Get Updates
Get notified of breaking news, exclusive insights, and must-see stories!

ಬರುವ ಜನವರಿಯಿಂದ ರಾಜ್ಯದ ಸ್ಥಳೀಯ ಆಡಳಿತಗಳ ಚುನಾವಣೆ

ಬೆಂಗಳೂರು : ಕರ್ನಾಟಕದ ಮಹಾ ನಗರಪಾಲಿಕೆಗಳು, ಪುರಸಭೆ, ನಗರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ಮುಂದಿನ ಜನವರಿಯಿಂದ 3 ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ನಗರಾಭಿವೃದ್ಧಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಜನವರಿ 27ರಿಂದ 30ರ ಅವಧಿಯಲ್ಲಿ ನಾಲ್ಕು ಮಹಾನಗರ ಪಾಲಿಕೆ, 32 ನಗರಸಭೆ, 76 ಪುರಸಭೆ ಹಾಗೂ 36 ಪಟ್ಟಣ ಪಂಚಾಯಿತಿಗಳಿಗೆ (ಒಟ್ಟು 148 ಸ್ಥಳೀಯ ಆಡಳಿತಗಳು) ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. 2001ರ ಜೂನ್‌ನಲ್ಲಿ ನಗರ ಪ್ರದೇಶದ 51 ಹಾಗೂ ಅಕ್ಟೋಬರ್‌- ನವೆಂಬರ್‌ನಲ್ಲಿ 13 ಸ್ಥಳೀಯ ಆಡಳಿತಗಳ ಚುನಾವಣೆ ನಡೆಯಲಿದೆ.

ನಗರ ಸ್ಥಳೀಯ ಆಡಳಿತಗಳ ವಾರ್ಡ್‌ಗಳ ಮೀಸಲಾತಿಯನ್ನು ಕಾಯ್ದೆಯನ್ವಯ ರೊಟೇಷನ್‌ ಆಧಾರದ ಮೇಲೆ ನಿಗದಿಗೊಳಿಸಲಾಗಿದೆ. ಹಿಂದುಳಿದ ವರ್ಗದವರಿಗೆ ಒಟ್ಟು ಸ್ಥಾನಗಳ ಶೇ.30 ಹಾಗೂ ಮಹಿಳೆಯರಿಗೆ ಶೇ.33 ಸ್ಥಾನಗಳ ಮೀಸಲಾತಿ ನೀಡಲಾಗಿದೆ. ಹೀಗಾಗಿ ಚುನಾವಣೆಗಳಲ್ಲಿ ಮೀಸಲಾತಿ ಗೊಂದಲ ಇಲ್ಲ. ಈ ಕುರಿತು ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದ್ದು, ರಾಜ್ಯ ಚುನಾವಣಾ ಆಯೋಗ ಚುನಾಮಣೆ ವೇಳಾಪಟ್ಟಿ ಪ್ರಕಟಿಸುವುದಷ್ಟೇ ಬಾಕಿ ಇದೆ ಎಂದು ಸಚಿವರು ಹೇಳಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+