Get Updates
Get notified of breaking news, exclusive insights, and must-see stories!

ದೇಶದ ಪ್ರ ಪ್ರಥಮ ಮಹಿಳಾ ಮಂತ್ರಿ ಸುಶೀಲಾ ನಯ್ಯರ್‌ ನಿಧನ

ವಾರ್ಧಾ : ಹಿರಿಯ ಗಾಂಧೀವಾದಿ, ದೇಶದ ಪ್ರಪ್ರಥಮ ಮಹಿಳಾ ಸಚಿವೆ ಹಾಗೂ ಮಹಾತ್ಮ ಗಾಂಧಿ ‘ಕುಟುಂಬ ವೈದ್ಯೆ’ ಸುಶೀಲಾ ನಯ್ಯರ್‌(86) ಸೇವಾಗ್ರಾಮದಲ್ಲಿ ಬುಧವಾರ ರಾತ್ರಿ ನಿಧನರಾದರು.

ಸೇವಾಗ್ರಾಮದಲ್ಲಿ ನ ಮಹಾತ್ಮ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕಿ ಹಾಗೂ ಕಸ್ತೂರ ಬಾ ಆರೋಗ್ಯ ಸಮಾಜದ ಅಧ್ಯಕ್ಷೆಯಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಸಂಪುಟದಲ್ಲಿ 1962 ರಿಂದ 67 ರವರೆಗೆ ಆರೋಗ್ಯ, ನಗರ ಮತ್ತು ಗ್ರಾಮಾಭಿವೃದ್ಧಿ ಹಾಗೂ ಕುಟುಂಬ ಯೋಜನೆ ಖಾತೆಗಳ ಸಚಿವರಾಗಿ ಅವರು ಸೇವೆ ಸಲ್ಲಿಸಿದ್ದರು. 1950 ರಿಂದ 56 ರವರೆಗೆ ದೆಹಲಿ ವಿಧಾನಸಭೆಯಲ್ಲಿ ಆರೋಗ್ಯ ಸಚಿವೆ ಹಾಗೂ ಸಭಾಧಿಪತಿಯಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು.

ಸುಶೀಲಾ ನಯ್ಯರ್‌ ಅವರು ಅನೇಕ ಪುಸ್ತಕಗಳನ್ನು ರಚಿಸಿದ್ದು , ಅವರ ಕಾರವಾಸ್‌ ಕಿ ಕಹಾನಿ ಕೃತಿ 1952 ರಲ್ಲಿ ರಾಷ್ಟ್ರಪತಿಯವರ ಪುರಸ್ಕಾರಕ್ಕೆ ಪಾತ್ರವಾಗಿತ್ತು . ಇಂಡಿಯಾ ರೆಡ್‌ಕ್ರಾಸ್‌ ಸೊಸೈಟಿ, ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಗಳ ಸ್ನಾತಕೋತ್ತರ ಕೇಂದ್ರ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿಯ ಅಧ್ಯಕ್ಷರಾಗಿಯೂ ಸುಶೀಲಾ ನಯ್ಯರ್‌ ಸೇವೆ ಸಲ್ಲಿಸಿದ್ದರು.

ಎಸ್‌.ಎಂ. ಕೃಷ್ಣ ಸಂತಾಪ : ದೇಶದ ಮೊಟ್ಟ ಮೊದಲ ಮಹಿಳಾ ಮಂತ್ರಿ ಸುಶೀಲಾ ನಯ್ಯರ್‌ ಅವರ ನಿಧನಕ್ಕೆ ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಶೋಕ ವ್ಯಕ್ತ ಪಡಿಸಿದ್ದಾರೆ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+