ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ 15 ನೇ ಟೆಸ್ಟ್‌ ಗೆಲುವಿಗೆ ಆಸ್ಟ್ರೇಲಿಯಾಕ್ಕೆ 128 ರನ್‌ ಗುರಿ

By Staff
|
Google Oneindia Kannada News

ಸಿಡ್ನಿ : ಗೆಲುವಿನ ಅಲೆಯಲ್ಲಿರುವ ಆಸ್ಟ್ರೇಲಿಯಾ ತಂಡಕ್ಕೆ ಸತತ 15 ನೇ ಟೆಸ್ಟ್‌ ಕ್ರಿಕೆಟ್‌ ಗೆಲುವನ್ನು ದಾಖಲಿಸಲು ಇನ್ನು 128 ರನ್‌ಗಳು ಸಾಕು. ಕೈಯ್ಯಲ್ಲಿನ್ನೂ 8 ವಿಕೆಟ್‌ಗಳಿವೆ.

ಮೂರನೇ ದಿನದ ಕೊನೆಗೆ 1 ವಿಕೆಟ್‌ ನಷ್ಟಕ್ಕೆ 98 ರನ್‌ ಗಳಿಸಿದ್ದ ವಿಂಡೀಸ್‌, ಶುಕ್ರವಾರದ ಆಟದಲ್ಲಿ 352 ರನ್‌ಗಳಿಗೆ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಲಾರಾ ನೆರವಿಲ್ಲದೆ ವಿಂಡೀಸ್‌ 350 ರ ಗುರಿಯನ್ನು ಮುಟ್ಟಿದ್ದು ಎರಡನೇ ಇನಿಂಗ್ಸ್‌ನ ವಿಶೇಷ. ಗುರುವಾರ 45 ರನ್‌ ಗಳಿಸಿ ಔಟಾಗದೆ ಉಳಿದಿದ್ದ ಕ್ಯಾಂಬೆಲ್‌ ಇಂದು ತಮ್ಮ ಮೊತ್ತವನ್ನು 54 ಕ್ಕೆ ಉಬ್ಬಿಸಿ ಔಟಾದರು. ಲಾರಾ 28 ಕ್ಕೆ ಬಲಿಯಾದರೆ, ನಾಯಕ ಆ್ಯಡಂಸ್‌ 5 ಕ್ಕೆ ಔಟಾಗಿ ಮತ್ತೊಮ್ಮೆ ನಿರಾಶೆ ಮೂಡಿಸಿದರು. ವಿಂಡೀಸ್‌ಗೆ ಹೋರಾಟದ ಮೊತ್ತವನ್ನು ಗಳಿಸಿಕೊಟ್ಟಿದ್ದು , ಆಸ್ಟ್ರೇಲಿಯಾದ ಎಲ್ಲಾ ಬೌಲರ್‌ಗಳನ್ನು ಗೋಳು ಹೊಯ್ದುಕೊಂಡ ಶರವಣ್‌(51), ಜೇಕಬ್ಸ್‌ (62) ಹಾಗೂ ನಾಗಮುತ್ತು (68) ಅವರ ಕೆಚ್ಚಿನ ಆಟ.

ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ ಪಡೆದಿದ್ದ ಮಿಲ್ಲರ್‌ 2 ನೇ ಇನಿಂಗ್ಸ್‌ನಲ್ಲಿ 4 ವಿಕೆಟ್‌ ಗಿಟ್ಟಿಸಿದರು. ಉಳಿದಂತೆ ಮೆಕ್‌ಗ್ರಾತ್‌ 3, ಗಿಲೆಸ್ಪಿ 2 ಹಾಗೂ ಮಾರ್ಕ್‌ ವಾ 1 ವಿಕೆಟ್‌ ಗಳಿಸಿದರು.

ಮೊದಲ ಇನಿಂಗ್ಸ್‌ನಲ್ಲಿ 180 ರನ್‌ ಮುನ್ನಡೆ ಸಾಧಿಸಿ, ಗೆಲುವಿಗಾಗಿ 172 ರನ್‌ಗಳ ಗುರಿಯಾಂದಿಗೆ ಎರಡನೇ ಇನಿಂಗ್ಸ್‌ನಲ್ಲಿ ಮೈದಾನಕ್ಕಿದ ಆಸ್ಟ್ರೇಲಿಯಾ ಆರಂಭದಲ್ಲೇ ಆಘಾತ ಎದುರಿಸಿತು. ತಂಡದ ಮೊತ್ತ 5 ರನ್‌ಗಳಾಗಿದ್ದಾಗ ಹೇಡನ್‌ರನ್ನು (ಸ್ಟುವರ್ಟ್‌ಗೆ) ಕಳೆದುಕೊಂಡ ಕಾಂಗರೂ ಪಡೆ 38 ರ ಮೊತ್ತದಲ್ಲಿ ಲ್ಯಾಂಗರ್‌(ವಾಲ್ಷ್‌ ಗೆ 494ನೇ ಬಲಿ) ಅವರನ್ನು ಕಳೆದುಕೊಂಡಿತು. ದಿನದಾಟ ಮುಗಿದಾಗ 18 ರನ್‌ ಗಳಿಸಿರುವ ಸ್ಲೇಟರ್‌ ಹಾಗೂ 2 ರನ್‌ ಗಳಿಸಿರುವ ಮಾರ್ಕ್‌ ವಾ ತಂಡದ ಮೊತ್ತವನ್ನು 44 ರನ್‌ಗಳಿಗೆ ತಂದಿದ್ದರು.

ಉಳಿದಿರುವ ಐದನೇ ದಿನದ ಆಟದಲ್ಲಿ 128 ರನ್‌ಗಳೊಳಗೆ ಆಸ್ಟ್ರೇಲಿಯಾದ ಎಲ್ಲಾ ವಿಕೆಟ್‌ಗಳನ್ನು ಕೀಳಲು ಸಾಧ್ಯವಾದರೆ ವೆಸ್ಟಿಂಡೀಸ್‌ ಕ್ಲೀನ್‌ ಸ್ವೀಪ್‌ ಅವಮಾನದಿಂದ ಪಾರಾಗಬಹುದು. ಆದರೆ, ಕಾಂಗರೂ ಬ್ಯಾಟ್ಸ್‌ಮನ್‌ಗಳ ಅತ್ಯುತ್ತಮ ಫಾರಂ ಗಮನಿಸಿದರೆ ಅದು ಅಸಾಧ್ಯ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X