ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಔಪಚಾರಿಕ ಸಮಾರಂಭದಲ್ಲಿ ಆನಂದ್‌ಗೆ 6.6ಲಕ್ಷ ಡಾಲರ್‌ ಪ್ರಶಸ್ತಿ

By Staff
|
Google Oneindia Kannada News

ಟೆಹರಾನ್‌ : ವಿಶ್ವ ಚೆಸ್‌ ದೊರೆ ಪಟ್ಟ ಗಿಟ್ಟಿಸಿರುವ ಭಾರತದ ವಿಶ್ವನಾಥನ್‌ ಆನಂದ್‌ ಅವರಿಗೆ ‘ಫಿಡೆ ವಿಶ್ವ ಚಾಂಪಿಯನ್‌’ ಹಾಗೂ 6 ಲಕ್ಷದ 60 ಸಾವಿರ ಡಾಲರ್‌ ಬಹುಮಾನದ ಮೊತ್ತವನ್ನು ಅಂತರರಾಷ್ಟ್ರೀಯ ಚೆಸ್‌ ಮತ್ತು ಇರಾನ್‌ ಕ್ರೀಡಾ ಅಧಿಕಾರಿಗಳು ಬುಧವಾರ ರಾತ್ರಿಯ ಔಪಚಾರಿಕ ಸಮಾರಂಭದಲ್ಲಿ ನೀಡಿ ಗೌರವಿಸಿದರು.

ಫೈನಲ್ಸ್‌ ಹಣಾಹಣಿಯಲ್ಲಿ ಆನಂದ್‌ಗೆ ಪೂರ್ಣ ಪ್ರಮಾಣದಲ್ಲಿ ಮಣಿದ ಸ್ಪೇನ್‌ನ ಅಲೆಕ್ಸಿ ಶಿರೋವ್‌ ಅವರಿಗೆ 4 ಲಕ್ಷದ 40 ಸಾವಿರ ಡಾಲರ್‌ ಬಹುಮಾನ ಮೊತ್ತ ನೀಡಿ ಗೌರವಿಸಲಾಯಿತು. ಕಳೆದ ಭಾನುವಾರ ಆನಂದ್‌ ನಡೆಸಿದ ಬಿಳಿ ಪಾನ್‌ಗಳ ನಡೆಯ 41ನೇ ಹೆಜ್ಜೆಗೆ ಶಿರೋವ್‌ ಉತ್ತರ ಕೊಡದೆ, ಸೋಲೊಪ್ಪಿದ್ದರು. 1972ರಿಂದ ಫಿಡೆ ವಿಶ್ವ ಚಾಂಪಿಯನ್‌ ಪಟ್ಟಕ್ಕಂಟಿಕೊಂಡಿದ್ದ ರಷ್ಯಾದಿಂದ ಪ್ರಥಮ ಬಾರಿಗೆ ಫಿಡೆ ದೊರೆ ಪಟ್ಟ ವನ್ನು ಕಸಿದಿರುವ ಏಷ್ಯಾದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಆನಂದ್‌ ಪಾತ್ರರಾಗಿದ್ದಾರೆ.

(ರಾಯ್ಟರ್ಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X