Get Updates
Get notified of breaking news, exclusive insights, and must-see stories!

ಬಸವಕಲ್ಯಾಣ ಬಳಿ ಮ್ಯಾಕ್ಸಿಕ್ಯಾಬ್‌ಗಳ ಮುಖಾಮುಖಿ : 5 ಸಾವು

ಬಸವಕಲ್ಯಾಣ : ಅನುಭವ ಮಂಟಪದ ವಿದ್ಯುತ್‌ಚ್ಛಕ್ತಿ ಇಲಾಖೆಯ ಪವರ್‌ ಹೌಸ್‌ ಬಳಿ ಎರಡು ಮ್ಯಾಕ್ಸಿ ಕ್ಯಾಬ್‌ಗಳ ನಡುವೆ ಸಂಭವಿಸಿದ ಮುಖಾಮುಖಿಯಲ್ಲಿ ಐದು ಜನರು ಮೃತಪಟ್ಟು ಇತರ 14 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಐವರ ಸ್ಥಿತಿ ಗಂಭೀರವಾಗಿದೆ.

ಗುರುವಾರ ಸುಮಾರು 8.30ರ ಸಮಯದಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ಹಿರನಗಾಂನ ಈಶ್ವರ ಈರಪ್ಪಾ (32), ಬಸವ ಕಲ್ಯಾಣದ ಚಂದ್ರಕಾಂತ ಶಂಕರ (45), ಹಣಮಂತ ಭೀಮಶ್ಯಾ (60) ಹಾಗೂ ಗುರುತು ಪತ್ತೆ ಆಗದ ಮತ್ತೊಬ್ಬ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದರೆ, ತೀವ್ರವಾಗಿ ಗಾಯಗೊಂಡಿದ್ದ ಖೈರುನ್ನಿಸಾ ಎನ್ನುವವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಗಾಯಾಳುಗಳನ್ನು ಗುಲ್ಬರ್ಗಾ, ಸೋಲಾಪುರ್‌ ಹಾಗೂ ಬಸವಕಲ್ಯಾಣದ ಆಸ್ಪತ್ರೆಗೆ ಸೇರಿಸಲಾಗಿದೆ. ಡೊಂಗರಗಾವ್‌ನತ್ತ ಹೊರಟಿದ್ದ ಮ್ಯಾಕ್ಸಿ ಕ್ಯಾಬ್‌ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ನ್ನು ಹಿಂದೆ ಹಾಕುವ ಯತ್ನದಲ್ಲಿ ಎದುರಿನಿಂದ ಬರುತ್ತಿದ್ದ ಮತ್ತೊಂದು ಮ್ಯಾಕ್ಸಿಕ್ಯಾಬ್‌ಗೆ ಡಿಕ್ಕಿ ಹೊಡಿಯಿತು ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಉದ್ದರಿಸಿ ಮೂಲಗಳು ತಿಳಿಸಿವೆ.

ಬಸವಕಲ್ಯಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಕೆ.ಸಿಂಗ್‌ ಅವರು ಅಪಘಾತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+