ಪ್ರಕ್ಷುಬ್ಧ ಕಾಶ್ಮೀರ ಕೊಳ್ಳ : ಕಾಂದಹಾರ್ ಫಲ ಉಣ್ಣುತ್ತಿರುವ ಸರ್ಕಾರ
ಬಿನೂ ಜೋಷಿ
ಶ್ರೀನಗರ : ಆಪ್ಘಾನಿಸ್ತಾನದ ಕಾಂದಹಾರನ್‌ನಲ್ಲಿ ಹೈಜಾಕ್‌ಗೊಳಗಾದ ಇಂಡಿಯನ್ ಏರ್‌ಲೈನ್ಸ್‌ನಲ್ಲಿದ್ದ ಪ್ರಯಾಣಿಕರೊಂದಿಗೆ ಮೌಲಾನ ಅಜರ್ ಮಸೂದ್ ಸೇರಿದಂತೆ ಮೂವರು ಉಗ್ರಗಾಮಿಗಳ ವಿನಿಮಯ ಮಾಡಿಕೊಂಡ ಕರಾಳ ಘಟನೆಗೆ ವರ್ಷ ಸಂದಿದೆ. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಅಪರಾಧಿಗಳ ಶಿಕಾರಿ ಇನ್ನೂ ನಡೆಯುತ್ತಿದೆ.
ಭಾರತೀಯ ಸೇನಾ ಪಡೆಗಳ ಮುಖ್ಯ ಕಚೇರಿಯ ಹೊರಭಾಗದಲ್ಲಿ ಸೋಮವಾರ 9 ಜನರನ್ನು ಬಲಿ ತೆಗೆದುಕೊಂಡ ಕಾರ್ ಬಾಂಬ್ ಸ್ಫೋಟ ಉಗ್ರಗಾಮಿಗಳ ಚಟುವಟಿಕೆ ತೀವ್ರವಾಗಿರುವುದನ್ನು ಸೂಚಿಸುತ್ತದೆ. ಈ ಸ್ಫೋಟದ ಹೊಣೆಯನ್ನು ಜೈಶ್- ಇ- ಮೊಹಮ್ಮದ್ ಸಂಘಟನೆ ಹೊತ್ತು ಕೊಂಡಿದೆ. 1999 ರ ಡಿಸೆಂಬರ್ 31 ರಂದು ಜಮ್ಮುವಿನ ಜೈಲಿನಿಂದ ಬಿಡುಗಡೆ ಮಸೂದ್ ಮತ್ತು ಸಂಗಡಿಗರನ್ನು ಒಳಗೊಂಡಿರುವ ಈ ಸಂಘಟನೆ ಕಾಶ್ಮೀರ ಕೊಳ್ಳದ ಅತ್ಯಂತ ಅಪಾಯಕಾರಿ ಉಗ್ರಗಾಮಿ ಸಂಘಟನೆ ಎಂದೇ ಕುಖ್ಯಾತಿ ಪಡೆದಿದೆ.
ಕಳೆದ ವರ್ಷ ಕಾಂದಹಾರ್‌ನಲ್ಲಿ ಕೇಂದ್ರ ಸರ್ಕಾರ ಶರಣಾದ ಘಟನೆಯ ಫಲವನ್ನು ಕಾಶ್ಮೀರ ಕೊಳ್ಳ ಈಗ ಅನುಭವಿಸುತ್ತಿದೆಯೇ ? ವ್ಯಾಪಕವಾಗುತ್ತಿರುವ ಈ ಪ್ರಶ್ನೆಗೆ, ಕಳೆದ ದಶಕದಲ್ಲಿ ಉಗ್ರಗಾಮಿಗಳ ವಿರುದ್ಧ ಹೋರಾಡಿದ ಪ್ಯಾರಾ ಮಿಲಿಟರಿ ಪಡೆಯ ಅಧಿಕಾರಿಯಾಬ್ಬರು ಹೌದೆನ್ನುತ್ತಾರೆ. ಸರ್ಕಾರ ತನ್ನ ತಪ್ಪಿಗೆ ಈಗ ಬೆಲೆ ತೆರುತ್ತಿದೆ ಎಂದು ಅವರು ವಿಷಾದದಿಂದ ಹೇಳುತ್ತಾರೆ.
ಮಸೂದ್‌ನ ಬಿಡುಗಡೆ ಸೈನಿಕರ ನೈತಿಕ ಸ್ಥೈರ್ಯವನ್ನು ಕುಂದಿಸಿದೆ. ಕಾಂದಹಾರ್ ಘಟನೆಯ ನಂತರ ಕೊಳ್ಳದಲ್ಲಿ ಸಂಭವಿಸುವ ನರಮೇಧದ ಘಟನೆಗಳೂ ಹೆಚ್ಚಿವೆ ಎಂದು ಹೆಸರು ಬಹಿರಂಗ ಪಡಿಸ ಬಯಸದ ಆ ಅಧಿಕಾರಿ ಅಭಿಪ್ರಾಯ ಪಡುತ್ತಾರೆ.
ಕದನ ವಿರಾಮವೂ ಹಾಗೂ ಅಮಾಯಕ ನಾಗರಿಕರ ಪ್ರಾಣ ಹರಣವೂ ..
ಅಧಿಕೃತ ಮೂಲಗಳ ಪ್ರಕಾರ, ಪ್ರಸಕ್ತ ವರ್ಷದಲ್ಲಿ ಉಗ್ರಗಾಮಿಗಳಿಂದ 31 ಧಾರ್ಮಿಕ ದಾಳಿಗಳು(ಫಿದಾಯಿನ್ ಅಟ್ಯಾಕ್ಸ್) ನಡೆದಿವೆ. ಇವುಗಳಲ್ಲಿ 9 ದಾಳಿಗಳು ರಂಜಾನ್ ಮಾಸದ ಕದನ ವಿರಾಮವನ್ನು ಘೋಷಿಸಿದ ನಂತರ ನಡೆದಿರುವುದು ಗಮನಾರ್ಹ. ಪ್ರಸ್ತುತ ಕದನ ವಿರಾಮದ ಅವಧಿಯನ್ನು ಮತ್ತೂ ಒಂದು ತಿಂಗಳು ವಿಸ್ತರಿಸಲಾಗಿದೆ.
ಸಾಮೂಹಿಕ ನರಮೇಧಗಳೂ ವಿವಾದಿತ ಪ್ರದೇಶದಲ್ಲಿ ಕಾಂದಹಾರ್ ಘಟನೆಯ ನಂತರ ಗಾಬರಿ ಹುಟ್ಟಿಸುವ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಮಾಚ್ 20 ರಂದು 35 ಸಿಖ್ಖರ ಕಗ್ಗೊಲೆ, ಆಗಸ್ಟ್ 1 ರಂದು 34 ಯಾತ್ರಿಗಳು ಸೇರಿದಂತೆ ನೂರು ಜನರ ಕೊಲೆಗಳ ದುರಂತ ಇನ್ನೂ ಜನಮನದಿಂದ ಮಾಸಿಲ್ಲ .
ಇತ್ತೀಚೆಗೆ ದೆಹಲಿಯ ಕೆಂಪುಕೋಟೆಯಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳು ನಡೆಸಿದ ಗುಂಡಿನ ದಾಳಿ ಕೂಡ ಉಗ್ರಗಾಮಿಗಳ ಪ್ರಾಬಲ್ಯವನ್ನು ಸ್ಪಷ್ಟ ಪಡಿಸುತ್ತದೆ. ಒಟ್ಟಾರೆ, ಈ ಎಲ್ಲಾ ಘಟನೆಗಳು ಕಾಶ್ಮೀರದ ಸಾಮಾನ್ಯ ನಾಗರಿಕನ ಮರಣ ಭಯವನ್ನು ಮತ್ತಷ್ಟು ಹೆಚ್ಚಿಸಿವೆ. ಸರ್ಕಾರದ ಕದನ ವಿರಾಮ ಘೋಷಣೆಯಿಂದ ಆತ ತತ್ತರಿಸುವಂತಾಗಿದೆ. ಕದನ ವಿರಾಮ ಘೋಷಿಸಿದ ದಿನದಿಂದ ಈವರೆಗೆ 75 ನಾಗರಿಕರು ಕೊಲೆಗೀಡಾಗಿದ್ದಾರೆ. ಸರ್ಕಾರ ಮಾತ್ರ ಏನೂ ಸಂಭವಿಸಿಲ್ಲ ಅನ್ನುವಂತೆ ಕದನ ವಿರಾಮವನ್ನು ವಿಸ್ತರಿಸುತ್ತದೆ. ಪ್ರಧಾನಿ ಕೇರಳದಲ್ಲಿ ದೋಣಿ ವಿಹಾರದಲ್ಲಿ ವ್ಯಸ್ತರಾಗಿದ್ದಾರೆ.
(ಐಎಎನ್‌ಎಸ್)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications