ಬೆಂಗಳೂರಲ್ಲಿ ವಿಶ್ವದ ಅತಿಚಿಕ್ಕ-ಹಗುರ ವಿಮಾನದ ಪರೀಕ್ಷಾ ಹಾರಾಟ
ಬೆಂಗಳೂರು : ವಿಶ್ವದ ಅತಿ ಚಿಕ್ಕ ಹಾಗೂ ಹಗುರ ಯುದ್ಧ ವಿಮಾನದ ಪರೀಕ್ಷಾರ್ಥ ಹಾರಾಟ ಗುರುವಾರ ಬೆಂಗಳೂರಲ್ಲಿ ನಡೆಯಲಿದೆ. ಗುರುವಾರ ಬೆಂಗಳೂರಿನ ಹವಾಮಾನವೂ ಅನುಕೂಲಕರವಾಗೇ ಇರುವ ಹಿನ್ನೆಲೆಯಲ್ಲಿ ಪರೀಕ್ಷಾರ್ಥ ಹಾರಾಟಕ್ಕೆ ಸಕಲ ಸಿದ್ಧತೆಗಳೂ ನಡೆಯುತ್ತಿದೆ.
ಡಾ. ಅಬ್ದುಲ್ ಕಲಾಂ ಅವರ ಕಲ್ಪನೆಯ ಕೂಸಾದ ಈ ವಿಮಾನ 15 ವರ್ಷಗಳ ಸತತ ಪರಿಶ್ರಮ ಹಾಗೂ ಸಂಶೋಧನೆಯ ಫಲವಾಗಿ ಹಾಗೂ ಸಂಪೂರ್ಣ ಸ್ವದೇಶೀ ತಂತ್ರಜ್ಞಾನದಿಂದ ಸಿದ್ಧವಾದ ವಿಮಾನ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ವಿಶ್ವದ ಈ ಅತಿ ಚಿಕ್ಕ ಯುದ್ಧ ವಿಮಾನದಲ್ಲಿ ಅಣುಬಾಂಬ್‌ಗಳೂ ಸೇರಿದಂತೆ ಏಳು ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯಬಹುದಾಗಿದೆ.
ಒಬ್ಬ ಪೈಲಟ್ ವಿನಾ ಈ ವಿಮಾನದಲ್ಲಿ ಮತ್ತಾರಿಗೂ ಜಾಗ ಇಲ್ಲ. ಈ ವಿಮಾನ ತಯಾರಿಕೆಗೆ ತಗುಲಿರುವ ವೆಚ್ಚ 2500 ಕೋಟಿ ರುಪಾಯಿಗಳು. ಈ ವಿಮಾನದ ಮತ್ತೊಂದು ವಿಶೇಷ ಇದು ಕಂಪ್ಯೂಟರ್ ನಿಯಂತ್ರಿತ ಹಾರಾಟ ವ್ಯವಸ್ಥೆಯನ್ನೂ ಹೊಂದಿದೆ.
ಶರವೇಗದಲ್ಲಿ ಆಕಾಶದತ್ತ ಹಾರುವ ಈ ವಿಮಾನ, ಅಷ್ಟೇ ವೇಗವಾಗಿ ಭೂಮಿಗೂ ಇಳಿಯುವ ಸಾಮರ್ಥ್ಯವನ್ನು ಹೊಂದಿದೆ. ಸಾಮಾನ್ಯವಾಗಿ ಇತರ ವಿಮಾನಗಳ ಹಾರಾಟಕ್ಕೆ ಕನಿಷ್ಠ ಒಂದೂಕಾಲು ಕಿ.ಮೀಟರ್ ರನ್ ವೇ ಬೇಕು. ಆದರೆ, ಈ ವಿಮಾನಕ್ಕೆ ಅತಿ ಕಡಿಮೆ ಜಾಗ ಸಾಕು ಎನ್ನುತ್ತಾರೆ ವಿಜ್ಞಾನಿಗಳು. ವಿಮಾನದ ಸ್ಪೀಡ್ ಟ್ಯಾಕ್ಸಿಂಗ್ ಪರೀಕ್ಷೆ ಪೂರ್ಣಗೊಂಡಿದ್ದು, ವಿಮಾನದ ರೆಕ್ಕೆಗಳ ಸಾಮರ್ಥ್ಯದ ಪರೀಕ್ಷೆ ಆಗಿದೆ.
ಈಗ ಸ್ವತಂತ್ರವಾಗಿ ವಿಮಾನವನ್ನು ಆಕಾಶದಲ್ಲಿ ಹಾರಿಸುವ ಅಂತಿಮ ಪರೀಕ್ಷೆಗೆ ಬೆಂಗಳೂರು ನಗರ ಸಜ್ಜಾಗಿದೆ. ಈ ವಿಮಾನ ಹಾರಾಟಕ್ಕೆ ಶುಭ ಕೋರಲು ಹಾಗೂ ಹಾರಾಟವನ್ನು ವೀಕ್ಷಿಸಲು ವಾಯುಪಡೆಯ ಮುಖ್ಯಸ್ಥರು ಹಾಗೂ ಹಿರಿಯ ಸೇನಾಧಿಕಾರಿಗಳು ಬೆಂಗಳೂರಿಗೆ ಆಗಮಿಸಿದ್ದಾರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications