‘ಸಿಲಿಕಾನ್ ಸ್ಟೇಟ್’ : ರಫ್ತಿನಲ್ಲಿ ಮುಂದೆ, ಶಿಕ್ಷಣದಲ್ಲಿ ಹಿಂದೆ
ಬೆಂಗಳೂರು : ಮಾಹಿತಿ ತಂತ್ರಜ್ಞಾನದ ಹೆಸರು ಬಂದಾಗಲೆಲ್ಲ ಕರ್ನಾಟಕದ ಹೆಸರನ್ನು ಪ್ರಸ್ತಾಪಿಸದೆ ಮುಂದೆ ಸಾಗುವಂತೆಯೇ ಇಲ್ಲ . ಭಾರತದ ಸಿಲಿಕಾನ್ ಕಣಿವೆ ಅನ್ನುವ ಹೆಗ್ಗಳಿಕೆ ರಾಜ್ಯದ ರಾಜಧಾನಿಯದ್ದು . ಇನ್ನು ಸಾಫ್ಟ್‌ವೇರ್ ರಫ್ತಿನಲ್ಲೂ ಕರ್ನಾಟಕ ದೇಶದಲ್ಲೇ ಮುಂದು. ಅದೂ ಅಷ್ಟಿಷ್ಟಲ್ಲ , ಒಟ್ಟು ರಫ್ತಿನ ಮೂರನೇ ಒಂದು ಪಾಲು ರಾಜ್ಯದ್ದು . ಇದೆಲ್ಲಾ ಸರಿ, ಆದರೆ ಐಟಿ ಶಿಕ್ಷಣದಲ್ಲಿ ರಾಜ್ಯದ ಸ್ಥಾನ? ಉತ್ತರ ನಮ್ಮ ನಿರೀಕ್ಷೆಯಂತಿಲ್ಲ .
ಅಂಕಿ ಅಂಶಗಳನ್ನಿಟ್ಟು ಹೇಳುವುದಾದರೆ, ಐಟಿ ಶಿಕ್ಷಣದಲ್ಲಿ ಕರ್ನಾಟಕಕ್ಕೆ ನಾಲ್ಕನೇ ಸ್ಥಾನ. ನೆರೆಯ ತಮಿಳುನಾಡು ಹಾಗೂ ಆಂಧ್ರಪ್ರದೇಶಗಳು ಕರ್ನಾಟಕಕ್ಕಿಂತ ಮುಂದಿವೆ. ಈ ಎರಡೂ ರಾಜ್ಯಗಳು ದೇಶದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಐಟಿ ಪರಿಣತರನ್ನು ರೂಪಿಸುತ್ತಿವೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ವರದಿಗಳ ಪ್ರಕಾರ, ಐಟಿ ಶಿಕ್ಷಣದ ಯಾದಿಯಲ್ಲಿ ಮೊದಲ ರ್ಯಾಂಕ್ ಗಳಿಸಿರುವ ತಮಿಳುನಾಡಿನಲ್ಲಿ ಐಟಿ ಶಿಕ್ಷಣ ನೀಡುವ 189 ಸಂಸ್ಥೆಗಳಿದ್ದರೆ, ಎರಡನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 113 ಸಂಸ್ಥೆಗಳು ಹಾಗೂ ಆಂಧ್ರ ಪ್ರದೇಶದಲ್ಲಿ 104 ಐಟಿ ಶಾಲೆಗಳಿವೆ. ಕರ್ನಾಟಕದಲ್ಲಿ ಕಲಿಕಾ ಕೇಂದ್ರಗಳ ಸಂಖ್ಯೆ 73 ಮಾತ್ರ.
ಯಾದಿಯಲ್ಲಿ ಉನ್ನತ ಕ್ರಮಾಂಕ ಗಳಿಸಿರುವ ಇತರ ರಾಜ್ಯಗಳಲ್ಲಿ ಮಧ್ಯಪ್ರದೇಶ (49 ಶಾಲೆ), ಪಶ್ಚಿಮ ಬಂಗಾಳ(20 ಶಾಲೆ), ಒರಿಸ್ಸಾ (18) ಹಾಗೂ ಗುಜರಾತ್(15) ಸೇರಿವೆ. ಆದರೆ, ಭಾರತದ ಸಂಸತ್ತಿನ ಹಣೆ ಬರಹ ನಿರ್ಧರಿಸುವ ರಾಜ್ಯವೆಂದೇ ಹೆಸರಾದ ಉತ್ತರಪ್ರದೇಶದಲ್ಲಿ ಕೇವಲ 9 ಐಟಿ ಶಾಲೆಗಳಿವೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications