ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜರ್ಮನ್‌ ಗ್ರೀನ್‌ಕಾರ್ಡ್‌ ಸವಲತ್ತು : ಭಾರತ ನಂಬರ್‌ 1

By Staff
|
Google Oneindia Kannada News

ಮೆಹ್ತಾ

ಬರ್ಲಿನ್‌ : ಕಳೆದ ಆಗಸ್ಟ್‌ನಿಂದ ಜಾರಿಗೆ ಬಂದಿರುವ ಜರ್ಮನಿ ಗ್ರೀನ್‌ ಕಾರ್ಡ್‌ ಸವಲತ್ತು ಪಡೆದಿರುವ ದೇಶಗಳ ಪೈಕಿ ಭಾರತದ ನಂಬರ್‌ 1. ದೇಶದ ಒಟ್ಟು 820 ಐಟಿ ಪರಿಣತರು ಈವರೆಗೆ ಈ ಸೌಕರ್ಯ ಪಡೆದಿದ್ದಾರೆ.

ವಾಸ ಮತ್ತಿತರ ಮೂಲಭೂತ ಸೌಕರ್ಯಗಳಿಗೆ ತೊಂದರೆಯಾಗದಿರಲೆಂಬ ಕಾರಣಕ್ಕೆ ಜರ್ಮನಿ ಕಳೆದ ವರ್ಷ ಆಗಸ್ಟ್‌ 1 ರಿಂದ ಜಾರಿಗೆ ತಂದ ಗ್ರೀನ್‌ ಕಾರ್ಡ್‌ ಪದ್ಧತಿ, ಕೆಲಸಕ್ಕೆ ತಕ್ಷಣಕ್ಕೆ ಸಿಗುವ ತಾತ್ಕಾಲಿಕ ಪರವಾನಗಿ. ತನ್ನ ದೇಶದಲ್ಲಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿದ್ದ ಐಟಿ ಪರಿಣತರ ಕೊರತೆ ನೀಗಿಕೊಳ್ಳಲು ಜರ್ಮನಿ ಒಡ್ಡಿದ ಗ್ರೀನ್‌ ಕಾರ್ಡ್‌ ಆಕರ್ಷಣೆ ಭಾರತದಲ್ಲಿ ಕ್ಲಿಕ್ಕಾಗಿದೆ.

ನ್ಯೂರೆಂಬರ್ಗ್‌ನಲ್ಲಿರುವ ಫೆಡರಲ್‌ ಲೇಬರ್‌ ಕಚೇರಿ ವಿದೇಶೀಯರಿಗೆ ಕೆಲಸ ಮಾಡುವ ಅನುಮತಿ ಕೊಡುವ ಜವಾಬ್ದಾರಿ ಹೊತ್ತಿದೆ. ಅದರ ಪ್ರಕಾರ, ಇದುವರೆಗೆ ಇತರೆ ದೇಶದವರಿಗಿಂತ ಹೆಚ್ಚಾಗಿ, ಭಾರತದ 820 ಐಟಿ ಪರಿಣತರು ಗ್ರೀನ್‌ ಕಾರ್ಡ್‌ ಸವಲತ್ತು ಪಡೆದಿದ್ದಾರೆ. ರಷ್ಯಾ ಹಾಗೂ ಉಕ್ರೇನ್‌ ಭಾರತದ ನಂತರದ ಸ್ಥಾನ ಹಂಚಿಕೊಂಡಿದ್ದು , ಎರಡೂ ರಾಷ್ಟ್ರಗಳ ಒಟ್ಟು 639 ಮಂದಿ ಗ್ರೀನ್‌ ಕಾರ್ಡ್‌ ಗಿಟ್ಟಿಸಿಕೊಂಡಿದ್ದಾರೆ. ಈವರೆಗೆ ವಿದೇಶೀ ಐಟಿ ಪರಿಣತರಿಗೆ ಒಟ್ಟು 4,214 ಕಾರ್ಡ್‌ಗಳನ್ನು ವಿತರಿಸಲಾಗಿದೆ.

ನಮ್ಮ ನಿರೀಕ್ಷೆ 2000ನೇ ಇಸವಿಯಲ್ಲಿ 4 ಸಾವಿರ ಗ್ರೀನ್‌ಕಾಡ್‌ ವಿತರಿಸಬೇಕೆಂದಿತ್ತು. ಆದರೆ ನಮ್ಮ ಗುರಿಯನ್ನೂ ಮೀರುವಷ್ಟು ವಿದೇಶೀ ಐಟಿ ಪರಿಣತರು ಜರ್ಮನಿಯ ಅವಕಾಶ ಉಪಯೋಗಿಸಿಕೊಳ್ಳಲು ಬಂದಿದ್ದಾರೆ. ಇನ್ನೈದು ವರ್ಷಗಳಲ್ಲಿ ಮೂರೂವರೆ ಲಕ್ಷ ಐಟಿ ತಜ್ಞರ ಅಗತ್ಯ ದೇಶಕ್ಕೆ ಬೀಳಲಿದ್ದು, ಈ ಅಗತ್ಯ ಸಂಪೂರ್ಣ ಈಡೇರಲಿದೆ ಎಂಬ ಭರವಸೆಯನ್ನು ಮೊದಲ 5 ತಿಂಗಳಲ್ಲಿ ಈ ಸವಲತ್ತಿಗೆ ದೊರೆತಿರುವ ಪ್ರತಿಕ್ರಿಯೆ ಸಾಬೀತು ಮಾಡಿದೆ ಎನ್ನುತ್ತಾರೆ ಜರ್ಮನಿಯ ಶಿಕ್ಷಣ ಸಚಿವ ಎಡೆಲ್‌ಗಾರ್ಡ್‌ ಬಲ್‌ಮನ್‌.

(ಐಎಎನ್‌ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X