Get Updates
Get notified of breaking news, exclusive insights, and must-see stories!

ರಕ್ಷಣೆ ಪಡೆಯಲು ಇನ್‌ಫೋಸಿಸ್‌, ವಿಪ್ರೋ ಮಾಲಿಕರಿಗೆ ಮನವಿ

Narayana murthyಬೆಂಗಳೂರು : ವಿಶ್ವದ ಘನ ಶ್ರೀಮಂತರ ಸಾಲಿನಲ್ಲಿ ಸ್ಥಾನ ಪಡೆದಿರುವ ವಿಪ್ರೋ ಸಂಸ್ಥೆಯ ಮಾಲಿಕ ಹಾಗೂ ಭಾರತದ ಕುಬೇರ ಅಜೀಮ್‌ ಪ್ರೇಮ್‌ಜೀ ಹಾಗೂ ಇನ್‌ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಅವರಿಗೆ ರಕ್ಷಣೆ ಒದಗಿಸುವುದು ಸರಕಾರದ ಕರ್ತವ್ಯ ಆಗಿದ್ದು, ಸರಕಾರ ಒದಗಿಸುವ ರಕ್ಷಣೆಯನ್ನು ಒಪ್ಪಿಕೊಳ್ಳುವಂತೆ ರಾಜ್ಯ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ.

ಕನ್ನಡದ ಮೇರು ನಟ ಡಾ. ರಾಜ್‌ಕುಮಾರ್‌ ಅವರ ಅಪಹರಣ ಹಾಗೂ ಬಿಡುಗಡೆಯ ಬಳಿಕ ಪ್ರೇಮ್‌ಜೀ ಹಾಗೂ ನಾರಾಯಣ ಮೂರ್ತಿ ಅವರ ಅಪಹರಣದ ಸಾಧ್ಯತೆಗಳು ಇರಬಹುದಾದ ಹಿನ್ನೆಲೆಯಲ್ಲಿ ಸಾಫ್ಟ್‌ವೇರ್‌ ಕ್ಷೇತ್ರದ ಈ ಇಬ್ಬರು ದಿಗ್ಗಜರಿಗೆ ಝಡ್‌ ಸೆಕ್ಯೂರಿಟಿ ನೀಡಲು ಸರಕಾರ ನಿರ್ಧರಿತ್ತು. ಆದರೆ, ತಾವು ಎಲ್ಲರಂತೆ ಸರಳವಾಗಿ ಬದುಕಲಿಚ್ಛಿಸಿದ ಈ ಇಬ್ಬರೂ ಸರಕಾರಿ ರಕ್ಷಣೆಯನ್ನು ವಿನಮ್ರವಾಗಿ ನಿರಾಕರಿಸಿದ್ದರು.

ನೆಡುಮಾರನ್‌ ಸನ್ಮಾನ : ತಮಿಳು ವಿಮೋಚನಾ ಪಡೆಯ ನಾಯಕ ಹಾಗೂ ರಾಜ್‌ಕುಮಾರ್‌ ಬಿಡುಗಡೆಯಲ್ಲಿ ಪ್ರಮುಖ ಪಾತ್ರ ವಹಿಸಿದ ನೆಡುಮಾರನ್‌ ಅವರನ್ನು ಬೆಂಗಳೂರಿನಲ್ಲಿ ಸನ್ಮಾನಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, ಇದು ಸಂಪೂರ್ಣ ಖಾಸಗೀ ಕಾರ್ಯಕ್ರಮ ಆಗಿದ್ದು, ಸನ್ಮಾನ ವಿರೋಧಿಸಿ ನಡೆಸಲುದ್ದೇಶಿಸಿರುವ ಸಭೆ - ಸಮಾರಂಭಗಳನ್ನು ಕೈಬಿಡುವಂತೆ ಹಾಗೂ ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಅವರು ಮನವಿ ಮಾಡಿದ್ದಾರೆ.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+