Get Updates
Get notified of breaking news, exclusive insights, and must-see stories!

ವಿಮಾ ವ್ಯಾಪ್ತಿಗೆ ಶಾಲಾ ಮಕ್ಕಳು ಹಾಗೂ ಶಿಕ್ಷಕರು

ಮೈಸೂರು : ಶಾಲಾ ಮಕ್ಕಳು ಮತ್ತು ಶಿಕ್ಷಕರಿಗೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಾರ್ಷಿಕ 1.10 ಕೋಟಿ ರುಪಾಯಿಗಳ ಪ್ರೀಮಿಯಂನಲ್ಲಿ ವಿಮಾ ಯೋಜನೆಯನ್ನು ರಾಜ್ಯ ಸರ್ಕಾರ ಪರಿಚಯಿಸುತ್ತದೆ ಎಂದು ಶಿಕ್ಷಣ ಸಚಿವ ಎಚ್‌. ವಿಶ್ವನಾಥ್‌ ಪ್ರಕಟಿಸಿದ್ದಾರೆ.

ಒಂದರಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳು ಹಾಗೂ 2.75 ಲಕ್ಷ ಶಿಕ್ಷಕರು ವಿಮಾ ವ್ಯಾಪ್ತಿಗೆ ಒಳಪಡುತ್ತಾರೆ. ಪ್ರೀಮಿಯಂ ಹಣವನ್ನು ಸ್ವಯಂ ಸೇವಾ ಸಂಘಗಳ ಸಹಕಾರದಲ್ಲಿ ತುಂಬಲಾಗುವುದು ಎಂದು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವಿಶ್ವನಾಥ್‌ ಹೇಳಿದರು.

ಅಪಘಾತ, ಅಂಗವೈಕಲ್ಯ ಹಾಗೂ ವೈದ್ಯಕೀಯ ಚಿಕಿತ್ಸೆಯು ವಿಮಾ ವ್ಯಾಪ್ತಿಯಲ್ಲಿದ್ದು , ಸರ್ಕಾರದೊಂದಿಗೆ ರೋಟರಿ ಕ್ಲಬ್‌ ಹಾಗೂ ಶಿಕ್ಷಕರ ಕ್ಷೇಮಾಭಿವೃದ್ಧಿ ನಿಧಿಗಳು ಸಂಯುಕ್ತವಾಗಿ ಪ್ರೀಮಿಯಂ ತುಂಬುತ್ತವೆ. ಪ್ರತಿ ವಿದ್ಯಾರ್ಥಿಯಿಂದ ಒಂದು ರುಪಾಯಿ ಪ್ರೀಮಿಯಂ ಪಡೆಯಲು ವಿಮಾ ಕಂಪನಿ ಒಪ್ಪಿಗೆ ನೀಡಿದೆ ಎಂದರು.

ಹ್ಯಾಂಡ್‌ಲೂಂ ಅಭಿವೃದ್ಧಿ ಪ್ರಾಧಿಕಾರ ಪೂರೈಸಿರುವ ಸಮವಸ್ತ್ರ ಪೂರೈಕೆ ವಿವಾದಕ್ಕೆ ಸಂಬಂಧಿಸಿದಂತೆ ಸಮವಸ್ತ್ರಗಳ ಗುಣಮಟ್ಟ ನಿರ್ಣಯಕ್ಕೆ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಸಮವಸ್ತ್ರದ ಗುಣಮಟ್ಟದಲ್ಲಿ ಯಾವುದೇ ರಾಜಿಗೆ ಸರ್ಕಾರ ಸಿದ್ಧವಿಲ್ಲ ಎಂದು ವಿಶ್ವನಾಥ್‌ ಸ್ಪಷ್ಟ ಪಡಿಸಿದರು.

(ಯುಎನ್‌ಐ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+