ವಿಕೆಟ್ ಹಿಂದೆ ಇನಿಂಗ್ಸೊಂದರಲ್ಲಿ 7ಬಲಿ : ವಿಶ್ವದಾಖಲೆ ಸರಿಗಟ್ಟಿದ ಜೇಕಬ್ಸ್
ಮೆಲ್ಬೋರ್ನ್ : ಇಲ್ಲಿನ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ವೆಸ್ಟೆಂಡೀಸ್ನ ವಿಕೆಟ್ ಕೀಪರ್ ಜೇಕಬ್ಸ್ ಇನಿಂಗ್ಸ್ ಒಂದರಲ್ಲಿ ವಿಕೆಟ್ ಹಿಂದೆ ಹೆಚ್ಚು ಬಲಿ ತೆಗೆದುಕೊಂಡ ವಿಶ್ವ ದಾಖಲೆಯನ್ನು ಬುಧವಾರ ಸರಿಗಟ್ಟಿದರು.
ಆಸ್ಟ್ರೇಲಿಯಾದ ಮೊದಲ ಪಾಳಿಯಲ್ಲಿ ಏಳು ಕ್ಯಾಚ್ ಹಿಡಿಯುವ ಮೂಲಕ ಜೇಕಬ್ಸ್ ಅವರು ಈ ಮೊದಲು ಈ ಸಾಧನೆಗೈದ ಇತರ ಮೂವರು ವಿಕೆಟ್ ಕೀಪರ್ಗಳ ಸಾಲಿಗೆ ಸೇರಿದರು. ಇಂಗ್ಲೆಂಡ್ನ ಬಾಬ್ ಟೇಲರ್ (1979-80 ರಲ್ಲಿ ಭಾರತದ ವಿರುದ್ಧ), ನ್ಯೂಜಿಲೆಂಡ್ನ ಇಯಾನ್ ಸ್ಮಿತ್ (1990-91 ರಲ್ಲಿ ಶ್ರೀಲಂಕಾ ವಿರುದ್ಧ) ಹಾಗೂ ಪಾಕಿಸ್ತಾನದ ವಾಸಿಂ ಬಾರಿ(1978-79 ರಲ್ಲಿ ನ್ಯೂಜಿಲೆಂಡ್ ವಿರುದ್ಧ) ಇನಿಂಗ್ಸ್ ಒಂದರಲ್ಲಿ ಏಳು ಬಲಿ ತೆಗೆದುಕೊಂಡ ಇತರ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ.
ಪ್ರಸಕ್ತ ಆಸ್ಟ್ರೇಲಿಯಾ ಸರಣಿಯಲ್ಲಿ ವಿಂಡೀಸ್ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವವರಲ್ಲಿ 33 ವರ್ಷದ ಜೇಕಬ್ಸ್ ಒಬ್ಬರಾಗಿದ್ದಾರೆ. ಪ್ರಸಕ್ತ ಟೆಸ್ಟ್ ಹೊರತು ಪಡಿಸಿ 24 ಟೆಸ್ಟ್ ಆಡಿರುವ ಜೇಕಬ್ಸ್ 852 ರನ್ ಗಳಿಸಿದ್ದಾರೆ ಹಾಗೂ ವಿಕೆಟ್ ಹಿಂದೆ 96 ಬಲಿ ತೆಗೆದುಕೊಂಡಿದ್ದಾರೆ. ಅದರಲ್ಲಿ ಮೂರು ಮಿಂಚಿನ ಸ್ಟಂಪಿಂಗ್ಗಳು ಸೇರಿವೆ.
(ಯುಎನ್ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications