Get Updates
Get notified of breaking news, exclusive insights, and must-see stories!

ನೆಡುಮಾರನ್‌ ಸನ್ಮಾನ : ಹೆಚ್ಚುತ್ತಿರುವ ಪರ-ವಿರೋಧಗಳ ಕಾವು

ಬೆಂಗಳೂರು : ತಮಿಳು ರಾಷ್ಟ್ರೀಯ ಆಂದೋಲನದ ನಾಯಕ ನೆಡುಮಾರನ್‌ ಅವರನ್ನು ಜನವರಿ 7 ರಂದು ಬೆಂಗಳೂರಿನಲ್ಲಿ ಸನ್ಮಾನಿಸಲು ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮಕ್ಕೆ ಕನ್ನಡಪರ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಸನ್ಮಾನಕ್ಕೆ ತಡೆಯಾಡ್ಡುವ ಕಾರ್ಯತಂತ್ರ ರೂಪಿಸುವ ಉದ್ದೇಶದ ಸಭೆ ಗುರುವಾರ ಶಾಸಕರ ಭವನದ ಸಭಾಂಗಣದಲ್ಲಿ ನಡೆಯಲಿದೆ.

ಕನ್ನಡ ಚಳವಳಿ ನೇತಾರ ಜಿ. ನಾರಾಯಣ ಕುಮಾರ್‌ ಈ ವಿಷಯವನ್ನು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. ನೆಡುಮಾರನ್‌ ಸನ್ಮಾನಕ್ಕೆ ಸರ್ಕಾರ ಅನುಮತಿ ನಿರಾಕರಿಸಬೇಕು ಎಂದು ಒತ್ತಾಯಿಸಿದ ಅವರು, ಕಾರ್ಯಕ್ರಮ ನಡೆಯಲು ಅವಕಾಶ ಕೊಟ್ಟರೆ ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.

ರಾಜ್‌ಕುಮಾರ್‌ ಮತ್ತು ಪಾರ್ವತಮ್ಮ ರಾಜ್‌ಕುಮಾರ್‌ ಸಮ್ಮುಖದಲ್ಲಿ ನೆಡುಮಾರನ್‌ ಸನ್ಮಾನ ಕಾರ್ಯಕ್ರಮವನ್ನು ಅಗ್ನಿ ಪತ್ರಿಕಾ ಬಳಗ ಏರ್ಪಡಿಸಿದ್ದು , ಈ ಕಾರ್ಯಕ್ರಮಕ್ಕೆ ಚಂಪಾ ಸೇರಿದಂತೆ ಹಲವು ಮಂದಿ ಕನ್ನಡ ಧುರೀಣರು ಬೆಂಬಲ ಸೂಚಿಸಿದ್ದಾರೆ. ಆದರೆ, ಇದೆಂಥ ಸನ್ಮಾನ ? ಕರ್ನಾಟಕದಲ್ಲಿ ಇಂಥ ಕಾರ್ಯಕ್ರಮಗಳೂ ನಡೆಯಬೇಕೇ ? ಎಂದು ವಿರೋಧ ವ್ಯಕ್ತಪಡಿಸುತ್ತಿರುವ ಗುಂಪುಗಳೂ ಈಗಾಗಲೇ ತೋಳೇರಿಸಿ ನಿಂತವರಂತೆ ಪತ್ರಿಕಾ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಈ ನಡುವೆ ಇನ್ನೂ ಕೆಲವು ಅನುಮಾನಗಳು ತಲೆ ಹಾಕುತ್ತಿವೆ. ...ರಾಜ್‌ಕುಮಾರ್‌ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೋ ಇಲ್ಲವೋ ಅನ್ನುವುದು ಸ್ಪಷ್ಟವಾಗಬೇಕು. ಒಂದು ವೇಳೆ ಸನ್ಮಾನ ಕಾರ್ಯಕ್ರಮದಲ್ಲಿ ರಾಜ್‌ ಪಾಲ್ಗೊಂಡರೆ ಕನ್ನಡ ಅಭಿಮಾನಿಗಳ ವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಕನ್ನಡ ಸಾಹಿತ್ಯ ಪರಿಷತ್‌ ಕೂಡ ನೆಡುಮಾರನ್‌ ಸನ್ಮಾನದ ವಿರುದ್ಧವಿದೆ ..ಇದು ನಾರಾಯಣಕುಮಾರ್‌ ವಾದ.

ಹೆಚ್ಚುತ್ತಿರುವ ವಿರೋಧ : ಕನ್ನಡ ಸಂಘರ್ಷ ಸಮಿತಿಯ ಅಧ್ಯಕ್ಷ ಕೋಡಿ ಹೊಸಹಳ್ಳಿ ರಾಮಣ್ಣ , ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಚಂದ್ರಣ್ಣ ಗೌಡ, ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಜಾಣಗೆರೆ ವೆಂಕಟರಾಮಯ್ಯ ಹಾಗೂ ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್‌ ಮುಂತಾದವರು ನೆಡುಮಾರನ್‌ರಿಗೆ ಬೆಂಗಳೂರಿನಲ್ಲಿ ಸನ್ಮಾನ ಮಾಡುವುದಕ್ಕೆ ತಮ್ಮ ವಿರೋಧ ವ್ಯಕ್ತ ಪಡಿಸಿ ಹೇಳಿಕೆಗಳನ್ನು ನೀಡಿದ್ದಾರೆ.

ಈ ನಡುವೆ ಹೇಳಿಕೆಯಾಂದನ್ನು ಬಿಡುಗಡೆ ಮಾಡಿರುವ ಕನ್ನಡ ಹೋರಾಟಗಾರ ಹಾಗೂ ಮಾಜಿ ಶಾಸಕ ವಾಟಾಳ್‌ ನಾಗರಾಜ್‌ ಅವರು, ನರಹಂತಕ ವೀರಪ್ಪನ್‌ಗೆ ಸಹಾನುಭೂತಿ ವ್ಯಕ್ತ ಪಡಿಸುತ್ತಿರುವ ನೆಡುಮಾರನ್‌ರ ಸನ್ಮಾನ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿಯನ್ನು ನಿರಾಕರಿಸಬೇಕು ಎಂದು ಒತ್ತಾಯಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಕೂಡ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸುವುದು ಸಮರ್ಥನೀಯ ಎಂದು ವಾಟಾಳ್‌ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೋಲಾರದಲ್ಲಿ ನೆಡುಮಾರನ್‌ ಪ್ರತಿಕೃತಿ ದಹನ : ಕರ್ನಾಟಕ ಹಿತರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಕಾರ್ಯಕರ್ತರು ಬುಧವಾರ ಮೆರವಣಿಗೆ ನಡೆಸುವ ಮೂಲಕ ನೆಡುಮಾರನ್‌ರಿಗೆ ಸನ್ಮಾನಿಸುವುದಕ್ಕೆ ಪ್ರತಿಭಟನೆ ವ್ಯಕ್ತ ಪಡಿಸಿದರು. ಗಾಂಧಿ ಚೌಕದಿಂದ ಪ್ರಾರಂಭವಾದ ಮೆರವಣಿಗೆ ಮೆಕ್ಕೆನೆ ಸರ್ಕಲ್‌ನಲ್ಲಿ ಕೊನೆಗೊಂಡಿತು. ನೆಡುಮಾರನ್‌ ವಿರುದ್ಧ ಘೋಷಣೆಗಳನ್ನು ಕೂಗಿದ ವೇದಿಕೆಯ ಸದಸ್ಯರು ಸರ್ಕಲ್‌ನಲ್ಲಿ ನೆಡುಮಾರನ್‌ರ ಪ್ರತಿಕೃತಿಯನ್ನು ದಹಿಸಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+