ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ. 17ರಿಂದ ಬೆಂಗಳೂರಲ್ಲಿ ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್ಸ್‌

By Staff
|
Google Oneindia Kannada News

ಬೆಂಗಳೂರು : ಜನವರಿ 17ರಿಂದ ನಾಲ್ಕು ದಿನಗಳ ಕಾಲ ನಗರದ ಕಂಠೀರವ ಕ್ರೀಡಾಂಗಣದಲ್ಲಿ 16ನೇ ಜೂನಿಯರ್‌ ರಾಷ್ಟ್ರೀಯ ಅಥ್ಲೆಟಿಕ್‌ ಕ್ರೀಡಾ ಕೂಟ ನಡೆಯಲಿದೆ.

ರಾಜ್ಯ ಉನ್ನತ ಶಿಕ್ಷಣ ಸಚಿವ ಹಾಗೂ ಟೂರ್ನಿಯ ವ್ಯವಸ್ಥಾಪಕ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. 24 ರಾಜ್ಯಗಳ ಸುಮಾರು 2000 ಅಥ್ಲೀಟ್‌ಗಳು ಟೂರ್ನಿಯಲ್ಲಿ ಸ್ಪರ್ಧಿಸಲಿದ್ದಾರೆ. 16 ರಾಜ್ಯಗಳು ತಮ್ಮ ಪಾಲ್ಗೊಳ್ಳುವಿಕೆಯನ್ನು ಈಗಾಗಲೇ ಖಾತ್ರಿ ಪಡಿಸಿವೆ. ಮೆಕ್‌ಡೋವೆಲ್‌ ಕಿಂಗ್‌ಫಿಷರ್‌ ಟೂರ್ನಿಯ ಪ್ರಾಯೋಜಕರು.

ಮಹಿಳೆ ಮತ್ತು ಪುರುಷರ 14, 16, 18 ಹಾಗೂ 20 ವರ್ಷಗಳ ವಿಭಾಗಗಳಲ್ಲಿ ಆಟೋಟ ಸ್ಪರ್ಧೆಗಳು ನಡೆಯಲಿವೆ. ನಿಗದಿತ ವಯೋಮಿತಿಗೆ ಮೀರಿದ ಕ್ರೀಡಾರ್ಥಿಗಳು ಕಣದಲ್ಲಿ ಕಂಡು ಬಂದಲ್ಲಿ ಅಮೆಚೂರ್‌ ಅಥ್ಲೆಟಿಕ್‌ ಒಕ್ಕೂಟ ಆದೇಶಿಸಿರುವಂತೆ ವರ್ಷ ಕಾಲದ ನಿಷೇಧ ಹೇರಲಾಗುವುದು.

ಪ್ರಥಮ ಬಾರಿಗೆ ಅಂತರರಾಷ್ಟ್ರೀಯ ಮಟ್ಟದ ಸಿಂಥೆಟಿಕ್‌ ಟ್ರ್ಯಾಕ್‌ ಮೇಲೆ ಸ್ಪರ್ಧೆಗಳು ನಡೆಯಲಿದ್ದು, ಒಟ್ಟು 114 ಆಟೋಟ ಸ್ಪರ್ಧೆಗಳು ನಡೆಯಲಿವೆ. ಈ ಮೊದಲು ಶಿವಮೊಗ್ಗೆಯಲ್ಲಿ ಟೂರ್ನಿ ನಡೆಯುವುದೆಂದು ಹೇಳಲಾಗಿತ್ತು. ಆದರೆ ಅಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇರುವುದರಿಂದ ಬೆಂಗಳೂರಿಗೆ ವರ್ಗಾಯಿಸಲಾಯಿತು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X