ಕ್ಯಾಂಬೆಲ್- ಹಿಂಡ್ಸ್ ಉತ್ತಮ ಜೊತೆಯಾಟ : ವಿಂಡೀಸ್ 256 ಕ್ಕೆ 9
ಸಿಡ್ನಿ : ಮಂಗಳವಾರ ಪ್ರಾರಂಭವಾದ ಆಸ್ಟ್ರೇಲಿಯಾ ವಿರುದ್ಧದ ಐದನೇ ಹಾಗೂ ಕೊನೆಯ ಕ್ರಿಕೆಟ್ ಟೆಸ್ಟ್ ಪಂದ್ಯದ ಮೊದಲ ದಿನದ ಕೊನೆಗೆ ವೆಸ್ಟಿಂಡೀಸ್ ತಂಡ 9 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿತ್ತು .
ಪ್ರಸಕ್ತ ಸರಣಿಯಲ್ಲಿ ಮೊದಲ ಬಾರಿಗೆ ಅತ್ಯುತ್ತಮ ಆರಂಭ ಕಂಡ ವಿಂಡೀಸ್ ತಂಡದ ಭಾರೀ ಮೊತ್ತದ ನಿರೀಕ್ಷೆ ಯನ್ನು ಆಸ್ಟ್ರೇಲಿಯಾದ ಲೆಗ್ಸ್ಪಿನ್ನರ್ ಸ್ಟುವರ್ಟ್ ಮೆಕ್ಗಿಲ್ ಹುಸಿಗೊಳಿಸಿದರು. ವಿಂಡೀಸ್ನ ಪ್ರಮುಖ ಬ್ಯಾಟ್ಸ್ಮನ್ಗಳನ್ನು ಪೆವಿಲಿಯನ್ಗೆ ವಾಪಸ್ಸು ಕಳುಹಿಸಿದ ಅವರು 92 ರನ್ಗೆ 7 ವಿಕೆಟ್ ಗಳಿಸಿ ಜೀವಮಾನದ ಅತ್ಯುತ್ತಮ ಸಾಧನೆ ಮಾಡಿದರು. ಮೆಕ್ಗ್ರಾಥ್ ಹಾಗೂ ಮಿಲ್ಲರ್ ಉಳಿದ 2 ವಿಕೆಟ್ಗಳನ್ನು ಹಂಚಿಕೊಂಡರು.
ಕ್ಯಾಂಬೆಲ್ ಹಾಗೂ ಹಿಂಡ್ಸ್ ವಿಂಡೀಸ್ ತಂಡಕ್ಕೆ ಅತ್ಯುತ್ತಮ ಆರಂಭ ಒದಗಿಸಿದರು. ಕಾಂಗರೂ ಪಡೆಯ ವಿಶ್ವಖ್ಯಾತ ಬೌಲಿಂಗ್ ಪಡೆಯನ್ನು ಚಿಂದಿ ಮಾಡಿದ ಆರಂಭಿಕರು ಮೊದಲ ವಿಕೆಟ್ ಜೊತೆಯಾಟಕ್ಕೆ 147 ರನ್ ಕಲೆ ಹಾಕಿದರು. ಟೂರ್ನಿಯಲ್ಲಿ ಸಿಂಗಲ್ ಡಿಜಿಟ್ ರಾಜರಾಗಿದ್ದ ಕ್ಯಾಂಬೆಲ್ 79 ರನ್ ಗಳಿಸಿದರೆ, ಹಿಂಡ್ಸ್ 70 ರನ್ ಗಳಿಸಿ ಔಟಾದರು. ಉಳಿದಂತೆ 35 ರನ್ ಗಳಿಸಿದ ಲಾರಾ ಹಾಗೂ 28 ರನ್ ಗಳಿಸಿದ ಸ್ಯಾಮ್ಯುಯಲ್ಸ್ ತಂಡ 250 ರ ಗಡಿ ದಾಟಲು ನೆರವಾದರು. ದಿನದ ಕೊನೆಗೆ ಇನ್ನೂ ಖಾತೆ ಆರಂಭಿಸದ ವಾಲ್ಷ್ ಹಾಗೂ ಸ್ಟುವರ್ಟ್ ಕ್ರೀಸ್ನಲ್ಲಿದ್ದರು.
(ರಾಯ್ಟರ್ಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications