ಹದನೂರಿನ ಗ್ರಾಮಸ್ಥರು ವಿದ್ಯುತ್ ಬೆಳಕಿನಲ್ಲಿ ಉಂಡು 25 ದಿನಗಳಾದವು
ಹದನೂರು : ಹೊಸ ವರ್ಷ ಬೆಳಕನ್ನು ಹೊತ್ತು ತರಬಹುದೆನ್ನುವ ಗುಲ್ಬರ್ಗಾ ಜಿಲ್ಲೆಯ ಸುರಪುರ ತಾಲ್ಲೂಕಿನ ಹದನೂರು ಗ್ರಾಮಸ್ಥರ ನಿರೀಕ್ಷೆ ನಿಜವಾಗಲಿಲ್ಲ . ನೆರೆಯ ಗ್ರಾಮಸ್ಥರು ದೀಪಾಲಂಕಾರದ ಬೆಳಕಿನಲ್ಲಿ ಸಂತೋಷ ಹಂಚಿಕೊಳ್ಳುತ್ತಿದ್ದರೆ, ಹದನೂರಿನವರು ಕಂಬಳಿ ಹೊದ್ದು ಮಲಗಿದ್ದರು. ಅಂದಹಾಗೆ ಗ್ರಾಮಸ್ಥರು ವಿದ್ಯುತ್ ಬೆಳಕಿನಲ್ಲಿ ಉಂಡು 25 ದಿನಗಳಾದವು.
ಹದನೂರು ವಿದ್ಯುತ್ ಸಂಪರ್ಕ ಕಳೆದುಕೊಂಡಿದ್ದು ಮೊನ್ನಿನ ಡಿಸೆಂಬರ್ 7ರಂದು . ಅಂದಿನಿಂದ ದೂರುಗಳನ್ನು ಹೊತ್ತೊಯ್ದು ಗ್ರಾಮಸ್ಥರು ಬಸವಳಿದಿದ್ದಾರೆ. ಈ ನಡುವೆ ಇಲಾಖೆಯ ಲೈನ್ಮನ್ಗಳು ಬಂದು ರಿಪೇರಿ ಶಾಸ್ತ್ರ ಮುಗಿಸಿ ಹೋದದ್ದೂ ಆಯಿತು. ಆದರೆ, ದೀಪ ಮಾತ್ರ ಹತ್ತಲಿಲ್ಲ . ಬದಲಿಗೆ ಸಿಡಿದವು. ಕಾರಣ ಹೈ ವೋಲ್ಟೆಜ್ ಸಮಸ್ಯೆ ಎನ್ನುತ್ತಾರೆ ಗ್ರಾಮಸ್ಥರು.
ಬಾವಿಯಲ್ಲಿ ನೀರಿದ್ದೂ ಬೆಳೆಗಳು ಒಣಗುತ್ತಿರುವುದನ್ನು ಗ್ರಾಮದ ರೈತ ಅಸಹಾಯಕತೆಯಿಂದ ನೋಡುತ್ತಿದ್ದಾನೆ. ಗಂಜಿ ಬೇಯಿಸಲು ಬೇಕಾದ ಹಿಟ್ಟಿಗಾಗಿ ಗಿರಣಿ ಹುಡುಕಿಕೊಂಡು ಐದಾರು ಮೈಲಿ ನಡೆಯುತ್ತಿದ್ದಾಳೆ ಗ್ರಾಮದ ಗರತಿ. ಇದಾವುದರ ಪರಿವೆಯೂ ಇಲ್ಲದೆ ಶಹಾಪುರ ಕ್ಷೇತ್ರದ ಶಾಸಕರು ನಿರುಮ್ಮಳವಾಗಿದ್ದಾರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications