ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಆರ್ಥಿಕ ಸಮಸ್ಯೆ ನಿಮ್ಮನ್ನು ಕಾಡುತ್ತಿದೆ. ಭೂ ವ್ಯವಹಾರದಲ್ಲಿ ಅಸಮಾಧಾನ. ವ್ಯಾಪಾರದಲ್ಲಿ ಹಿನ್ನೆಡೆ. ಕುಲದೇವರ ಹರಕೆ ತೀರಿಸಿದರೆ ಶುಭ.ವೃಷಭ :ಅನಾರೋಗ್ಯ ಎಲ್ಲ ಲವಲವಿಕೆಯನ್ನೂ ಮಂಕಾಗಿಸಿದೆ. ಊಟ ಬಲ್ಲವನಿಗೆ ರೋಗವಿಲ್ಲ ಎಂಬುದನ್ನು ಮರೆಯದಿದ್ದರೆ ಒಳ್ಳೆಯದು.
ಮಿಥುನ : ಹೊಸ ವರ್ಷದ ಸಂಭ್ರಮಕ್ಕೆ ಹಣಕಾಸಿನ ಮುಗ್ಗಟ್ಟು. ಇದು ಕ್ಷಣಿಕ. ದೂರಾಲೋಚನೆಯಿಂದ ಕಾರ್ಯಸಿದ್ಧಿ. ಯೋಚನಾ ಲಹರಿ ಬದಲಿಸಿ ಮುಂದಡಿ ಇಡಿ.
ಕಟಕ : ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಇದೆ. ದೂರ ಪ್ರಯಾಣ ಸಂಭವ. ಮಿತ್ರರಿಂದ ಕಾರ್ಯಕ್ಷೇತ್ರದಲ್ಲಿ ಅನುಕೂಲ. ವಿದೇಶ ಪ್ರವಾಸ ಯೋಗ.
ಸಿಂಹ : ತಾಂತ್ರಿಕ ಕ್ಷೇತ್ರದಲ್ಲಿ ಭಾರಿ ಯಶಸ್ಸು. ಇಷ್ಟು ದಿನ ಮಾಡಿದ ಕೆಲಸಕ್ಕೆ ಸೂಕ್ತ ಪ್ರತಿಫಲ ದೊರಕುವ ಕಾಲ. ನಿಮ್ಮಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರಹೊಮ್ಮಿಸಿದರೆ, ಪ್ರಶಸ್ತಿ - ಪಾರಿತೋಷಕ ಕಟ್ಟಿಟ್ಟಬುತ್ತಿ.
ಕನ್ಯಾ : ಸಂಗಾತಿಯಿಂದ ಆನಂದವಿದೆ. ಪ್ರಣಯಿಗಳಿಗೆ ಆನಂದವೋ ಆನಂದ. ಅನಿರೀಕ್ಷಿತ ಅತಿಥಿಗಳ ಆಗಮನ. ಹೊಸ ಯೋಚನೆಗಳಿಗೆ ಯಶಸ್ಸು.
ತುಲಾ : ಕುಳಿತಲ್ಲೇ ಹೊಸ ಸಾಮ್ರಾಜ್ಯ ಕಟ್ಟುವ ಯೋಚನೆ ಬಿಟ್ಟುಬಿಡಿ. ಕೈ ಕೆಸರಾದರೆ ಬಾಯಿ ಮೊಸರು. ಶ್ರಮ ಪಟ್ಟರೆ ತಕ್ಕ ಪ್ರತಿಫಲ ದೊರಕೀತು. ಸಮಯದ ಬೊಂಬೆಯಾಗಿದ್ದೀರಿ. ಮೈಕೊಡವಿ ಮೇಲೇಳಿ.
ವೃಶ್ಚಿಕ : ಕೈಗೆ ಸಿಕ್ಕದ ದ್ರಾಕ್ಷಿ ಹುಳಿ ಎನ್ನುವ ತತ್ವ ಬಿಟ್ಟು ಬಿಡಿ, ಹಾಗೆಂದು ಗಗನ ಕುಸುಮಕ್ಕೂ ಕೈಚಾಚದಿರಿ. ನಿಮ್ಮ ಇತಿ ಮಿತಿಯಲ್ಲೇ ಸಾಧನೆಯ ಮೆಟ್ಟಿಲನ್ನೇರಲು ಪ್ರಯತ್ನಿಸಿ. ಗಣಪತಿಯ ಆರಾಧನೆಯಿಂದ ಯಶಸ್ಸು.
ಧನಸ್ಸು : ಎಲ್ಲ ವ್ಯವಹಾರದಲ್ಲೂ ಅನುಕೂಲಕರ ವಾತಾವರಣ ಇದೆ. ವಿಪರೀತ ಕೆಲಸ, ಖರ್ಚು ಎಂದು ಹಿಂಜರಿಯದಿರಿ. ವ್ಯಾಪಾರಿಗಳಿಗೆ ಲಕ್ಷ್ಮೀ ಕೃಪಾಕಟಾಕ್ಷ ಇದೆ.
ಮಕರ : ಮಾನಸಿಕ ಗೊಂದಲದ ನಡುವೆಯೂ ಪ್ರಯಾಣ ಯೋಗ ಇದೆ. ಪ್ರವಾಸದಿಂದ ಲಾಭವೂ ಇದೆ. ಕೌಟುಂಬಿಕ ವ್ಯವಹಾರದಲ್ಲಿ ಜಯವಿದೆ. ಪಿತ್ರಾರ್ಜಿತ ಆಸ್ತಿ ನಿಮ್ಮದಾಗಲಿದೆ.
ಕುಂಭ : ನಿಮ್ಮ ಬುದ್ಧಿಗೆ ಬಂಗಾರದ ಬೆಲೆ ಇದೆ. ಸೂಕ್ತವಾದ ಬಳಕೆಯ ಬಗ್ಗೆ ಚಿಂತಿಸಿ. ಚಿನ್ನದ ಸೂಜಿ ಎಂದು ಕಣ್ಣು ಚುಚ್ಚಿಕೊಳ್ಳಲು ಸಾಧ್ಯವೇ? ಭೂ ವ್ಯವಹಾರದಲ್ಲಿ ಪ್ರಗತಿ.
ಮೀನ : ಹಳೆಯ ಸಮಸ್ಯೆಗಳೆಲ್ಲವೂ ಪರಿಹಾರವಾಗಲಿವೆ. ಧನಯೋಗವಿದೆ. ಬುದ್ಧಿ ಚಾತುರ್ಯದಿಂದ ಶುಭ ಫಲ. ಎಲ್ಲ ನೀವಂದುಕೊಂಡಂತೆಯೇ ನಡೆಯುತ್ತಿದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications