ಭಾರತದೊಂದಿಗೆ ಐಟಿ ಸೌಹಾರ್ದಕ್ಕೆ ಮಂಗೋಲಿಯಾ ಒತ್ತು
ಬೆಂಗಳೂರು : ಭಾರತ- ಮಂಗೋಲಿಯಾ ದ್ವಿಪಕ್ಷೀಯ ಸಹಕಾರ ಹೆಚ್ಚಿಸಲು ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೇ ನಮ್ಮ ಒತ್ತು ಎಂದು ಮಂಗೋಲಿಯಾ ಅಧ್ಯಕ್ಷ ನಾಸ್ಟಾಲ್ಜಿನ್ ಬಾಗಬಂದಿ ಮಂಗಳವಾರ ಸಾರಿ ಹೇಳಿದ್ದಾರೆ.
ಭಾರತೀಯ ಕೈಗಾರಿಕಾ ಒಕ್ಕೂಟದ ಸದಸ್ಯರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಮಾರುಕಟ್ಟೆ, ಇಂಟರ್‌ನೆಟ್ ಸೌಕರ್ಯಗಳ ವೃದ್ಧಿ ಹಾಗೂ ಹಳ್ಳಿ ಹಳ್ಳಿಗೂ ಮಾಹಿತಿ ಕೊಂಡೊಯ್ಯುವ ಸ್ಪರ್ಧಾತ್ಮಕ ವಿಷಯಗಳಲ್ಲಿ ಭಾರತ- ಮಂಗೋಲಿಯಾ ದ್ವಿಪಕ್ಷೀಯ ಸಹಕಾರ ಬಹು ಮುಖ್ಯ ಎಂದರು.
ತಮ್ಮ ದೆಹಲಿ ಭೇಟಿಯಲ್ಲಿ ಮಂಗೋಲಿಯ- ಭಾರತ ಜಂಟಿ ತಾಂತ್ರಿಕ ಕಾರ್ಯ ಸಮೂಹದ ಸ್ಥಾಪನೆಯ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಿದ್ದು, ಅಂದಿನಿಂದ ಉಭಯ ದೇಶಗಳೊಡನೆ ಸಹಕಾರ ಪ್ರಾರಂಭವಾಗಲಿದೆ. ಭಾರತದ ಮೂಲಭೂತ ಸೌಕರ್ಯಗಳ ಸಚಿವಾಲಯ ಹಾಗೂ ಮಂಗೋಲಿಯಾ ಮೂಲಭೂತ ಸೌಕರ್ಯಗಳ ಸಚಿವಾಲಯದ ನಡುವೆ ಈ ಒಡಂಬಡಿಕೆ ನಡೆಯಲಿದೆ ಎಂದು ಬಾಗಬಂದಿ ತಿಳಿಸಿದರು. ವಿಜ್ಞಾನ ಮನುಷ್ಯನ ಕೆಲಸದ ಹೊರೆ ಇಳಿಸುವುದಷ್ಟೇ ಅಲ್ಲ , ದೇಶದ ಸರ್ವತೋಮುಖ ಪ್ರಗತಿಗೆ ಕಾರಣವಾಗಬಲ್ಲ ಬಲ ವರ್ಧಿಸುತ್ತದೆ ಎಂಬ ಚಾಚಾ ನೆಹರೂ ಮಾತನ್ನು ಬಾಗಬಂದಿ ನೆನಪಿಸಿದರು.
ಮಂಗೋಲಿಯಾ- ಭಾರತ ನಡುವೆ ವಿಮಾನ ಹಾರಿಸುವ ಒಪ್ಪಂದಕ್ಕೆ ಚಾಲನೆ
ನಾಗರಿಕ ವಿಮಾನ ಯಾನ ಕುರಿತಂತೆ 1998ರಲ್ಲೇ ಉಭಯ ರಾಷ್ಟ್ರಗಳೊಡನೆ ಆಗಿರುವ ಒಪ್ಪಂದಕ್ಕೆ ಚಾಲನೆ ದೊರಕಿಸುವ ಯತ್ನ ನಡೆಯುತ್ತಿದೆ. ಮಂಗೋಲಿಯಾ- ಭಾರತ ನಡುವೆ ನೇರ ವಿಮಾನ ಯಾನ ಕಷ್ಟ ಸಾಧ್ಯವಾದರೆ, ಎರಡೂ ದೇಶಗಳೊಡನೆ ಸಂಪರ್ಕ ಕಲ್ಪಿಸುವ ರೀತಿಯಲ್ಲಿ ವಿಮಾನಗಳನ್ನು ಹಾರಿಸುವ ವ್ಯವಸ್ಥೆ ಮಾಡಲಾಗುವುದು. ರಷ್ಯಾ- ಚೀನಾಗಳೊಂದಿಗೆ ಭಾರತವನ್ನು ಸಂಪರ್ಕಿಸುವ ಕಿಂಡಿಯಾಗಿ ಮಂಗೋಲಿಯಾ ರೂಪುಗೊಳ್ಳಲಿ ಎಂಬುದೇ ನಮ್ಮ ಅಭಿಲಾಷೆ ಎಂದು ಬಾಗಬಂದಿ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೇಳಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಕೈಗಾರಿಕಾ ಸಚಿವ ಆರ್. ವಿ. ದೇಶಪಾಂಡೆ ಸಹ ಹಾಜರಿದ್ದರು.
ಬೆಂಗಳೂರಿಂದ ದೆಹಲಿಗೆ : ಎರಡು ದಿನಗಳ ತಮ್ಮ ಬೆಂಗಳೂರು ಭೇಟಿಯಲ್ಲಿ ಇಸ್ರೋ ಮತ್ತು ಭಾರತೀಯ ಟೆಕ್ ಪಾರ್ಕನ್ನು ವೀಕ್ಷಿಸಿದ ಬಾಗಬಂದಿ, ನಂತರ ದೆಹಲಿಗೆ ತೆರಳಿದರು. ರಾಜ್ಯಪಾಲರಾದ ವಿ.ಎಸ್.ರಮಾದೇವಿ, ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ನಗರದ ಮೇಯರ್ ಪ್ರೇಮಾ ಕಾರ್ಯಪ್ಪ , ರಾಜ್ಯ ಮುಖ್ಯ ಕಾರ್ಯದರ್ಶಿ ತೆರೆಸಾ ಭಟ್ಟಾಚಾರ್ಯ ಹಾಗೂ ಮತ್ತಿತರ ಉನ್ನತ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಅವರನ್ನು ಬೀಳ್ಕೊಟ್ಟರು.
(ಯುಎನ್‌ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications