Get Updates
Get notified of breaking news, exclusive insights, and must-see stories!

ಬೆಂಗಳೂರು ಪ್ರೆಸ್‌ ತಂದಿದೆ ನಿಮ್ಮ ಮನೆ ಗೋಡೆಗೊಂದು ಮಲ್ಲಿಗೆ

ಬೆಂಗಳೂರು : ಕನ್ನಡಿಗರ ವಿವಿಧ ಅಭಿರುಚಿಗೆ ತಕ್ಕಂತೆ ಮಲ್ಲಿಗೆ ದರ್ಶಿನಿ ಮಾಲೆಯಲ್ಲಿ ವಿವಿಧ ಬಗೆಯ ಕ್ಯಾಲೆಂಡರ್‌ಗಳನ್ನು ಕನ್ನಡ ಕ್ಯಾಲೆಂಡರ್‌ ಕ್ಷೇತ್ರದಲ್ಲಿ ಮನೆ ಮಾತಾಗಿರುವ ಬೆಂಗಳೂರು ಪ್ರೆಸ್‌ ಸಂಸ್ಥೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಕಿಶೋರ ದರ್ಶಿನಿ, ವನಿತಾ ದರ್ಶಿನಿ, ಕೃಷಿ ದರ್ಶಿನಿ, ಸಾಹಿತ್ಯ ದರ್ಶಿನಿ, ವ್ರತ ದರ್ಶಿನಿ ಹಾಗೂ ದೇವಾಲಯ ದರ್ಶಿನಿಗಳನ್ನು ಮಲ್ಲಿಗೆ ದರ್ಶಿನಿ ಮಾಲೆಯಲ್ಲಿ ಬೆಂಗಳೂರು ಪ್ರೆಸ್‌ ಪರಿಚಯಿಸಿದೆ ಎಂದು ಬೆಂಗಳೂರು ಪ್ರೆಸ್‌ನ ವ್ಯವಸ್ಥಾಪಕ ನಿರ್ದೇಶಕ ಎಚ್‌.ಆರ್‌. ಅನಂತ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿಯಾಂದು ಕ್ಯಾಲೆಂಡರ್‌ಗಳು ಆಯಾ ವಿಷಯಯಕ್ಕೆ ಸಂಬಂಧಿಸಿದಂತೆ ಲೇಖನಗಳನ್ನು ಒಳಗೊಂಡಿವೆ. ಹಿರಿಯ ವಿಷಯ ತಜ್ಞರು ಈ ಲೇಖನಗಳನ್ನು ಬರೆದಿದ್ದಾರೆ. ಡಾ.ಎಚ್‌.ಎಸ್‌. ಶ್ರೀಮತಿಯವರು ಮಹಿಳೆಯರಿಗೆ ಉಪಯುಕ್ತವಾದ ಮಾಹಿತಿಗಳನ್ನು ವನಿತಾ ದರ್ಶನದಲ್ಲಿ ಒದಗಿಸಿದ್ದಾರೆ. ಮಳೆ, ನಾಟಿ ಮುಂತಾದ ಬೇಸಾಯಕ್ಕೆ ಸಂಬಂಧಿಸಿದ ವಿಷಯಗಳನ್ನು ಕೃಷಿ ದರ್ಶನದಲ್ಲಿ ಕೃಷಿ ತಜ್ಞ ಗುಂಡಪ್ಪನವರು ನೀಡಿದ್ದಾರೆ. ಡಾ. ಮಂಗಳಾ ಪ್ರಿಯದರ್ಶಿನಿ ಮತ್ತು ಚಿ. ಶ್ರೀನಿವಾಸರಾಜು ಅವರು ಹೊಸಗನ್ನಡ ಸಾಹಿತ್ಯ ಚರಿತ್ರೆ, ಹಾಗೂ ಪ್ರಮುಖ ಬರಹಗಾರರ ಜೀವನಚಿತ್ರಗಳನ್ನು ಸಾಹಿತ್ಯದರ್ಶನದಲ್ಲಿ ಸಂಪಾದಿಸಿದ್ದಾರೆ. ದೇವಾಲಯ ದರ್ಶಿನಿಯಲ್ಲಿ ದೇವಾಲಯಗಳ ಬಗ್ಗೆ ಮಾಹಿತಿಯಿದ್ದರೆ, ಕಿಶೋರ ದರ್ಶಿನಿಯಲ್ಲಿ ಮಕ್ಕಳಿಗೆ ಕಾಮಿಕ್ಸ್‌ ಕಥೆಗಳಿವೆ. ಇನ್ನು ಎಲ್ಲಾ ವ್ರತಗಳ ಬಗೆಗಿನ ಮಾಹಿತಿ ವ್ರತ ದರ್ಶಿನಿಯಲ್ಲಿ ಲಭ್ಯ. ಅಂದಹಾಗೆ ಪ್ರತಿ ಕ್ಯಾಲೆಂಡರ್‌ನ ಬೆಲೆ 14 ರುಪಾಯಿ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+