Get Updates
Get notified of breaking news, exclusive insights, and must-see stories!

ಹಾರಿಸಿ ಕಿನ್ನರ ಲೋಕಕ್ಕೆ ಹೋಗಿ ಬಂದೆ - ಪೈಲಟ್‌ ಕತ್ಯಾಲ್‌

Light Combat Aircraftಇಮ್ರಾನ್‌ ಖುರೇಷಿ

ಬೆಂಗಳೂರು : ಅದೊಂದು ಕನಸಿನ ಪ್ರಯಾಣ - ಗುರುವಾರ ಬೆಳಿಗ್ಗೆ ಯಶಸ್ವಿ ಲಘು ಸಮರ ವಿಮಾನ (ಎಲ್‌ಸಿಎ) ಹಾರಾಟದ ನಂತರ ಭಾವೋದ್ರೇಕ, ರೋಮಾಂಚನದಲ್ಲಿ ಮುಳುಗಿದ್ದ ಭಾರತೀಯ ವಾಯುಪಡೆಯ ವಿಂಗ್‌ ಕಮಾಂಡರ್‌ ಕತ್ಯಾಲ್‌ ಇದಕ್ಕಿಂತ ಬೇರೇನನ್ನೂ ಹೇಳುವ ಸ್ಥಿತಿಯಲ್ಲಿರಲಿಲ್ಲ .

ವಿಶ್ವದ ಅತ್ಯಂತ ಚಿಕ್ಕ ಹಾಗೂ ಹಗುರ ಯುದ್ಧ ವಿಮಾನ ಎನ್ನಿಸಿರುವ ಒಂದೇ ಸೀಟಿನ ಎಲ್‌ಸಿಎ ಸಂಪೂರ್ಣ ಸೇವೆಗಿಳಿಯುವುದೇ ತಡ, ಅದು ಭಾರತೀಯ ವಾಯುದಳದ ಸಮರ ವಿಮಾನಗಳ ನಾಯಕನಾಗುವ ಬಗ್ಗೆ ಐಎಎಫ್‌ ಅಧಿಕಾರಿಗಳಿಗೆ ತುಂಬು ವಿಶ್ವಾಸ. 2015 ರ ಹೊತ್ತಿಗೆ ಎಲ್‌ಸಿಎ ವಾಯುಪಡೆಗೆ ಸೇರ್ಪಡೆಯಾಗುವ ನಿರೀಕ್ಷೆಯಿದೆ ಎಂದು ರಕ್ಷಣಾ ಮೂಲಗಳು ಹೇಳುತ್ತಿವೆ. ಇದು ಸಾಧ್ಯವಾದಲ್ಲಿ ಕಳೆದ ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಮಿಗ್‌(ಎಂಐಜಿ) 21 ಯುದ್ಧ ವಿಮಾನಗಳಿಗೆ ವಿಶ್ರಾಂತಿ ಸಾಧ್ಯವಾಗುತ್ತದೆ.

ಗುರುವಾರ ಬೆಳಿಗ್ಗೆ ಕತ್ಯಾಲ್‌ ಎಲ್‌ಸಿಎ ಏರಿದಾಗ ಸಮಯ 10 ಗಂಟೆ 20 ನಿಮಿಷ. ಗಂಟೆಗೆ 400 ಕಿಮೀ ವೇಗದಲ್ಲಿ ಚಿಮ್ಮಿದ ವಿಮಾನ 20 ನಿಮಿಷಗಳ ನಂತರ ಭೂಸ್ಪರ್ಶ ಮಾಡುವ ಮುನ್ನ ಬಾನಂಗಳದಲ್ಲಿ 3500 ಮೀ ಏರಿತ್ತು . ಸಾಮಾನ್ಯವಾಗಿ ಮಿರೇಜ್‌ 2000 ಫೈಟರ್‌ ಬಾಂಬರ್‌ ಚಲಾಯಿಸುವ ಕತ್ಯಾಲ್‌ ಭಾರತೀಯ ವಾಯುಪಡೆಯ (ಐಎಎಫ್‌) ಹಿರಿಯ ಪೈಲಟ್‌. ಯಶಸ್ವಿ ಹಾರಾಟದ ನಂತರ ಆತ ಎಲ್‌ಸಿಎಯಿಂದ ಹೊರಬರುವುದನ್ನೇ ಕಾಯುತ್ತಿದ್ದ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌, ಕತ್ಯಾಲ್‌ರನ್ನು ಅಭಿನಂದಿಸಿದ ಮೊದಲಿಗರಾದರು. ಆ ನಂತರದ ಪಾಳಿ, ಎಲ್‌ಸಿಎ ಕಾರ್ಯ ಕ್ಷಮತೆಯನ್ನು ಹತ್ತಿರದಿಂದ ವೀಕ್ಷಿಸಲು ಮಿರೇಜ್‌ 2000 ನಲ್ಲಿ ಎಲ್‌ಸಿಎಯನ್ನು ಹಿಂಬಾಲಿಸಿದ್ದ ಏರ್‌ ಚೀಫ್‌ ಮಾರ್ಷಲ್‌ ಎ.ವೈ. ಟಿಪ್ನಿಸ್‌ ಹಾಗೂ ಇತರ ಐಎಎಫ್‌ನ ಉನ್ನತ ಅಧಿಕಾರಿಗಳದ್ದು .

ಏಳು ವೆಪನ್‌ ಸ್ಟೇಷನ್‌ಗಳನ್ನು ಹೊತ್ತೊಯ್ಯಬಲ್ಲ ಈ ಫೈಟರ್‌ ಗಾಳಿಯಲ್ಲಿದ್ದಾಗಲೇ ಮರು ಇಂಧನ ಪೂರೈಸಿಕೊಳ್ಳಬಲ್ಲದು. ಕಡಿಮೆ ಜಾಗೆಯಿದ್ದಾಗಲೂ ಸುರಕ್ಷಿತವಾಗಿ ಇಳಿಯಬಲ್ಲದು ಎಂದು ಮೂಲಗಳು ತಿಳಿಸಿವೆ.

ಎಲ್‌ಸಿಎಯ ಪರಿಕಲ್ಪನೆ ಸಾಧ್ಯವಾದದ್ದು 1968 ರಲ್ಲಿ . ಆದರೆ ಕಾರ್ಯರೂಪಕ್ಕೆ ಚಾಲನೆ ಸಿಕ್ಕಿದ್ದ್ದು 1983 ರಲ್ಲಿ . ಅನೇಕ ಅಡೆತಡೆಗಳನ್ನು ದಾಟಿಕೊಂಡು ಮೈದಾಳಿರುವ ಎಲ್‌ಸಿಎ ಇಂದು ಪೂರ್ಣ ರೂಪದಲ್ಲಿ ನಮ್ಮ ಮುಂದಿದೆ. ಅದರ ಅಭಿವೃದ್ಧಿಗಾಗಿ ಸುಮಾರು 30 ಬಿಲಿಯನ್‌ ರುಪಾಯಿ ಖರ್ಚಾಗಿದೆ.

ಗುರುವಾರ ಗಗನಕ್ಕೇರಿ ಯಶಸ್ವಿ ಹಾರಾಟ ನಡೆಸಿದ ಎಲ್‌ಸಿಎ ಭೂಸ್ಪರ್ಶ ಮಾಡಿದ್ದೇ ತಡ, ಯಶಸ್ಸಿಗಾಗಿ ದುಡಿದಿದ್ದ ಅನೇಕರ ಎದೆಗಳು ಸಾರ್ಥಕ್ಯದಿಂದ ಭಾರವಾದವು. ನೆರೆದಿದ್ದ ಎನ್‌ಡಿಎ ಅಧಿಕಾರಿಗಳ ಹರ್ಷೋದ್ಗಾರಗಳು ಎಲ್‌ಸಿಎ ಸಾಗಿ ಬಂದ ಹಾದಿಯುದ್ದವನ್ನೂ ತುಂಬಿದವು. ಅರ್ಥಾತ್‌ ಅದೊಂದು ಅಮೃತ ಘಳಿಗೆ.

(ಐಎಎನ್‌ಎಸ್‌)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+