Get Updates
Get notified of breaking news, exclusive insights, and must-see stories!

ಹೃತಿಕ್‌ ಮಾವನಿಗೆ ವಿದ್ಯುತ್‌ ಶಾಕ್‌,ಅರಮನೆಯಲ್ಲಿ ಬೆಳಗದ ಬಲ್ಬು

ಮೈಸೂರು : ಜಗಮಗಿಸುವ ಬೆಳಕಿಗೆ ಹೆಸರಾದ ಮೈಸೂರು ಅರಮನೆ ಕಟ್ಟಿದ ಮೈಸೂರು ಒಡೆಯರ ಕುಟುಂಬ ವರ್ಗದ ಕೆಲವರು ಕಳೆದೆರಡು ದಿನಗಳಿಂದ ಕಾರ್ಗತ್ತಲಲ್ಲಿ ಕಾಲ ತಳ್ಳುತ್ತಿದ್ದರೆ, ಇತ್ತ ಬೆಂಗಳೂರಲ್ಲಿ ವಿದ್ಯುತ್‌ ಕಳವು ಮಾಡಿದ ಬಾಲಿವುಡ್‌ ನಟ ಸಂಜಯ್‌ ಖಾನ್‌ರಿಂದ 37 ಲಕ್ಷ ರು. ವಸೂಲಿ ಮಾಡಲು ಕಾನೂನು ಕ್ರಮಕ್ಕೆ ವಿದ್ಯುತ್‌ ನಿಗಮ ಮುಂದಾಗಿದೆ. ಡಿ.29ರಿಂದಲೇ ಏರಿಕೆ ಮಾಡಿರುವ ಹೊಸ ವಿದ್ಯುತ್‌ ದರ ಜಾರಿ ಮಾಡಲೂ ಅಧಿಸೂಚನೆ ಹೊರಟಿದೆ.

ಯಾರು ಎಷ್ಟೇ ದೊಡ್ಡವರಿರಲಿ ಕಾನೂನು ಎಲ್ಲರಿಗೂ ಒಂದೇ ಎಂಬ ನಿಲುವು ತಳೆದಿರುವ ಕೆ.ಪಿ.ಟಿ.ಸಿ.ಎಲ್‌. ಸುಮಾರು 16.5 ಲಕ್ಷ ರುಪಾಯಿ ವಿದ್ಯುತ್‌ ಬಾಕಿ ಪಾವತಿಸದ ಕಾರಣ ಮೈಸೂರು ರಾಜ ವಂಶಸ್ಥರ ಮನೆಗಳಿಗೆ ಪೂರೈಸಲಾಗುತ್ತಿದ್ದ ವಿದ್ಯುತ್‌ ಸಂಪರ್ಕವನ್ನು ಕಡಿದು ಹಾಕಿದೆ.

ಆದರೆ, ಸಂಸತ್‌ ಸದಸ್ಯರೂ ಆದ ರಾಜಕುವರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ ನಿವಾಸದ ವಿದ್ಯುತ್‌ ಸಂಪರ್ಕ ಮಾತ್ರ ಕತ್ತರಿಸಲಾಗಿಲ್ಲ ಎಂದು ಅರಮನೆ ಮೂಲಗಳು ಹೇಳಿವೆ. ವಿದ್ಯುತ್‌ ನಿಗಮದ ಅಧ್ಯಕ್ಷ ವಿ.ಪಿ. ಬಾಳಿಗಾ ಅವರು, ಭಾಗಶಃ ಬಾಕಿ ಪಾವತಿ ಮಾಡಿ, ಕಂತುಗಳಲ್ಲಿ ಉಳಿದ ಬಾಕಿ ಪಾವತಿಸುವ ಭರವಸೆ ನೀಡಿದರೆ, ವಿದ್ಯುತ್‌ಸಂಪರ್ಕ ನೀಡುವ ಭರವಸೆ ನೀಡಿದ್ದಾರೆ. ನಿಗಮವು ಯಾವ ತಾರತಮ್ಯವೂ ಇಲ್ಲದೆ ಬಾಕಿ ವಸೂಲಿಗೆ ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂದೂ ತಿಳಿಸಿದ್ದಾರೆ.

ರಾಜ್ಯ ಸರಕಾರ ಬಾಕಿ ಪಾವತಿಸುವ ಭರವಸೆ ನೀಡಿದ ನಂತರ ಚಾಮುಂಡಿ ಅತಿಥಿಗೃಹಕ್ಕೆ ಮತ್ತೆ ವಿದ್ಯುತ್‌ ಸಂಪರ್ಕ ಒದಗಿಸಲಾಗಿದೆ ಎಂದೂ ಮೈಸೂರು ನಗರದ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಎಂ.ಕೆ. ದಾಸ್‌ ತಿಳಿಸಿದ್ದಾರೆ. ವಿದ್ಯುತ್‌ ಬಾಕಿ ಕಟ್ಟದ ಕಾರಣ ಮಾಜಿ ರಾಷ್ಟ್ರಪತಿ ದಿವಂಗತ ಜೈಲ್‌ ಸಿಂಗ್‌ ಅವರ ಮನೆಯ ವಿದ್ಯುತ್‌ ಸಂಪರ್ಕವನ್ನೇ ಕತ್ತರಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಸಂಜಯ್‌ ಖಾನ್‌ ವಿರುದ್ಧ ಕಾನೂನು ಕ್ರಮ : ಬೆಂಗಳೂರು ಹೊರ ವಲಯದಲ್ಲಿ ರಿಸಾರ್ಟ್‌ ನಿರ್ಮಾಣ ಮಾಡುವಾಗ ಕಂಬದಿಂದಲೇ ನೇರವಾಗಿ ವಿದ್ಯುತ್‌ ಕಳವು ಮಾಡಿದ್ದಾರೆ ಎಂದು ಆರೋಪಿಸಲಾಗಿರುವ ಬಾಲಿವುಡ್‌ ಮಾಜಿ ತಾರೆ ಹಾಗೂ ಹೃತಿಕ್‌ನ ಮಾವ ಸಂಜಯ್‌ ಖಾನ್‌ ಅವರಿಂದ 37 ಲಕ್ಷ ರುಪಾಯಿಗಳ ದಂಡ ವಸೂಲಿಗೆ ಕಾನೂನು ಕ್ರಮ ಕೈಗೊಳ್ಳಲು ಕೆಪಿಟಿಸಿಎಲ್‌ ನಿರ್ಧರಿಸಿದೆ. ಈ ವಿಷಯವನ್ನು ನಿಗಮದ ಅಧ್ಯಕ್ಷ ವಿ.ಪಿ. ಬಾಳಿಗಾರ್‌ ಸುದ್ಧಿಸಂಸ್ಥೆಗೆ ತಿಳಿಸಿದ್ದಾರೆ.

ಸಂಜಯ್‌ಖಾನ್‌ ಅವರು ತಮಗೆ ಅಗತ್ಯವಾದ ವಿದ್ಯುತ್‌ಗಾಗಿ ಜನರೇಟರ್‌ ಬಳಸುತ್ತಿದ್ದಾರಾದರೂ, ಕೆಪಿಟಿಸಿಎಲ್‌ ಮೂಲಗಳ ರೀತ್ಯ ಅವರು ಸುಮಾರು 250,000 ಯುನಿಟ್‌ಗಳಷ್ಟು ವಿದ್ಯುತ್‌ ಬಳಸಿದ್ದಾರೆ. ಇದರ ಒಟ್ಟು ಮೌಲ್ಯ ಸುಮಾರು 37 ಲಕ್ಷ ರುಪಾಯಿಗಳು.

ಹೊಸ ವಿದ್ಯುತ್‌ ದರ 29ರಿಂದ : ವಿದ್ಯುತ್‌ ನಿಯಂತ್ರಣ ಆಯೋಗ ಸಮ್ಮತಿಸಿರುವ ಪರಿಷ್ಕೃತ ವಿದ್ಯುತ್‌ ದರ (ಶೇ. 17) ಡಿಸೆಂಬರ್‌ 29ರಿಂದಲೇ ಜಾರಿಗೆ ಬರುತ್ತದೆ ಎಂದು ಕೆ.ಪಿ.ಟಿ.ಸಿ.ಎಲ್‌ ಪ್ರಕಟಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+