ನಿತ್ಯ ಭವಿಷ್ಯ
ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಬಹಳ ದಿನಗಳ ನಂತರ ನಿಮ್ಮ ಇಷ್ಟದ ಗೆಳೆಯರು ರಜೆ ದಿನದ ಈ ಸಂಜೆ ನಿಮಗೆ ಜೊತೆಯಾಗುತ್ತಾರೆ. ಖುಷಿ ಗಳಿಗೆಗಳಲ್ಲಿ ನೀವು ರಸ್ತೆ ಸುತ್ತುತ್ತಿದ್ದ ದಿನಗಳ ನೆನಪು ಕಚಗುಳಿಯಿಡುತ್ತದೆ.ವೃಷಭ : ಲಾಟರಿ, ಜೂಜು ಎಂದು ಹಣ ಹಾಳು ಮಾಡಿಕೊಳ್ಳಬೇಡಿ. ಸದ್ಯಕ್ಕೆ ನಿಮ್ಮ ಅದೃಷ್ಟದ ಗೆರೆ ಅಂಥಾ ಉಜ್ವಲವಾಗೇನೂ ಇಲ್ಲ . ಇಷ್ಟಕ್ಕೂ ನಿಮಗೆ ಹೇಳಿಕೊಳ್ಳುವಂತಹ ಹಣಕಾಸಿನ ಸಮಸ್ಯೆಗಳೇನೂ ಇಲ್ಲವಲ್ಲ .
ಮಿಥುನ : ಇದ್ದದ್ದೆಲ್ಲಾ ಮರೆತು ಚೆನ್ನಾಗಿರಲು ನಿರ್ಧರಿಸಿರುವುದು ಒಳ್ಳೆದು . ಇಂದು ಶುಭ ದಿನ.
ಕಟಕ : ಆರೋಗ್ಯದಲ್ಲಿ ಏರು ಪೇರು. ಕುಟುಂಬದಲ್ಲಿ ಕಲಹ. ಒಟ್ಟಿನಲ್ಲಿ ಭಾನುವಾರದ ರಜೆ ನಿಮ್ಮ ಪಾಲಿಗೆ ನೆಮ್ಮದಿ ತರುವಂಥದ್ದೇನೂ ಅಲ್ಲ .
ಸಿಂಹ : ಸಾಲದು ಎನ್ನುವುದು ಬೇಕು ಎನ್ನುವುದಕ್ಕೆ ತಾಯಿ ಅನ್ನುವುದು ನಿಜವಾದರೂ, ಸದಾ ನಿಮ್ಮ ಕುದುರೆಯೇ ರೇಸಿನಲ್ಲಿ ಗೆಲ್ಲುವುದು ಸಾಧ್ಯವಿಲ್ಲ . ಅವರು ಗೆದ್ದಲ್ಲಿ ಅವರ ಆನಂದದಲ್ಲಿ ನೀವೂ ಭಾಗಿಯಾದರಾಯಿತು.
ಕನ್ಯಾ : ಮತ್ತೆ ಹೊಸ ನೀರು ಕುಡಿಯುವ ಎಲ್ಲಾ ಸಾಧ್ಯತೆಗಳಿವೆ. ಇರುವ ಜಾಗೆ ಬಿಡುವುದು ಕಷ್ಟವಾದರೂ, ಭವಿಷ್ಯದ ದೃಷ್ಟಿಯಿಂದ ಸದ್ಯಕ್ಕೆ ಗಂಟು ಮೂಟೆ ಕಟ್ಟುವುದು ಕ್ಷೇಮ.
ತುಲಾ : ಹಿತವಾದ ಚಳಿಗೆ ಹಿತುಗಿದ ಅವರೆ ಭಾಳಾ ರುಚಿಕಟ್ಟು . ಜೊತೆಗೆ ರಾಗಿಮುದ್ದೆ, ಚಪಾತಿ, ದೋಸೆ ಏನಾದರೂ ಆದೀತು. ನಿಮ್ಮ ನಾಲಗೆಗೆ ಇವತ್ತು ಬಿಡುವೆಂಬುದೇ ಇಲ್ಲ .
ವೃಶ್ಚಿಕ : ಆಕಾಶದಲ್ಲಿ ಚುಕ್ಕಿಗಳೆಲ್ಲಾ ನೇರ ರೇಖೆಯಲ್ಲಿಲ್ಲ ಅನ್ನೋದು ಗೊತ್ತಾಗಲು ನಿಮಗೆ ಇಷ್ಟು ಕಾಲ ಬೇಕಾಯಿತಲ್ಲ . ಎಲ್ಲವೂ ಮೂಗಿನ ನೇರಕ್ಕೆ ನಡೆಯಬೇಕು ಎನ್ನುವ ಭಂಡತನ ಬೇಡ.
ಧನಸ್ಸು: ಹೋದ ಬಾಣವ ಮರಳಿ ತೊಡದಿರು ಅನ್ನುವ ಮಾತು ನಿಮಗೆ ಚೆಂದಾಗಿ ಅನ್ವಯಿಸುತ್ತದೆ. ಇಷ್ಟಕ್ಕೂ ಹಳತನ್ನೇ ಕೆತ್ತುತ್ತಾ ಕೂರುವಷ್ಟು ಸಮಯವೂ ನಿಮ್ಮಲ್ಲಿಲ್ಲ . ಹೊಸತನ್ನು ಯೋಚಿಸಿ.
ಮಕರ : ಆರಾಮ್‌ಸೇ ರಜೆ ಕಳೆಯುವುದಕ್ಕಿಂತ ಖುಷಿ ಇನ್ನೇನಿದೆ ? ಕೆಲಸಗಳು, ಖರ್ಚು, ಆಫೀಸಿನಲ್ಲಿ ಬದಲಾವಣೆಗಳು ಎಲ್ಲವೂ ನಿಮ್ಮ ಕಾಯುತ್ತಿವೆ. ಇವತ್ತಿಡೀ ಲೆಕ್ಕಾಚಾರದಲ್ಲಿಯೇ ಮುಳುಗಿರುತ್ತೀರಿ.
ಕುಂಭ : ಅನಿರೀಕ್ಷಿತ ಧನಲಾಭ ನಿಮ್ಮ ಪಾಲಿಗಿದೆ. ಕೆಲಸ ಮಾಡುತ್ತಿರುವ ಕ್ಷೇತ್ರದಲ್ಲಿ ಯಶಸ್ಸೂ ಇದೆ. ಎಲ್ಲವೂ ಈ ದಿನ ಶುಭವೇ.
ಮೀನ : ಮನೆ ಮಕ್ಕಳೊಂದಿಗೆ ಮೋಜು . ಉಲ್ಲಾಸದಾಯಕ ಪ್ರವಾಸ. ಈ ಆನಂದದಲ್ಲಿ ತಿಂಗಳ ಕೊನೆಯೆಂಬುದು ನಿಮ್ಮ ಪಾಲಿಗೆ (ಜೇಬಿಗೆ) ಅಷ್ಟು ಮುಖ್ಯವಾಗಬಾರದು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications