ಭಾಲ್ಕಿ ಉಪ ಅಂಚೆ ಕಚೇರಿ ಡಕಾಯಿತಿ ಯತ್ನ : ಇಬ್ಬರಿಗೆ ಗುಂಡೇಟು
ಬೀದರ್ : ಜಿಲ್ಲೆಯ ಭಾಲ್ಕಿ ಉಪ ಅಂಚೆ ಕಚೇರಿಯ ಸಬ್ ಪೋಸ್ಟ್ ಮಾಸ್ಟರ್ ಅವರನ್ನು ಥಳಿಸಿ, ಪೋಸ್ಟ್ ಮಾಸ್ಟರ್ ಅವರ ಮಗ ಹಾಗೂ ಮಗಳ ಮೇಲೆ ಗುಂಡಿನ ಮಳೆಗರೆದ ಮುಸುಕುಧಾರಿ ಡಕಾಯಿತರ ತಂಡ, ಅಂಚೆ ಕಚೇರಿಯನ್ನು ದೋಚುವ ವಿಫಲಯತ್ನ ಮಾಡಿದ ಘಟನೆ ಶನಿವಾರ ಬೆಳಗ್ಗೆ ಭಾಲ್ಕಿಯಿಂದ ವರದಿಯಾಗಿದೆ.
ಶನಿವಾರ ಬೆಳಗಿನ ಜಾವ ಸುಮಾರು 2.30ರಲ್ಲಿ ಅಂಚೆ ಕಚೇರಿಗೆ ನುಗ್ಗಿದ 8 ಜನ ಡಕಾಯಿತರ ತಂಡ ಖಜಾನೆಯ ಬೀಗ ಒಡೆದು, ಬಾಗಿಲು ತೆರೆಯುವ ಪ್ರಯತ್ನದಲ್ಲಿ ವಿಫಲರಾದಾಗ, ಬೀಗದ ಕೈ ಪಡೆಯಲು ಅಂಚೆ ಕಚೇರಿಯ ಪಕ್ಕದಲ್ಲೇ ಇರುವ ಸಬ್ ಪೋಸ್ಟ್ ಮಾಸ್ಟರ್‌ಅವರ ಮನೆಗೆ ನುಗ್ಗಿ, ಸಬ್ ಪೋಸ್ಟ್ ಮಾಸ್ಟರ್ ವಿಜಯಕುಮಾರ್ ಅವರನ್ನು ಥಳಿಸಿ, ಪ್ರತಿರೋಧ ವ್ಯಕ್ತಪಡಿಸಿದ ಅವರ ಮಗ ರಾಜಶೇಖರ್ (16) ಹಾಗೂ ಮಗಳು ಮಮತಾ (12) ಇಬ್ಬರ ಮೇಲೂ ಗುಂಡಿನ ಮಳೆ ಗರೆದರು.
ಈ ದಾಳಿಯಲ್ಲಿ ಗಾಯಗೊಂಡಿರುವ ಮೂವರನ್ನು ಹೈದರಾಬಾದ್‌ನ ಆಸ್ಪತ್ರೆಗೆ ಸೇರಿಸಲಾಗಿದೆ. ಗುಂಡಿನ ಶಬ್ದ ಕೇಳಿ ಸುತ್ತಮುತ್ತಲಿನ ಜನ ಹಾಗೂ ರಾತ್ರಿ ಗಸ್ತಿನ ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆಯೇ ಡಕಾಯಿತರು ಕತ್ತಲಲ್ಲಿ ಪರಾರಿಯಾಗಿದ್ದಾರೆ. ರಾಜಶೇಖರ್‌ನ ಎರಡೂ ತೊಡೆಗಳಿಗೆ ಗುಂಡೇಟು ಬಿದ್ದಿದ್ದರೆ, ಮಮತಾಳ ಎಡಗೈಗೆ ಗುಂಡು ತಾಗಿದೆ.
ಡಕಾಯಿತರ ತಂಡದ ಬಳಿ ನಾಡಬಾಂಬ್‌ಗಳು, ನಾಡ ಪಿಸ್ತೂಲ್ ಹಾಗೂ ಮಾರಕ ಆಯುಧಗಳಿದ್ದವು ಎನ್ನಲಾಗಿದ್ದು, ಕನ್ನಡ ಮಾತನಾಡುತ್ತಿದ್ದ 8 ಜನರೂ ಮುಸುಕುಧಾರಿಗಳಾಗಿದ್ದರು. ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಎಸ್.ಪಿ. ಬಿ.ಕೆ. ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭಾಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಡಕಾಯಿತರಿಗಾಗಿ ಶೋಧ ನಡೆದಿದೆ. ಮೂವರು ಗಾಯಾಳುಗಳೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹೇಳಿರುವುದಾಗಿ, ಪೊಲೀಸರು ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications