ಕುಟುಂಬದ ಕಣ್ಣಾದ ಕವಿತಾ ಬ್ರಹ್ಮ-ಭ-ಟ್‌ಗೆ ಬ್ರಿಟನ್ ಶೌರ್ಯ ಪ್ರಶಸ್ತಿ
* ಶ್ಯಾಮ್ ಭಾಟಿಯಾ
ಲಂಡನ್ : ಭಾರತೀಯ ಮೂಲದ 12 ವರ್ಷದ ಹುಡುಗಿ ಕವಿತಾ ಬ್ರಹ್ಮಭಟ್‌ಗೆ ಬ್ರಿಟನ್ನಿನ ಶೌರ್ಯ ಪ್ರಶಸ್ತಿ ಸಂದಿದೆ. ಈಕೆ ಯಾರೋ ಕಳ್ಳನನ್ನು ಹಿಡಿಯಲಿಲ್ಲ, ಸಮುದ್ರದಲ್ಲಿ ಮುಳುಗೋ ಮಗುವನ್ನು ಈಜಿ ಉಳಿಸಲಿಲ್ಲ. ಕಿವಿ ಕೇಳದ, ನೋಡಲಾಗದ ತಂದೆ- ತಾಯಿ ಹಾಗೂ 2 ವರ್ಷದ ಪುಟ್ಟ ತಂಗಿಗೆ ಇವಳೇ ಕಣ್ಣಾದಳು; ಕಿವಿಯಾದಳು !
ಲಂಡನ್‌ನ ‘ವುಮೆನ್ಸ್ ಓನ್’ ನಿಯತಕಾಲಿಕ ಆಯೋಜಿಸಿದ್ದ ಸಮಾರಂಭದಲ್ಲಿ ಶೌರ್ಯ ಪ್ರಶಸ್ತಿ ಪಡೆದ 12 ಬ್ರಿಟನ್ ಪುಟಾಣಿಗಳ ಪೈಕಿ ಐಯ್ಲ್ಸ್‌ಬರಿಯ ಕವಿತಾ ಕೇಂದ್ರಾಕರ್ಷಣೆಯಾದಳು. ಅಮ್ಮ ಅಲ್ಕಾ (33). ಅಪ್ಪ ರಸಿಕ್‌ಲಾಲ್(34). ಈಕೆಯ ಪುಟ್ಟ ತಂಗಿ ಪಾಯಲ್(2). ಮೂವರಿಗೂ ಕಣ್ಣು ಕಾಣಿಸದು, ಕಿವಿ ಕೇಳಿಸದು. ಪಾಯಲ್ ಹುಟ್ಟಿದಾಗ ಕವಿತಾ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ವೈದ್ಯರು- ದಾದಿಯರು ಹಾಗೂ ತನ್ನ ಪೋಷಕರ ನಡುವಿನ ಸಂವಹನೆಯ ಸೇತುವೆಯಾದಳು. ಮೂರು ವರ್ಷದವಳಿದ್ದಾಗಲೇ ‘ಸಂಜ್ಞೆ ಭಾಷೆ’ ಕಲಿತ ಕವಿತಾ, ಇಡೀ ಕುಟುಂಬ ಹಾಗೂ ಹೊರ ಜಗತ್ತನ್ನು ಬೆಸೆದಳು. ಮೂಕ ಭಾಷೆಯಲ್ಲೇ ಮನೆಯಲ್ಲಿ ನಗು ಹುಟ್ಟಿಸಿದಳು. ಜಗತ್ತಿನೊಂದಿಗೆ ವ್ಯವಹರಿಸಿದಳು.
ಇಷ್ಟೆಲ್ಲಾ ಹೊರೆ ಹೊತ್ತ ಕವಿತಾ ಎಲ್ಲಾ ಮಕ್ಕಳಂತೆ ಶಾಲೆಗೆ ಹೋಗುತ್ತಾಳೆ. ಹೋಂವರ್ಕ್ ಮಾಡುತ್ತಾರೆ. ಇವಳ ಮನೆಯ ಕಷ್ಟ ಗೊತ್ತಿರುವ ಗುರುಗಳು, ಈಕೆಗೆ ಯಾವುದೇ ಒತ್ತಡ ತಂದಿಲ್ಲ. ಹಾಗಂತ ಈಕೆಯೂ ಓದಿನಿಂದ ನುಣುಚಿಕೊಂಡವಳಲ್ಲ. ವಕೀಲೆಯಾಗುವ ಬಯಕೆ, ತನ್ನ ಕುಟುಂಬದ ಸಮಸ್ಯೆಯನ್ನೇ ಹೊಂದಿರುವ ಇತರರಿಗೂ ಸಂಜ್ಞೆ ಭಾಷೆ ಕಲಿಸುವ ಕನಸು ಆಕೆಯದು. ಸುಮಾರು ಒಂಭತ್ತು ವರ್ಷಗಳಿಂದ ಅಪ್ಪ- ಅಮ್ಮನೊಡನೆ ಮೂಕಿ ಭಾಷೆಯಲ್ಲೇ ಮಾತಾಡುತ್ತಾ ಬಂದಿರುವ ಕವಿತಾ, ಅದನ್ನು ಕೆಲ ಗೆಳತಿಯರಿಗೂ ಕಲಿಸಿದ್ದಾಳೆ. ಇವರ ಕಳ್ಳ ಮಾತುಗಳು ನಡೆಯೋದೂ ಆ ಭಾಷೆಯಲ್ಲೇ.
ಇನ್ನು ನನ್ನ ಭಾರ ಸ್ವಲ್ಪ ಕಡಿಮೆಯಾಗಲಿದೆ. ನನ್ನ ತಂಗಿ ಜಲ್ಪ ಈಗ ದೊಡ್ಡವಳಾಗಿದ್ದಾಳೆ. ಇವಳಿಗೀಗ 6 ವರ್ಷ ಎನ್ನುವ ಕವಿತಾಳ ಮುಗ್ಧ ಕಣ್ಣುಗಳಲ್ಲಿ ಸಾರ್ಥಕ್ಯ ಮಿನುಗುತ್ತಿತ್ತು.
(ಐಎಎನ್‌ಎಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications