ಶಿವಮೊಗ್ಗವನ್ನು ಹಿಂದೆ ಹಾಕಿದ ಗುಲ್ಬರ್ಗಾ
ಬೆಂಗಳೂರು : ರಾಜ್ಯದಲ್ಲಿ ಮತ್ತೆ ಒಣ ಹವೆ ಮುಂದುವರಿದಿದೆ. ಇದೇನಿದು ಒಣಹವೆ ಎಂದು ನೀವೂ ಪ್ರಶ್ನಿಸಬಹುದು. ನಮಗೆ ಜಿಯೋಗ್ರಫಿ ಮೆಸ್ಟ್ರು ಹೇಳಿದ ನೆನಪು. ಒಣಹವೆ ಎಂದ್ರೆ ಡ್ರೆೃ ವೆದರ್. ಅದು ಹೆಚ್ಚೂ ಕಮ್ಮಿ ಡ್ರೆೃ ಕಾಫ್ ತರಾನೆ.
ಡ್ರೆೃ ಕಾಫ್ ಬಂದ್ರಂತೂ, ಬರೀ ಕೆಮ್ಮು ಬರ್ತಾನೇ ಇರತ್ತೆ, ಆದ್ರೆ ಕಫಾನೇ ಬರಲ್ಲ. ಕೆಮ್ಮಿ ಕೆಮ್ಮಿ , ಗಂಟಲೆಲ್ಲಾ ಒಣಗಿ, ಎದೆ ನೋವಾಗಿ, ಸಂಕಟ ಆಗೋ ರೀತೀನೆ, ಈ ಡ್ರೆೃ ವೆದರ್ ಕೂಡ, ಬೆವರೂ ಹರಿಸದೆ, ಚಳಿಯ ನಡುಕವನ್ನೂ ಹೆಚ್ಚಾಗಿ ತಾರದೆ, ಒಳಗೊಳಗೇ ಸಂಕಟ ಪಡೋ ಹಾಗೆ ಮಾಡತ್ತೇ ಅಂತ. ಅವರು ಅಂದು ಅದನ್ನು ತಮಾಷೆಗೆ ಹೇಳಿದ್ದರಾದ್ರೂ, ಇವತ್ತಿನ ಹವೆ ಮಾತ್ರ ಹಾಗೇ ಇದೆ. ಶರೀರದ ಒಳಗೆ ಅರಿವಿಲ್ಲದ ಹಾಗೆ ಮತ್ತು ಹೊರಗೆ ವ್ಯಕ್ತ ಪಡಿಸಲಾಗದ ಸಂಕಟ ತರ್ತಾ ಇದೆ.
ಈ ಮಧ್ಯೆ ರಾಜ್ಯದ ಕರಾವಳಿ, ಉತ್ತರ ಒಳನಾಡಿನಲ್ಲಿ ಕನಿಷ್ಠ ತಾಪಮಾನ ಕುಸಿದಿದೆ. ನಿನ್ನೆ ಶಿವಮೊಗ್ಗಕ್ಕೆ ಕನಿಷ್ಠ ತಾಪಮಾನದ ರೇಸ್‌ನಲ್ಲಿ ಸೋತಿದ್ದ ಗುಲ್ಬರ್ಗಾ ಮತ್ತೆ ಇಂದು ತನ್ನ ಲೀಡ್ ಕಾಪಾಡಿಕೊಂಡಿದೆ. ಅಲ್ಲಿ 11ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ದಕ್ಷಿಣ ಒಳನಾಡಿನ ಕೆಲವು ಕಡೆ ತಾಪಮಾನ ಸಾಮಾನ್ಯ ಮಟ್ಟಕ್ಕಿಂತಲೂ ಕಡಿಮೆ ಇತ್ತು. ಮುನ್ಸೂಚನೆಯ ರೀತ್ಯ ಭಾನುವಾರ ಬೆಳಗ್ಗೆ ವರೆಗೆ ರಾಜ್ಯದಲ್ಲಿ ಒಣಹವೆ ಅರ್ಥಾತ್ ಡ್ರೆೃ ವೆದರ್ ಮುಂದುವರಿಯಲಿದೆ. ಬೆಂಗಳೂರು ಹಾಗೂ ಸುತ್ತ ಮುತ್ತಲ ಪ್ರದೇಶಗಳಲ್ಲಿ ಸಾಮಾನ್ಯವಾಗಿ ನಿರ್ಮಲ ಆಕಾಶ ಇದ್ದು, ಕನಿಷ್ಠ ತಾಪಮಾನ 14 ಡಿಗ್ರಿಯ ಆಸುಪಾಸಿನಲ್ಲಿ ಇರುತ್ತದೆ ಎಂದು ಹವಾಮಾನ ವೀಕ್ಷಣಾಲಯದ ವರದಿ ಹೇಳಿದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications