ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಘು ಸಮರ ವಿಮಾನ ಪರೀಕ್ಷಾರ್ಥ ಹಾರಾಟದ ಪ್ರಚಂಡ ಯಶಸ್ಸು

By Staff
|
Google Oneindia Kannada News

Light Combat Aircraftಬೆಂಗಳೂರು : ಸ್ವದೇಶೀಯವಾಗಿ ಸಿದ್ಧವಾದ ವಿಶ್ವದ ಅತಿ ಚಿಕ್ಕ ಹಾಗೂ ಅತ್ಯಂತ ಹಗುರ ಸಮರ ವಿಮಾನದ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ. ಬಿಳಿಯ ಬಣ್ಣದ ಈ ಹಗುರ ವಿಮಾನ ಇಲ್ಲಿನ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಮುಗಿಲಿನತ್ತ ಜಿಗಿದು 20 ನಿಮಿಷಗಳ ಯಶಸ್ವೀ ಹಾರಾಟದ ನಂತರ ಸುರಕ್ಷಿತವಾಗಿ ಧರೆಗಿಳಿಯಿತು.

ಈ ವಿಮಾನದೊಂದಿಗೆ ಎರಡು ಮಿರೇಜ್‌ 2000 ವಿಮಾನಗಳೂ ಹಾರಾಟ ನಡೆಸಿದವು. ಗುರುವಾರ ಅನುಕೂಲಕರವಾಗಿದ್ದ ಹದ ಬಿಸಿಲಿನ ವಾತಾವರಣದಲ್ಲಿ ಬೆಳಗ್ಗೆ 10.20ಕ್ಕೆ ಬಾನಿನತ್ತ ಹಾರಿದ ಈ ಲಘು ಯುದ್ಧ ವಿಮಾನ 10.40ರವರೆಗೆ ಬಾನಂಗಳದಲ್ಲಿ ಅಡ್ಡಾಡಿ ಸುರಕ್ಷಿತವಾಗಿ ಧರೆಗಿಳಿಯಿತು.

ಕೇಂದ್ರ ರಕ್ಷಣಾ ಸಚಿವ ಜಾರ್ಜ್‌ ಫೆರ್ನಾಂಡಿಸ್‌ ಅವರು ಏರ್‌ ಮಾರ್ಷಲ್‌ ಎ.ವೈ. ಪಿಫ್ನಿಸ್‌ ಅವರೊಂದಿಗೆ ಮಿರೇಜ್‌ ವಿಮಾನದಲ್ಲಿ ಕುಳಿತು ಬಹು ಹತ್ತಿರದಿಂದ ಈ ಲಘು ಸಮರ ವಿಮಾನದ ಹಾರಟವನ್ನು ವೀಕ್ಷಿಸಿದರು. ಕೇಂದ್ರ ಸರಕಾರದ ವೈಜ್ಞಾನಿಕ ಸಲಹೆಗಾರರಾದ ಡಾ. ಎ.ಪಿ.ಜೆ. ಅಬ್ದುಲ್‌ ಕಲಾಂ ಅವರೂ ಕೂಡ ಹಲವು ವಿಜ್ಞಾನಿಗಳೊಂದಿಗೆ ಪ್ರಪ್ರಥಮ ಲಘು ಸಮರ ವಿಮಾನದ ಹಾರಟವನ್ನು ಕಣ್ಣಾರೆ ಕಂಡರು.

ಆದರೆ, ಈ ಯೋಗ ಮಾಧ್ಯಮ ಪ್ರತಿನಿಧಿಗಳಿಗೆ ದೊರಕಲಿಲ್ಲ. ವಿಡಿಯೋ ಕ್ಯಾಮರಾಗಳನ್ನು ಹೊತ್ತ ದೂರದರ್ಶನ ಚಾನೆಲ್‌ಗಳ ವರದಿಗಾರರು, ಛಾಯಾಗ್ರಾಹಕರು ದೂರದಿಂದಲೇ ಈ ಸಮರ ವಿಮಾನ ವಿಶ್ವದ ಹೊಸ ಮೈಲಿಗಲ್ಲಾದ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಬೇಕಾಯಿತು. ಸಮರ ವಿಮಾನವು ಅದ್ಭುತವಾಗಿ ಮೇಲೇರಿ ಅಷ್ಟೇ ಆಕರ್ಷಕವಾಗಿ ನೆಲಕ್ಕಿಳಿಯಿತು. ಈ ಸಾಧನೆಗೆ ರಾಷ್ಟ್ರದ ವಿವಿಧ ಕ್ಷೇತ್ರಗಳ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ವಿಮಾನದ ಬಗ್ಗೆ : 8.2 ಮೀಟರ್‌ ರೆಕ್ಕೆಗಳನ್ನು ಹೊಂದಿರುವ ಈ ವಿಮಾನದ ಉದ್ದ 13.2 ಮೀಟರ್‌ಗಳು. ಎತ್ತರ 4.4 ಮೀಟರ್‌ ಆದರೆ, ತೂಕ ಕೇವಲ 8.5 ಟನ್‌ಗಳು. ಈ ವಿಮಾನದ ಶಸ್ತ್ರಾಸ್ತ್ರ ಹೊರುವ ಸಾಮರ್ಥ್ಯ ನಾಲ್ಕು ಟನ್‌ಗಳಷ್ಟು. ವಿಶ್ವದಲ್ಲಿ ಈ ವಿಮಾನಕ್ಕೆ ಸರಿಸಾಟಿ ಎನ್ನುವುದಿದ್ದರೆ ಅದು ಸ್ವೀಡನ್‌ನ ಎಸ್‌ಎಎಬಿ ಮಿಲಿಟರಿಯ ಗ್ರಿಪ್ಪಿನ್‌ ನಿರ್ಮಿತ ಜೆಎಎಸ್‌ -39.
(ಯು.ಎನ್‌.ಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X