Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ಅನಿರೀಕ್ಷಿತ ಅಭ್ಯಾಗತರೊಬ್ಬರ ಆಗಮನ ನಿಮಗೆ ಭಾರೀ ಆಶ್ಚರ್ಯ ಉಂಟು ಮಾಡಲಿದೆ. ನಿಮ್ಮ ಈ ಹೊತ್ತಿನ ಅಮೂಲ್ಯ ಸಮಯ ಅವರಿಗೇ ಮೀಸಲು.

ವೃಷಭ :ಅಧ್ಯಯನದಲ್ಲಿ ಮುಳುಗಿರುವ ನಿಮ್ಮ ಮನಸ್ಸಿಗೆ ಮುದವೆನಿಸುವಂಥಾ ಸಂಗತಿಗಳು ಇಂದು ಬಹಳಷ್ಟಿವೆ. ಅದರಲ್ಲಿ ಇಷ್ಟಪಾತ್ರರೊಂದಿಗೆ ಕಳೆಯುವ ಸುಂದರ ಸಂಜೆಯೂ ಒಂದು.

ಮಿಥುನ : ನೀವೇನು ಮಾಡುತ್ತಿದ್ದೀರಿ ಅನ್ನುವುದನ್ನು ನಿಮ್ಮ ಗೆಳೆಯರು ನಿಕಟವಾಗಿ ಗಮನಿಸುತ್ತಿದ್ದಾರೆ. ಗೃಹಾಧಾರಿತ ಉದ್ದಿಮೆಗಳಲ್ಲಿ ಯಶಸ್ಸಿನ ದಿನ.

ಕಟಕ : ಸಾಲ ಕೊಟ್ಟು ಸ್ನೇಹ ಕಳೆದುಕೊಳ್ಳಬಾರದು ಅನ್ನುವುದನ್ನು ನೀವು ಅರ್ಥ ಮಾಡಿಕೊಂಡಂತಿಲ್ಲ . ಹಣ ವಾಪಸ್ಸು ಬರುವುದಿಲ್ಲ ವಾದ್ದರಿಂದ ಅದರ ಯೋಚನೆ ಬಿಟ್ಟು ಬಿಡುವುದೇ ಒಳ್ಳೆಯದು.

ಸಿಂಹ : ನಿಮ್ಮ ಬಗೆಗಿರುವ ಗಾಳಿ ಸುದ್ದಿಗಳಿಗೆ ತೆರೆಯೆಳೆಯಲು ಇಂದು ಸುದಿನ. ಅಷ್ಟಕ್ಕೂ ನೀವೇನೂ ಲೋಕಹಾನಿಯಲ್ಲಿ ತೊಡಗಿಲ್ಲವಾದ್ದರಿಂದ ಸುಮ್ಮನೆ ಹಿಂಜರಿಕೆ ಬೇಡ.

ಕನ್ಯಾ : ಬರವಣಿಗೆ ಕೆಲಸದಲ್ಲಿ ಹೆಸರು, ಹಣ ಕಟ್ಟಿಟ್ಟ ಬುತ್ತಿ. ಸೃಜನಶೀಲ ಚಟುವಟಿಕೆಗಳನ್ನು ಪ್ರಾರಂಭಿಸುವುದಿದ್ದರೆ ಇಂದೇ ಪ್ರಾರಂಭಿಸಿ.

ತುಲಾ : ಸುಂದರ ರಸ ಸಂಜೆ ನಿಮ್ಮ ಪಾಲಿಗಿದೆ. ರಾತ್ರಿ ನಿಮ್ಮ ಸಂಗಾತಿಯಿಂದ ಅವಿಸ್ಮರಣೀಯ ಕೊಡುಗೆ ನಿಮಗಾಗಿ ಕಾದಿದೆ. ಮನಸ್ಸಿಗೆ ಉಲ್ಲಾಸ ತುಂಬುವ ದಿನ.

ವೃಶ್ಚಿಕ : ಕುಟುಂಬದ ವ್ಯವಹಾರಗಳಲ್ಲಿ ಅಪ ಯಶಸ್ಸು , ನೆಂಟರಿಷ್ಟರೊಂದಿಗೆ ಮನಸ್ತಾಪ. ಈ ಹೊತ್ತು ಮೌನವಾಗಿದ್ದಷ್ಟೂ ನೆಮ್ಮದಿ ನಿಮಗೆ ಹೆಚ್ಚುತ್ತದೆ.

ಧನಸ್ಸು : ಯಂತ್ರೋಪಕರಣಗಳ ರಿಪೇರಿ ಕೆಲಸದಲ್ಲಿ ಎಚ್ಚರಿಕೆ ವಹಿಸಿ. ರಸ್ತೆಯಲ್ಲಿ ಅಡ್ಡಾಡುವಾಗಲೂ ಮನಸ್ಸು ನಿಮ್ಮ ನಿಯಂತ್ರಣದಲ್ಲೇ ಇರಲಿ.

ಮಕರ : ವಾದ ಮಾಡುವುದರಿಂದ ಏನೂ ಉಪಯೋಗವಿಲ್ಲ . ಇಷ್ಟಕ್ಕೂ ನಿಮ್ಮ ಕೆಲಸವ ನೀವೇ ಮಾಡಬೇಕಾದ್ದು ಅನಿವಾರ್ಯವಾದ್ದರಿಂದ ಮಾತನಾಡುವುದು ವೇಳೆ ಹಾಳು ಅಷ್ಟೇ.

ಕುಂಭ : ಸಂಗಾತಿಯಾಂದಿಗೆ ವ್ಯವಹರಿಸುವಾಗ ವಸ್ತು ಸ್ಥಿತಿಗೆ ಗಮನ ಕೊಡಿ. ಅವರು ಹೇಳುವುದರಲ್ಲಿ ನಿಮಗೆ ನಿಲುಕಲಾಗದ ಸತ್ಯಗಳಿವೆ. ಪ್ರೀತಿಯನ್ನು ಗೆಲ್ಲಲು ಪ್ರೀತಿಯಿಂದ ಮಾತ್ರ ಸಾಧ್ಯ, ಅಲ್ಲವೇ.

ಮೀನ : ಷಾಪಿಂಗ್‌ಗೆ ಹೊರಡುವ ಮುನ್ನ ನಿಮ್ಮ ಅಗತ್ಯಗಳೇನು ಅನ್ನುವುದನ್ನು ಖಚಿತ ಪಡಿಸಿಕೊಳ್ಳಿ. ಇಲ್ಲವಾದಲ್ಲಿ ಅನಗತ್ಯ ವೆಚ್ಚಗಳಗೆ ಸಿಲುಕಿ ನಾಳೆಯ ಹಾಳು ಮಾಡಿಕೊಳ್ಳುತ್ತೀರಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+