Get Updates
Get notified of breaking news, exclusive insights, and must-see stories!

ವಾಜಪೇಯಿ ಸಹವಾಸ, ಕೇರಳ ಬೆಸ್ತರಿಗೆ ಹತ್ತು ದಿನ ಉಪವಾಸ

*ಸಾನು ಜಾರ್ಜ್‌

ಕುಮಾರಕೊಂ (ಕೇರಳ) : ಜಿಲ್ಲೆಯ ತಾಜ್‌ ರಿಟ್ರೀಟ್‌ನಲ್ಲಿ ಪ್ರಧಾನಿ ವಾಜಪೇಯಿ ವಾರ ಕಾಲ ತಂಗಿದ್ದು ರೆಸಾರ್ಟ್‌ಗೆ ಬರೋಬ್ಬರಿ 50 ಲಕ್ಷ ರುಪಾಯಿ ಲುಕ್ಸಾನಾಗಿದೆ ಎನ್ನಲಾಗಿದೆ.

ಸರಿ ಸುಮಾರು 50 ಪ್ರವಾಸಿಗರು ಇಲ್ಲಿ ನೆಲೆಸಿದರೆ ರೆಸಾರ್ಟ್‌ ಗಲ್ಲಾಗೆ 25 ಲಕ್ಷ ರುಪಾಯಿ ತುಂಬುತ್ತದೆ. ಪ್ರಧಾನಿ ಇದ್ದ ಕಾಲ ಬೇರಾರೂ ಅಲ್ಲಿ ತಂಗಿರಲಿಲ್ಲ. ಜೊತೆಗೆ ಪ್ರಧಾನಿ ಖುಷಿಗೆ ಪ್ರತಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ. ಅವರ ಊಟ- ವಸತಿ, ರಸ ಸಂಜೆಗಳು ಎಲ್ಲಕ್ಕೂ 20- 25 ಲಕ್ಷ ರುಪಾಯಿ ಖರ್ಚಾಗಿದೆ ಎಂದು ಹೊಟೇಲಿನ ಮೂಲಗಳು ಐಎಎನ್‌ಎಸ್‌ಗೆ ದೃಢಪಡಿಸಿದೆ.

ರೆಸಾರ್ಟ್‌ನಲ್ಲಿ ಪ್ರಧಾನಿ ಉಳಿದಿದ್ದ ಕಾಲ ಪ್ರವಾಸಿಗರು ಹಿಂಡು ಹಿಂಡಾಗಿ ಬರುವಂಥದ್ದು. ಅಂಥಾ ಸಮಯದಲ್ಲಿ ಪ್ರಧಾನಿ ಅಲ್ಲಿ ಉಳಿದದ್ದು 23 ಕೋಣೆಗಳ ರೆಸಾರ್ಟಿಗೆ ಲತ್ತೆ ಹೊಡೆದಿದೆಯಂತೆ. ಪ್ರಧಾನಿ ಎಲ್ಲೇ ಉಳಿಯಲಿ, ಪ್ರತಿಶತ 99 ಭಾಗ ಎಲ್ಲಾ ಕಾಂಪ್ಲಿಮೆಂಟರಿ ಟ್ರೀಟ್‌ಮೆಂಟೇ ಆಗಿರುತ್ತೆ. ಇಲ್ಲಿ ಆಗಿರೋದೂ ಅದೇ.

ಹೊಸ ವರ್ಷದ ಮೊದಲ ದಿನ, ಸೋಮವಾರ ಮಧ್ಯಾಹ್ನ 12 ಗಂಟೆಗೆ ವಾಜಪೇಯಿ ರೆಸಾರ್ಟ್‌ ಖಾಲಿ ಮಾಡಿದರು. 3 ಗಂಟೆ ಹೊತ್ತಿಗೆ ರೆಸಾರ್ಟ್‌ನ 23 ಕೋಣೆಗಳೂ ಭರ್ತಿ ! ತಾಜ್‌ನ ಜನರಲ್‌ ಮ್ಯಾನೇಜರ್‌ ಶಂಕರ್‌ ಮೆನನ್‌ ಅವರನ್ನು, ವಾಜಪೇಯಿ ಅವರಿಗೆ ರೆಸಾರ್ಟ್‌ ಕೊಟ್ಟದ್ದು ಉಚಿತ ಆತಿಥ್ಯವೇ ಅಥವಾ ಏನಾದರೂ ಕಾಸು ಸಿಕ್ಕಿತೆ ಅಂತ ಕೇಳಿದರೆ ಮುಗುಮ್ಮಾಗುತ್ತಾರೆ.

ಪ್ರಧಾನಿ ಬಂದದ್ದು ನಮಗೇನೋ ಖುಷಿಯಾಯಿತು. ಆದರೆ ಪೊಲೀಸರು ತೀರಾ ಅತಿಯಾಗಿ ನಡೆದುಕೊಂಡರು. ತಾಜ್‌ ಮೇಲೆ ನಮ್ಮ ನೆರಳೂ ಬೀಳುವಂತಿರಲಿಲ್ಲ. ವೆಂಬನಾಡ್‌ ಸರೋವರದಲ್ಲಿ ಕಂಟ್ರಿ ಬೋಟ್‌ ನಡೆಸಲೂ ತಡೆ ಹಾಕಿದರು. ಯಾಕೆಂದರೆ ತಾಜ್‌ ಇರೋದು ಸರೋವರದ ದಂಡೆಯಲ್ಲೇ. ಈಗ ಒಂದು ರೀತಿ ನಿರ್ಲಿಪ್ತತೆ ಅನ್ನುತ್ತಾರೆ ಕೂಲಿ ಕರ್ಮಿ ಪಪ್ಪಚನ್‌.

ಮೀನುಗಾರಿಕೆ ಬಂದ್‌, ರೇಟು ಗಗನಕ್ಕೆ

ಹತ್ತು ದಿನಗಳಿಂದ ನಮ್ಮನ್ನು ಮೀನು ಹಿಡಿಯಲೂ ಬಿಡುತ್ತಿರಲಿಲ್ಲ. ಭದ್ರತಾ ಸಿಬ್ಬಂದಿ ನಮ್ಮನ್ನು ಉಗ್ರರೋ ಅನ್ನುವಂತೆ ನೋಡುತ್ತಿದ್ದರು. 10 ದಿನಗಳಿಂದ ಬರಿಗೈಲಿ ಕೂತಿದ್ದ ನಮ್ಮ ಕಷ್ಟ ಆಕಾಶದಷ್ಟಾಗಿದೆ. ಈಗ ಓವರ್‌ ಟೈಂ ಕೆಲಸ ಮಾಡಿ ಕಳಕೊಂಡದ್ದನ್ನ ಗಿಟ್ಟಿಸಿಕೊಳ್ಬೇಕಾಗಿದೆ ಅನ್ನುತ್ತಾರೆ ಮೀನುಗಾರ ಕೆ.ಜಾನಿ.

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 90 ರುಪಾಯಿ ಇರುವ ಬೆಲೆ ಕಳೆದ ವಾರ 170 ರುಪಾಯಿಗಳಷ್ಟು ಏರಿತ್ತು. ಇನ್ನೂ ಒಂದೆರಡು ವಾರ ಬೆಲೆ 150 ರುಪಾಯಿ ಆಸುಪಾಸಲ್ಲೇ ಇರುತ್ತೆ. ನಾವು ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕೆಲಸ ಮಾಡಬೇಕು ಎಂದು ಜಾನ್‌ ಹೇಳುವಾಗ ಅವರಲ್ಲಿನ ಅಳಲು- ಆತಂಕ ಹೊಳೆಯಾಗುತ್ತದೆ.

ಪ್ರಧಾನಿಯ ಮಜಾ ದಿನಗಳನ್ನೇ ತೆರೆದಿಟ್ಟಿರುವ ಮಾಧ್ಯಮಗಳಿಗೆ ಸಾಮಾನ್ಯ ಜನ ತೆತ್ತಿರುವ ಈ ದೊಡ್ಡ ದಂಡ, ತಾಜ್‌ ಅನುಭವಿಸಿರುವ ನಷ್ಟ ಕಣ್ಣಿಗೇ ಬಿದ್ದಿಲ್ಲ.

(ಐಎಎನ್‌ಎಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+