ನಿತ್ಯ ಭವಿಷ್ಯ
ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಕಲಿತ ವಿದ್ಯೆಗೆ ತಕ್ಕ ಕೆಲಸ ಹುಡುಕಿಕೊಂಡು ಬರುತ್ತೆ. ಇಷ್ಟು ದಿನ ನೀವು ಪಟ್ಟ ಶ್ರಮಕ್ಕೆ ಇದು ಹೊಸ ವರ್ಷದ ಕೊಡುಗೆ.ವೃಷಭ : ಮನಸ್ಸಿನ ತ್ರಾಸಿಗಿಷ್ಟು ಬಿಡುವು ಕೊಡಿ. ಮಲಗಿಕೊಂಡು, ಸ್ವಲ್ಪ ಆತ್ಮವಿಮರ್ಶೆ ಮಾಡಿಕೊಳ್ಳಿ. ನಿಮ್ಮದೇ ಲೋಕವಾಗಿಬಿಟ್ಟರೆ, ಮನೆಯವರನ್ನು ಕೇಳೋರ್ಯಾರು?
ಮಿಥುನ : ಧನಲಕ್ಷ್ಮಿ ತಾನೇ ತಾನಾಗಿ ಒಲಿದು ಬರುತ್ತಾಳೆ. ಬಂಧುಗಳಿಂದ ಕಂಡಾಪಟ್ಟೆ ಗೌರವ ನಿಮ್ಮ ಪಾಲಿಗೆ.
ಕಟಕ : ಗೆದ್ದ ಎತ್ತಿನ ಬಾಲ ಹಿಡಿಯುವ ಬುದ್ಧಿಯನ್ನ ಗಾಳಿಗೆ ತೂರಿಬಿಡಿ. ಈಗ ನೀವು ಅನುಭವಿಸುತ್ತಿರುವ ಕಷ್ಟಕ್ಕೆ ಅದೇ ಕಾರಣ.
ಸಿಂಹ : ಜಡ್ಡುಗಟ್ಟಿ ಹೋಗಿರುವ ಮನಸ್ಸನ್ನು ಬಡಿದೆಬ್ಬಿಸಿ. ಮನದ ಹಿಮ ಕರಗಿಸಿ ನೀರಾಗಿಸಿ. ಫಲ ನಿಮ್ಮದಾಗಲಿದೆ.
ಕನ್ಯಾ : ಕುಂತೆಡೆಯೇ ಅಂಡು ಹೊಸೆದರೆ ಅಂದುಕೊಂಡಿದ್ದು ಓಡೋಡಿ ಬರುತ್ತದೆಯೇ? ಎದ್ದು ಸ್ವಲ್ಪ ಕೆಲಸ ಮಾಡಿ ಸ್ವಾಮಿ.
ತುಲಾ : ಕಷ್ಟಪಟ್ಟು ಏನೋ ಬರೆದಿದ್ದೀರಿ. ಅದಕ್ಕೆ ಇವತ್ತು ಮೆಚ್ಚುಗೆಯ ಸುರಿಮಳೆ. ಅವಕಾಶದ ಹೊಸ ಬಾಗಿಲನ್ನೂ ಅದು ತೆರೆಯಲಿದೆ.
ವೃಶ್ಚಿಕ : ಕೈಗೆತ್ತಿಕೊಂಡಿರುವ ಮಹತ್ವಾಕಾಂಕ್ಷೆಯ ಯೋಜನೆ ಈಡೇರಬೇಕಾದರೆ ಅದರ ಬಗೆಗೆ ಇನ್ನಷ್ಟು ಆಸ್ಥೆಯಿರಲಿ.
ಧನಸ್ಸು: ಸಂಸಾರದಲ್ಲಿ ಸರಿಗಮ. ಅಕ್ಷರಶಃ ವಾರಾಂತ್ಯದ ಸಂಭ್ರಮ. ಪ್ರವಾಸ ಕೈಗೊಳ್ಳುವ ಪ್ರೋಗ್ರಾಂ ಇದ್ದರೆ ಮುಂದೂಡೋದು ಒಳಿತು.
ಮಕರ : ಮನೆ ಜಂತೆ ಎಣಿಸೋ ಬುದ್ಧಿ ಬಿಡಿ. ತಲೆ ಒಡೆದು ಕೈಹತ್ತೋ ದುಡ್ಡು ದಕ್ಕದು. ಎಲ್ಲೋ ಸೋರಿ ಹೋಗುತ್ತೆ.
ಕುಂಭ : ಯಾಕೀ ಸತಮತ ? ಮತ್ತದೇ ಚಿಂತೆ. ಚಿಯರ್ ಅಪ್. ಮುಂದಿನ ದಿನಗಳಲ್ಲಿ ಖುಷಿ ತುಂಬಿದೆ.
ಮೀನ : ಮೀನಮೇಷ ಬೇಡ. ನೀವಿಡುತ್ತಿರೋ ಹೆಜ್ಜೆ ಸರಿಯಾಗೇ ಇದೆ. ನುಗ್ಗಿ ನಡೆಯಿರಿ ಮುಂದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications