Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ಭಾವನಾತ್ಮಕ ಹಾಗೂ ವಾಸ್ತವಿಕ ಜಗತ್ತುಗಳ ನಡುವೆ ಸಮತೋಲನ ತಪ್ಪದಂತೆ ನೋಡಿಕೊಳ್ಳಿ. ಸ್ವಲ್ಪ ಹೆಚ್ಚು ಕಮ್ಮಿಯಾದರೆ ಹಳ್ಳವನ್ನು ನಾವೇ ತೋಡಿಕೊಂಡಂತಾಗುತ್ತದೆ.

ವೃಷಭ :ಜವಾಬ್ದಾರಿಗೆ ಬೆನ್ನು ತೋರಿಸುವ ನಿಮ್ಮ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ . ಒಲ್ಲದೆ ತೊಡಗಿಕೊಳ್ಳುವ ಈ ಕೆಲಸಗಳು ನಿಮ್ಮ ಇಮೇಜನ್ನು ಹೆಚ್ಚಿಸುತ್ತವೆ.

ಮಿಥುನ : ಸಂಗಾತಿಯಾಂದಿಗೆ ಸಮಸ್ಯೆಗಳನ್ನು ಚರ್ಚಿಸಿ. ಆಕೆ ನಿಮ್ಮ ಕಷ್ಟದ ಹೊತ್ತಿನಲ್ಲಿ ವಹಿಸುವ ಸಂಯಮ, ತೋರುವ ಪ್ರೌಢತೆಗೆ ನೀವು ಬೆಚ್ಚಿ ಬೀಳುವುದೊಂದೇ ಬಾಕಿ.

ಕಟಕ : ಅಪರೂಪದ ದಿನ. ವೃತ್ತಿಯಲ್ಲಿ ಮಾತ್ರವಲ್ಲದೇ ಅಡಿಯಿಟ್ಟಲ್ಲೆಲ್ಲಾ ಯಶಸ್ಸನ್ನೇ ಎಡವುತ್ತೀರಿ. ಈ ದಿನದ ಮಟ್ಟಿಗೆ ನೀವು ತುಂಬಾ ಅದೃಷ್ಟವಂತರು.

ಸಿಂಹ : ನಾ ನಿನಗಾದರೆ ನೀನೆನಗೆ ಸಹಕಾರಿ ಮನೋಭಾವದಲ್ಲಿ ಜವಾಬ್ದಾರಿಯನ್ನು ಪೂರೈಸುವುದು ಒಳ್ಳೆಯದು. ಗೆಳೆಯರಿಗೆ ಸಹಾಯ ಮಾಡುವಲ್ಲಿ ಮುಕ್ತ ಮನಸ್ಸಿನವರಾಗಿರಿ.

ಕನ್ಯಾ : ಅವರು ನಿಮ್ಮನ್ನು ಗುರ್ತಿಸಬೇಕೆನ್ನುವ ನಿಮ್ಮ ಅಪೇಕ್ಷೆ ಈಡೇರಲಿದೆ. ನೀವು ಎಲ್ಲಾ ಆಕರ್ಷಣೆಯ ಕೇಂದ್ರವಾಗಿರುತ್ತೀರಿ ಹಾಗೂ ಎಲ್ಲವನ್ನೂ ನಿರ್ಧರಿಸುವ ಸ್ಥಾನದಲ್ಲಿದ್ದೀರಿ.

ತುಲಾ : ಸಂಗಾತಿ ನಿಮ್ಮ ವ್ಯಕ್ತಿತ್ವವನ್ನು ಗೌರವಿಸುತ್ತಿಲ್ಲವೆನ್ನುವ ಕೀಳರಿಮೆ ಬೇಡ. ನಿಮ್ಮ ಭಾವ ಜಗತ್ತಿಗೂ ಅವರ ಭಾವ ಜಗತ್ತಿಗೂ ತುಂಬಾ ಅಂತರವಿರುವುದರಿಂದ ಈ ವ್ಯತ್ಯಾಸವನ್ನು ಸಹಿಸಿಕೊಳ್ಳುವುದು ಅನಿವಾರ್ಯ.

ವೃಶ್ಚಿಕ : ಕುಟುಂಬದ ಚಟುವಟಿಕೆಗಳಲ್ಲೇ ಈ ಹೊತ್ತು ವ್ಯಸ್ತರಾಗಿರುತ್ತೀರಿ. ಬಗೆ ಹರಿಯಲಾಗದೆ ಕಾಲ ಬಳ್ಳಿಯಾಗಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಿದು ಸಕಾಲ.

ಧನಸ್ಸು : ನಿಮಗೆ ಸಹಾಯ ಮಾಡಲೆಂದೇ ಸಾಲುಗಟ್ಟಿ ನಿಂತಿರುವವರ ಸಂಖ್ಯೆ ಸಾಕಷ್ಟಿದೆ. ಸಹಾಯ ಪಡೆಯುವ ಮುನ್ನ ಅದರಲ್ಲೂ ವಿರುದ್ಧ ಲಿಂಗಿಗಳಿಂದ ಮತ್ತೊಮ್ಮೆ ಯೋಚಿಸಿ.

ಮಕರ : ಕೈ ಮೀರಿದ ಘಟನೆಗಳಿಗಾಗಿ ಕೊರಗುವುದು ಬೇಡ. ನಿಮ್ಮ ಅಂತರ್ವಾಣಿಯ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ಇಷ್ಟ ದೈವವನ್ನು ಪ್ರಾರ್ಥಿಸಿ.

ಕುಂಭ : ನಿಮ್ಮ ನಿಲುವುಗಳನ್ನು ಇತರರು ಒಪ್ಪಲಿಲ್ಲವೆಂದು ನೈತಿಕವಾಗಿ ಅಧೀರರಾಗುವುದು ಬೇಡ. ವಿಚಾರಗಳು ಪ್ರಬಲವಾದ್ದರಿಂದ ಒಂದಲ್ಲಾ ಒಂದು ದಿನ ನಿಮ್ಮ ವರ್ತುಲದೊಳಗೆ ಅವರು ಪ್ರವೇಶಿಸುವುದು ನಿಶ್ಚಿತ.

ಮೀನ : ಹೊಸ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಳ್ಳುವ ಮುನ್ನಾ ಕಾಯ್ದು ನೋಡುವುದೊಳ್ಳೆಯದು. ಭಾವನಾತ್ಮಕ ನಿರ್ಧಾರಗಳಿಂದ ನಷ್ಟವಾಗುವ ಸಂಭವಗಳಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+