ಹತ್ತು ದಿನದ ನಂತರ ಆನೆ ಹೊಟ್ಟೆಯಿಂದ ಹೊರಬಂದ ಬೀಗದ ಕೈ
ಮೈಸೂರು : ಕೊಳ್ಳೇಗಾಲ ಮೂಲದ ದಂಪತಿ ಮಲೆ ಮಹದೇಶ್ವರ ದರ್ಶನಕ್ಕೆಂದು ಡಿ.25ರಂದು ಬೆಟ್ಟಕ್ಕೆ ಹೋಗಿದ್ದರು. ಪೂಜಾ ನಂತರ ಬೆಟ್ಟ ಹತ್ತಿ ಸುಸ್ತಾಗಿದ್ದ ದಂಪತಿ, ತೆಂಗಿನಕಾಯಿ, ಬಾಳೆಹಣ್ಣು, ಪ್ರಸಾದದ ಜತೆ ತಮ್ಮ ಮನೆಯ ಬೀಗದ ಕೈಗಳಿದ್ದ ಗೊಂಚಲನ್ನೂ ಕಟ್ಟೆಯ ಮೇಲಿಟ್ಟು ವಿಶ್ರಾಂತಿ ಪಡೆಯುತ್ತಿದ್ದರು.
ಅಲ್ಲೇ ಪಕ್ಕದಲ್ಲಿ ಗಜ ಗಾಂಭೀರ್ಯದಿಂದ ಹೋಗುತ್ತಿದ್ದ ದೇವಾಲಯದ ಗಜರಾಜ, ತನ್ನ ಸೊಂಡಿಲನ್ನೊಮ್ಮೆ ಪ್ರಸಾದದ ಚೀಲದತ್ತ ತಿರುಗಿಸಿ, ಕೀಬಂಚ್ ಸಹಿತವಾಗಿ ಹಣ್ಣು, ತೆಂಗಿನಕಾಯನ್ನೇಲ್ಲಾ ಗುಳುಂ ಮಾಡಿಬಿಟ್ಟ. ತೆಂಗಿನಕಾಯಿ, ಬಾಳೆ ಹಣ್ಣು ತಿಂದಿದ್ದರೆ ಪರವಾಗಿರಲಿಲ್ಲ, ಮನೆಯ ಬೀಗದ ಕೈ ಇಲ್ಲದೆ, ಊರಿಗೆ ಹೋಗುವುದಾದರೂ ಎಂತು? ಬಾಗಿಲು ತೆಗೆಯುವುದಾದರೂ ಎಂತು.
ವಿಧಿ ಇಲ್ಲದೆ ದಂಪತಿ ಬೆಟ್ಟದಲ್ಲೇ ಒಂದು ದಿನ ಪೂರ್ತಿ ಉಳಿದರು. ಆನೆ ಲದ್ದಿಯಲ್ಲಿ ತಮ್ಮ ಮನೆಯ ಕೀಲಿ ಕೈ ಏನಾದರೂ ಬಂದೀತೇ ಎಂದು ಕಾದರು. ಪ್ರಯೋಜನ ಆಗದಿದ್ದಾಗ, ಬಂದದಾರಿಗೆ ಸುಂಕ ಇಲ್ಲ ಎಂದು ಊರಿಗೆ ಹೊರಟರು. ಹಾಗೇ ಹೋಗಲಿಲ್ಲ ಹೋಗುವ ಮುನ್ನ, ದೇವಾಲಯದ ಆನೆ ತಮ್ಮ ಮನೆ ಬೀಗದ ಕೈ ಕದ್ದಿದೆ ಎಂದು ದೂರೂ ನೀಡಿದರು.
ಪಾಪ, ಪೊಲೀಸರು ತಾನೆ ಏನು ಮಾಡುತ್ತಾರೆ. ಕಳ್ಳ ಆನೆಯನ್ನು ಬಂಧಿಸಿದರೆ, ಅದಕ್ಕಾಗೇ ಒಂದು ದೊಡ್ಡ ಸೆರೆಮನೆ ಕಟ್ಟಿಸಬೇಕಾಗಿ ಬರುತ್ತದೆ. ಇನ್ನು ಅದಕ್ಕೆ ಊಟ ಹಾಕುವುದಾದರೂ ಹೇಗೆ? ಅವರೂ ಸುಮ್ಮನಾದರು, ದಂಪತಿ ಊರಿಗೆ ಹೊರಟರು. ಇದಾದ ಹತ್ತು ದಿನಗಳ ಬಳಿಕ ಗುರುವಾರ ಆನೆ ಹಾಕಿದ ಲದ್ದಿಯಲ್ಲಿ ಬೀಗದ ಕೈ ಗೊಂಚಲು ಹೊರಬಂತು. ಅಂತೂ ಈಗ ಆನೆ ಕಳ್ಳತನದ ಆರೋಪದಿಂದ ಮುಕ್ತವಾಯ್ತು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications