ಜ.28 ರಿಂದ ಒಳಾಂಗಣದಲ್ಲಿ ಗಂಡಸರು ಹೆಂಗಸರ ಕ್ರಿಕೆಟ್
ಬೆಂಗಳೂರು : ಇದೇ ಮೊದಲ ಬಾರಿಗೆ ಭಾರತೀಯ ಕ್ರೀಡಾ ಪ್ರಾಧಿಕಾರದ ದಕ್ಷಿಣ ಕೇಂದ್ರದಲ್ಲಿ ಜನವರಿ 28ರಿಂದ 30ರವರೆಗೆ ಒಳಾಂಗಣ ಕ್ರಿಕೆಟ್ ಕೂಟ ನಡೆಯಲಿದೆ.
ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಸುಮಾರು 25 ತಂಡಗಳು ಟೂರ್ನಿಯಲ್ಲಿ ಸೆಣೆಸಲಿವೆ. ಕರ್ನಾಟಕ ಒಳಾಂಗಣ ಕ್ರೀಡಾ ಒಕ್ಕೂಟ ಈ ಟೂರ್ನಿಯನ್ನು ಆಯೋಜಿಸಿದೆ. ಸಂಯೋಜಕ ಸಮಿತಿ ಅಧ್ಯಕ್ಷ ಗಂಗಭೈರಯ್ಯ ಶುಕ್ರವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಒಳಾಂಗಣ ಕ್ರಿಕೆಟ್ಟನ್ನು ಜನಪ್ರಿಯಗೊಳಿಸುವುದು ಟೂರ್ನಿಯ ಉದ್ದೇಶ. ಮಾಮೂಲು ಕ್ರಿಕೆಟ್ನಂತಲ್ಲದ ಇದರಲ್ಲಿ ಪ್ರತಿ ತಂಡ 8 ಕ್ರಿಕೆಟಿಗರನ್ನು ಹೊಂದಿರುತ್ತದೆ. 33 ಅಡಿ ಉದ್ದ , 93 ಅಡಿ ಅಗಲದ ಆಯತಾಕಾರದ ಜಾಗೆಯಲ್ಲಿ ಆಟ ನಡೆಯಲಿದ್ದು, ಸುತ್ತ ಮುತ್ತ ಹಾಗೂ ಮೇಲೆ ಬಲೆ ಹಾಕಲಾಗಿರುತ್ತದೆ. ರಬ್ಬರ್ ಬಾಲನ್ನು ಟೂರ್ನಿಯಲ್ಲಿ ಬಳಸಲಾಗುತ್ತದೆ. ಚಾಂಪಿಯನ್ಷಿಪ್ನ ರೂಪುರೇಷೆ ಇನ್ನೂ ನಿರ್ಧರಿತವಾಗಿಲ್ಲ ಎಂದರು.
(ಯುಎನ್ಐ)
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications