Get Updates
Get notified of breaking news, exclusive insights, and must-see stories!

ಸಮುದಾಯ ರೇಡಿಯೋ ಸಾಫ್ಟ್‌ವೇರ್‌ ವೃತ್ತಿಪರರು ನೀವಾಗಬೇಕೆ ?

ಫ್ರೆಡರಿಕ್‌ ನೊರೊನ್ಹ

ಬೆಂಗಳೂರು : ದೇಶಾದ್ಯಂತ ಸಮುದಾಯ ರೇಡಿಯೋ ಕೇಂದ್ರ ತೆರೆಯುವ ನಿರ್ಧಾರ, ಇದ್ದಕ್ಕಿದ್ದಂತೆ ರೇಡಿಯೋ ಪ್ರಸಾರ ಸಂಬಂಧಿತ ಸಾಫ್ಟ್‌ವೇರ್‌ ವೃತ್ತಿಪರರ ಅಗತ್ಯ ತಂದೊಡ್ಡಿದೆ.

ಈ ಅಗತ್ಯ ನೀಗಲು ಮಣಿಪಾಲ ಸಂವಹನಾ ಸಂಸ್ಥೆ (ಮಿಕ್‌) ಈಗಾಗಲೇ ಕಾರ್ಯ ಪ್ರವೃತ್ತವಾಗಿದೆ. ರೇಡಿಯೋ ತರಬೇತಿ ಸರಕುಗಳನ್ನು ಸಂಸ್ಥೆ ಕಲೆ ಹಾಕುತ್ತಿದೆ. ಉತ್ಸಾಹಿ ಯುವ ಜನರನ್ನು ವೃತ್ತಿಪರರನ್ನಾಗಿಸಲು ತರಬೇತಿ ನೀಡಲು ಉತ್ಸುಕವಾಗಿದೆ. ಒಂದು ಸಮುದಾಯವನ್ನ ಅರ್ಥ ಮಾಡಿಕೊಂಡು, ಅದಕ್ಕೆ ತಕ್ಕಂತೆ ಸ್ಪಂದಿಸುವ ಬೌದ್ಧಿಕ- ತಾಂತ್ರಿಕ ತರಬೇತಿ ನೀಡುವ ಬಗ್ಗೆ ಸಂಸ್ಥೆ ಯೋಚಿಸುತ್ತಿದೆ. ಅದನ್ನು ಮಿಕ್‌ನ ನಿರ್ದೇಶಕಿ ಲೀಲಾ ರಾವ್‌ ಮಾತುಗಳಲ್ಲೇ ಓದಿ.....

ಮಣಿಪಾಲ ಉನ್ನತ ಶಿಕ್ಷಣ (ಮಾಹೆ) ವಿಶ್ವ ವಿದ್ಯಾಲಯಕ್ಕೆ ಸೇರಿದ ‘ಮಿಕ್‌’, ಈ ಸಮುದಾಯ ರೇಡಿಯೋ ತರಬೇತಿಗಾಗಿ ಮತ್ತಷ್ಟು ಸರಕನ್ನು ಹೆಕ್ಕಲು ಬರುವ ಏಪ್ರಿಲ್‌ 15ರಿಂದ ಮೇ 25ರವರೆಗೆ ಕಮ್ಮಟ ಆಯೋಜಿಸಿದೆ. ಬ್ರಿಟನ್ನಿನ ಸೌಂಡ್‌ ವಿಷನ್‌ ಟ್ರಸ್ಟ್‌ನ ಸಹ ನಿರ್ದೇಶಕ ಕಮಲ್‌ ಪ್ರಶಾರ್‌, ಕಮ್ಮಟದಲ್ಲಿ ಸಲಹಾ ಬೋಧಕರಾಗಿ ಪಾಠ ಹೇಳಲಿದ್ದಾರೆ. ವಿಶ್ವ ಪ್ರಾದೇಶಿಕ ರೇಡಿಯೋ ಸಂಸ್ಥೆ- ಅಮಾರ್ಕ್‌ (ಎಎಂಎಆರ್‌ಸಿ) ನಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಪ್ರಶಾರ್‌, ಕಮ್ಮಟದ ಮುಖ್ಯ ಸಂಯೋಜನಾಧಿಕಾರಿ ಕೂಡ.

ಸದ್ಯಕ್ಕೆ ‘ಮಿಕ್‌’ ಯೋಗ್ಯ ಉತ್ಸಾಹಿ ಪ್ರತಿಭೆಗಳ ಹುಡುಕಾಟದಲ್ಲಿದೆ. ಸರ್ಕಾರೇತರ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ, ಸಮುದಾಯ ರೇಡಿಯೋ ತರಬೇತಿಯಲ್ಲಿ ಆಸಕ್ತಿ ಇರುವ ಯುವ ಪ್ರತಿಭೆಗಳಿಗೂ ಪ್ರಾಧಾನ್ಯ ಉಂಟು. ಶಾಲಾ ಶಿಕ್ಷಕರು, ಕಾಲೇಜು ಮತ್ತು ವಿಶ್ವ ವಿದ್ಯಾಲಯಗಳಲ್ಲಿ ಪಾಠ ಹೇಳುವ ಮಂದಿಯೂ ಕಮ್ಮಟದ ಲಾಭ ಪಡೆಯಬಹುದಾಗಿದೆ.

ಸರ್ಕಾರದ ಹಿಡಿತದಿಂದ ಸಂಪೂರ್ಣ ಮುಕ್ತವಾದ, ಯಾವುದೇ ಲಾಭ ಮಾಡುವುದಕ್ಕಾಗಿ ಅಲ್ಲದ ಸಮುದಾಯ ರೇಡಿಯೋ ಕೇಂದ್ರ ಸ್ಥಾಪನೆ ಬಗ್ಗೆ ಪ್ರಚಾರ ಕಾರ್ಯಗಳೂ ಭರದಿಂದ ಸಾಗಿವೆ. ಆಸಕ್ತ ಗುಂಪುಗಳು ಈ ಕುರಿತು ದೇಶಾದ್ಯಂತ ಜನಜಾಗೃತಿ ಮೂಡಿಸುತ್ತಿದ್ದಾರೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಹುಟ್ಟಿದ್ದ ಈ ಕನಸಿಗೆ ಈ ಹೊತ್ತು ಗರಿ ಬಂದಿದೆ.

ರಾಷ್ಟ್ರೀಯ ಪ್ರಚಾರಕರು ಡಿಸೆಂಬರ್‌ನಲ್ಲಿ ಮಾನವ ಹಕ್ಕುಗಳ ಬಗ್ಗೆ ನಡೆಸಿದ 2 ದಿನಗಳ ಸಭೆಯಲ್ಲೂ ಸಮುದಾಯ ರೇಡಿಯೋ ಕೇಂದ್ರಗಳ ಸ್ಥಾಪನೆ ಕುರಿತ ಚರ್ಚೆಗೆ ಒತ್ತು ಕೊಡಲಾಯಿತು. ಯಾವುದೇ ಮಾಧ್ಯಮದ ಸಂಪರ್ಕವಿಲ್ಲದ ಕೋಟ್ಯಂತರ ನಿರಕ್ಷರ ಕುಕ್ಷಿಗಳಿಗೆ ಸಮುದಾಯ ರೇಡಿಯೋ ಜ್ಞಾನ ವಾಹಕವಾಗಬಲ್ಲುದು ಎಂಬ ಮಾತು ಸಭೆಯಲ್ಲಿ ಕೇಳಿ ಬಂತು. ದೇಶದ ಚಳವಳಿಕಾರರು, ಎನ್‌ಜಿಓಗಳು, ಮಾನವ ಹಕ್ಕು ಆಯೋಗದ ಮಂದಿ ಪಂಚಗಣಿಯಲ್ಲಿ ನಡೆದ ಈ ಸಭೆಯಲ್ಲಿ ಭಾಗವಹಿಸಿದ್ದರು.

(ಐಎಎನ್‌ಎಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+