭವಿಷ್ಯ ಹಾಗೂ ಪರ್ಯಾಯ ರಾಜಕೀಯ ಶಕ್ತಿಯ ಬಲವರ್ಧನೆಯ ದೃಷ್ಟಿಯಿಂದ ವಿಲೀನ ಅನಿವಾರ್ಯ ಎಂದು ಹೆಗಡೆ ಅವರ ಮನವೊಲೀಸಿದರು ಎಂದು ತಿಳಿದುಬಂದಿದೆ. ದಿವಂಗತ ಜೆ.ಎಚ್‌. ಪಟೇಲರ ಕೊನೆಯ ಆಸೆ ನೆರವೇರಿಸಲು, ವಿಲೀನಕ್ಕೆ ಕೊನೆಗೂ ಹೆಗಡೆ ಅವರು ಸಮ್ಮತಿಸಿದ ಹಿನ್ನೆಲೆಯಲ್ಲಿ ಏಟ್ರಿಯಾ ಹೊಟೆಲ್‌ನಲ್ಲಿ ಪಕ್ಷದ ಮುಖಂಡರು ಸಂತಸದ ಭೋಜನಕೂಟ ನಡೆಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+