ಸಾರಸ್ವತ ಲೋಕದಲ್ಲಿ ಬಿ.ಚಿಗೆ ಅನ್ಯಾಯ: ಸುಮತೀಂದ್ರ ನಾಡಿಗ್
ಬೆಂಗಳೂರು : ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಹಾಸ್ಯ ಸಾಹಿತಿ ಬೀಚಿ ಅವರಿಗೆ ಅಪಾರ ಅನ್ಯಾಯ ಆಗಿದೆ ಎಂದು ಕವಿ, ವಿಮರ್ಶಕ ಡಾ. ಸುಮತೀಂದ್ರ ನಾಡಿಗ್ ಅಭಿಪ್ರಾಯಪಟ್ಟರು. ಬೀಚಿ ಬಳಗ ಹಾಗೂ ಸಹಕಾರಿ ಆಡಳಿತ ತರಬೇತಿ ಸಂಸ್ಥೆ ಶನಿವಾರ ಏರ್ಪಡಿಸಿದ್ದ ಬೀಚಿ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಬೀಚಿ ಅವರಿಗೆ ಹೆಸರು, ಜನಮನ್ನಣೆ ದೊರಕಿತೇ ವಿನಾ ಅವರನ್ನು ಸರಕಾರ ಗುರುತಿಸಲಿಲ್ಲ. ಪ್ರಶಸ್ತಿಗಳೂ ಸಿಗಲಿಲ್ಲ ಎಂದು ವಿಷಾದಿಸಿದರು. ಕಥೆ ಹೇಳುವ ಕಲೆ, ಅನುಭವ ಅವರಲ್ಲಿತ್ತು. ಅದನ್ನು ತಮ್ಮ ಸಾಹಿತ್ಯದಲ್ಲಿ ಮನಮುಟ್ಟುವಂತೆ ಚಿತ್ರಿಸಿದರು. ಬೀಚಿ ಅವರ ಕೃತಿಗಳಲ್ಲಿ ಹಾಸ್ಯ ತಾಂಡವವಾಡುತ್ತದೆ. ನಮಗೆ ನಗುವುದನ್ನು ಕಲಿಸಿದ್ದೇ ಬೀಚಿ ಎಂದು ಅವರು ಹೇಳಿದರು.
ಹಾಸ್ಯದಲ್ಲಿ ನವಿರಾದ ಕಟು ಸತ್ಯಕ್ಕೆ ವಿಡಂಬನೆಯ ರೂಪ ಕೊಟ್ಟು, ಸಮಾಜದ ಓರೆ ಕೋರೆಗಳನ್ನು ಜನರಿಗೂ ತಿಳಿಯುವಂತೆ ಮಾಡಿದ ಅಗ್ರೇಸರ ಬೀಚಿ. ಅವರ ಶೈಲಿಯಲ್ಲಿದ್ದ ಮೊನಚು ಮತ್ಯಾರ ಸಾಹಿತ್ಯದಲ್ಲೂ ಸಿಗಲು ಸಾಧ್ಯವಿಲ್ಲ ಎಂದ ಅವರು, ಬೀಚಿ ಅವರ ಕೃತಿಗಳನ್ನು ಓದುವ ಮೂಲಕ ಕನ್ನಡಿಗರು ಅವರಿಗೆ ಗೌರವ ನೀಡಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಚಂದ್ರಶೇಖರ ಕಂಬಾರರು ಬೀಚಿ ಅವರಿಗೆ ಸಾಹಿತ್ಯದ ಮೂಲಕ ಜೀವನದಾಚೆಯ ದರ್ಶನ ಮಾಡುವ ಹಂಬಲವಿತ್ತು. ಸಮಾಜದ ಬದುಕನ್ನು ಸಾಹಿತ್ಯದಿಂದ ತಿದ್ದುವ ಉತ್ಕಟೇಚ್ಛೆ ಅವರಲ್ಲಿತ್ತು ಎಂದರು.
ಕಾರ್ಯಕ್ರಮದಲ್ಲಿ ಹ್ಯೂಮರ್ ಕ್ಲಬ್‌ನ ಅಧ್ಯಕ್ಷ ವೈ.ಎಂ.ಎನ್. ಮೂರ್ತಿ, ಬೀಚಿ ಅವರ ಪುತ್ರ ಡಾ. ಮೂರ್ತಿ, ಸಂಸ್ಥೆಯ ಬಿ.ಎಸ್. ವಿಶ್ವನಾಥನ್ ಮೊದಲಾದವರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಬೀಚಿ ಪ್ರಕಟಣಾಲಯ ಹೊರತಂದಿರುವ ಸೀತೂ ಮದುವೆ, ಅಂಕಿತ ಪ್ರಕಾಶನದ ಉತ್ತರ ಭೂಪ, ಕುಸುಮಾ ಪ್ರಕಾಶನದ ಗಿಳಿಶಾಸ್ತ್ರದ ಪ್ರಾಯೋಜಕರು ಕೃತಿಗಳ ಬಿಡುಗಡೆಯೂ ಆಯಿತು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications