Get Updates
Get notified of breaking news, exclusive insights, and must-see stories!

ಮೈಸೂರು ವಿಶ್ವವಿದ್ಯಾಲಯದ 81ನೇ ಘಟಿಕೋತ್ಸವ ಇಂದು

ಮೈಸೂರು : ಮೈಸೂರು ವಿಶ್ವ ವಿದ್ಯಾಲಯದ 81ನೇ ಘಟಿಕೋತ್ಸವ ಶುಕ್ರವಾರ ಇಲ್ಲಿ ನಡೆಯಲಿದೆ. ಈ ಘಟಿಕೋತ್ಸವದಲ್ಲಿ 4493 ವಿದ್ಯಾರ್ಥಿನಿಯರೂ ಸೇರಿದಂತೆ 11,459 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರ ಪಡೆಯಲಿದ್ದಾರೆ.

ಕಲೆ, ವಾಣಿಜ್ಯ, ಶಿಕ್ಷಣ, ಎಂಜಿನಿಯರಿಂಗ್‌, ವೈದ್ಯಕೀಯ , ಕಾನೂನು, ವಿಜ್ಞಾನ ಹಾಗೂ ತಂತ್ರಜ್ಞಾನ ವಿಭಾಗದಲ್ಲಿ ಪಿಎಚ್‌ಡಿ, ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ 99-00 ಸಾಲಿನಲ್ಲಿ ಅರ್ಹತೆ ಪಡೆದ ಪದವೀಧರರು ಈ ಪ್ರಮಾಣಪತ್ರಗಳನ್ನು ಪಡೆಯಲಿದ್ದಾರೆ.

ಜೆಎಸ್‌ಎಸ್‌ ಮೆಡಿಕಲ್‌ ಕಾಲೇಜಿನ ವಿದ್ಯಾರ್ಥಿನಿ ಚೋಳ್‌ಪಾಡಿ ಸೋನಿಯಾ ಕಾಮತ್‌ ಅವರು 8 ಚಿನ್ನದ ಪದಕ ಹಾಗೂ 6 ಬಹುಮಾನಗಳೊಂದಿಗೆ ಒಟ್ಟು 14 ಪ್ರಶಸ್ತಿ ಪಡೆಯುವ ಮೂಲಕ ಅತಿ ಹೆಚ್ಚು ಪ್ರಶಸ್ತಿಗೆ ಪಾತ್ರರಾದ ಗೌರವ ಪಡೆಯಲಿದ್ದಾರೆ. ಮಹಾರಾಣಿ ಕಾಲೇಜಿನ ಎಂ. ಮಂಜುಶ್ರೀ 5 ಪದಕ ಹಾಗೂ 5 ಪ್ರಶಸ್ತಿ ಪಡೆದಿದ್ದಾರೆ.

ಸ್ನಾತಕೋತ್ತರ ಪದವಿ ಸಂಸ್ಕೃತ ಮತ್ತು ಗಣಿತದಲ್ಲಿ ಶೈಲಜಾ ಎಚ್‌.ಎಸ್‌. ಮತ್ತು ರಮ್ಯಾ ರಾವ್‌ ಅವರು ಏಳು ಪದಕ ಹಾಗೂ ಎರಡು ಪ್ರಶಸ್ತಿಗಳ ಒಟ್ಟು 9 ಪುರಸ್ಕಾರಗಳನ್ನು ಪಡೆಯಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+