ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಪತ್ರೆಯ ಹಾಸಿಗೆಯಲ್ಲಿ ಪ್ರಪಂಚದ ಎತ್ತರದ ಮಹಿಳೆ!

By Staff
|
Google Oneindia Kannada News

ಇಂಡಿಯಾನಪೊಲಿಸ್‌ : ಮನುಷ್ಯರ ನಡುವಿನ ಮಹಡಿಮರ ಸಂತೋಷ್‌ ಉದ್ಯೋಗಕ್ಕಾಗಿ ಬೆಂಗಳೂರಿನಲ್ಲಿ ವಿಧಾನಸೌಧದ ಮೆಟ್ಟಿಲು ಹತ್ತಿಳಿದು ಕೊನೆಗೆ ಒಂದು ಉದ್ಯೋಗ ಗಿಟ್ಟಿಸಿಕೊಂಡದ್ದನ್ನು ನೀವು ಓದಿದ್ದೀರಿ. ಇಲ್ಲಿನ ಕಥೆ ವಿಶ್ವದ ಅತ್ಯಂತ ಎತ್ತರದ ಮಹಿಳೆಯದ್ದು . ಈಕೆಯ ಹೆಸರು ಸ್ಯಾಂಡಿ ಅಲೆನ್‌. 45 ರ ವಯಸ್ಸಿನ ಹೆಣ್ಣು ಮಗಳು. 232 ಸೆಂಮೀ (7 ಅಡಿ 7.25 ಇಂಚು) ಎತ್ತರವಿರುವ ಅಲೆನ್‌ ತನ್ನ ದಾಖಲೆ ಎತ್ತರಕ್ಕಾಗಿ ಗಿನ್ನೆಸ್‌ ಪುಸ್ತಕದಲ್ಲೂ ಸ್ಥಾನ ಪಡೆದಿದ್ದಾಳೆ.

ದಾಖಲೆ ನೆಮ್ಮದಿಯನ್ನು ಕಟ್ಟಿಕೊಡುವುದಿಲ್ಲ ಎನ್ನುವುದಕ್ಕೆ ಅಲೆನ್‌ ಸಾಕ್ಷಿ . ಸದ್ಯಕ್ಕೆ ಆಕೆ ಹಾಸಿಗೆಯಿಂದ ಏಳುವಂತಿಲ್ಲ . ಆಕೆಯ ಕಾಲುಗಳಲ್ಲಿನ ಸ್ನಾಯುಗಳು ಜಡ್ಡಿನಿಂದ ಮೊಂಡು ಕೂತಿವೆ. ಫಿಸಿಯೋಥೆರಪಿ ಚಿಕಿತ್ಸೆ ಮೂಲಕ ಆಕೆಗೆ ಸುಧಾರಿಸಿಕೊಳ್ಳುವ ಆಸೆ. ಸಮಸ್ಯೆ ಹಣಕಾಸಿನದ್ದು .

ವಿಶ್ವ ಪ್ರಸಿದ್ಧ ಗಾಯಕ, ಎಲುಬಿಲ್ಲದ ಮನುಷ್ಯ ಮೈಕೆಲ್‌ ಜಾಕ್ಸನ್‌ರನ್ನು ಚಿಕಿತ್ಸೆಗೆ ನೆರವು ಒದಗಿಸುವಂತೆ ಅಲೆನ್‌ ಮನ ವಿ ಮಾಡಿದ್ದಾಳೆ. ಈ ಕುರಿತ ಮನವಿ ನ್ಯಾಶನಲ್‌ ಎನ್‌ಕ್ವೆ ೖರರ್‌ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಹಿಂದೊಮ್ಮೆ ಅಲೆನ್‌ ಗಿನ್ನೆಸ್‌ ಮ್ಯೂಸಿಯಂನಲ್ಲಿ ಮೈಕೆಲ್‌ ಜಾಕ್ಸನ್‌ರನ್ನು ಭೇಟಿಯಾಗಿದ್ದಳು. ಈ ಕುರಿತು ಅಲೆನ್‌ಳ ವಕ್ತಾರ ಜಾನ್‌ ಕ್ಲೀಯ್‌ಮನ್‌ ಇಂಡಿಯಾನಪೊಲಿಸ್‌ ಸ್ಟಾರ್‌ಗೆ ತಿಳಿಸಿದ್ದಾರೆ. ಪತ್ರಿಕೆಗೆ ಸಂದರ್ಶನ ನೀಡಲು ಅಲೆನ್‌ರನ್ನು ಒಪ್ಪಿಸಿರುವ ಕ್ಲೀಯ್‌ಮನ್‌, ಅಲೆನ್‌ ದೊಡ್ಡ ಮಾತುಗಾರ್ತಿ ಹಾಗೂ ಆತ್ಮಾಭಿಮಾನದವಳು, ಆಕೆಗೆ ಸದ್ಯಕ್ಕೆ ಬೇಕಾಗಿರುವುದು ಸಹಾಯವೇ ಹೊರತು ದೊಡ್ಡ ಔದಾರ್ಯವೇನೂ ಅಲ್ಲ ಎಂದಿದ್ದಾರೆ.

ಅಲೆನ್‌ ಹಾಸಿಗೆ ಹಿಡಿದದ್ದು ಕಳೆದ ಫೆಬ್ರವರಿಯಲ್ಲಿ . ನರ ದೌರ್ಬಲ್ಯದಿಂದ ಆಸ್ಪತ್ರೆ ಸೇರುವ ಮುನ್ನ ಆಕೆ ಟೀವಿಯ ಟಾಕ್‌ ಶೋವೊಂದರಲ್ಲಿ ಭಾಗವಹಿಸಿದ್ದರು. ಅನಾರೋಗ್ಯ ಇದೇ ಮೊದಲೇನಲ್ಲ . 21 ವರ್ಷದವಳಿದ್ದಾಗಲೇ, ಪಿಟ್ಯುಟರಿ ಗ್ರಂಥಿ ತೊಂದರೆಯಿಂದ ಬಳಲಿದ್ದಳು. ಆಗ ಅಸ್ವಾಭಾವಿಕವಾಗಿ ಬೆಳೆದಿದ್ದ ಗಡ್ಡೆಯಾಂದನ್ನು ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆದು ಹಾಕಲಾಗಿತ್ತು .

ಸದಾ ಉತ್ಸಾಹದ ಚಿಲುಮೆಯಂತಿದ್ದ ದಾಖಲೆ ಎತ್ತರದ ಅಲೆನ್‌ ಆಸ್ಪತ್ರೆಯ ಮಂಚದಲ್ಲಿ ಮಲಗಿಯೇ ಮತ್ತೆ ಹೆಜ್ಜೆ ಹಾಕುವ ಆಸೆಯನ್ನು ಹೊತ್ತಿದ್ದಾರೆ. ಆದರೆ, ಫಿಸಿಯೋಥೆರಪಿಯ ವೆಚ್ಚ ಅವರನ್ನು ಬೆಚ್ಚಿ ಬೀಳಿಸುತ್ತಿದೆ. ಮೈಕೆಲ್‌ ಜಾಕ್ಸನ್‌ ಏನಾದರೂ ನೆರವಿಗೆ ಬಂದಾರಾ ಅನ್ನುವ ನಿರೀಕ್ಷೆಯಲ್ಲಿ ಆಕೆ ಸಹಾಯಕ್ಕಾಗಿ ದನಿ ಹೊರಡಿಸಿದ್ದಾರೆ. ಅದು ಸದ್ದಿನಲ್ಲಿ ಮುಳುಗಿರುವವರಿಗೆ ಕೇಳಿಸೀತಾ?

(ರಾಯ್ಟರ್ಸ್‌ )

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X