ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ದೇಶಪ್ರೇಮಿಯಿಂದ ಪಾಕ್‌ ವೆಬ್‌ಸೈಟ್‌ ಅಪಹರಣ

By Staff
|
Google Oneindia Kannada News

*ಸುಮಿತ್‌ ಚಟರ್ಜಿ

ನವದೆಹಲಿ : ರಮ್ಜಾನ್‌ ಮಾಸಾಚರಣೆ ಸಂದರ್ಭದಲ್ಲಿ ಶಾಂತಿ ಪಾಲನೆ ಕಾಪಾಡಲು ಕಾಶ್ಮೀರದಲ್ಲಿ ಮತ್ತೊಂದು ತಿಂಗಳು ಕದನ ವಿರಾಮವನ್ನು ಕೇಂದ್ರ ಸರ್ಕಾರ ಘೋಷಿಸಿದ ಬೆನ್ನಿಗೇ ಭಾರತ ಹಾಗೂ ಪಾಕ್‌ ನಡುವಿನ ಸೈಬರ್‌ ಸಮರ ತೀವ್ರಗೊಂಡಿದೆ. ಪಾಕಿಸ್ತಾನ ಸರ್ಕಾರದ ಅಧಿಕೃತ ವೆಬ್‌ಸೈಟ್‌ www.pakgov.org ನ್ನು ದೇಶಪ್ರೇಮಿ ಎಂದು ಹೇಳಿಕೊಂಡಿರುವ ವ್ಯಕ್ತಿಯಾಬ್ಬ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾನೆ.

ಸೈಟ್‌ನ ಮುಖಪುಟ (ಹೋಂ ಪೇಜ್‌)ದಲ್ಲಿನ ವಿಷಯವನ್ನು ಸಂಪೂರ್ಣ ಅಳಿಸಿದ್ದು , ಅಲ್ಲಿ ಈ ಸೈಟನ್ನು ದೇಶಪ್ರೇಮಿ ಭಾರತೀಯ ಐಟಿ ತಜ್ಞ ವಶಪಡಿಸಿಕೊಂಡಿದ್ದಾನೆ ಎಂದು ಬರೆಯಲಾಗಿದೆ. ಮೇರಾ ಭಾರತ್‌ ಮಹಾನ್‌, ಐ ಲವ್‌ ಇಂಡಿಯಾ ಎನ್ನುವ ಬರಹಗಳೂ ಮುಖಪುಟದಲ್ಲಿವೆ.

ಐಟಿಯಲ್ಲಿ ಭಾರತ ಸೂಪರ್‌ ಪವರ್‌. ನಾವು ವಿಶ್ವದಲ್ಲಿಯೇ ಅತ್ಯುತ್ತಮ ಹ್ಯಾಕರ್‌ಗಳು. ಆದರೆ, ಅದನ್ನು ಸಂದರ್ಭೋಚಿತವಾಗಿ ಬಳಸುತ್ತೇವೆ. ಇನ್ನಾದರೂ ಭಾರತೀಯರೊಂದಿಗೆ ಆಟವಾಡುವುದನ್ನು ನಿಲ್ಲಿಸಿ. ಇದು ನಿಮಗೆ ಕೊನೆ ಎಚ್ಚರಿಕೆ ಎಂದು ತಿಳಿಸಿರುವ ಹ್ಯಾಕರ್‌, ಪಾಕಿಸ್ತಾನಿಗಳ ಈ ಸೈಟ್‌ ಬೇಧಿಸಲಿಕ್ಕೆ ನನಗೆ ಕೇವಲ 30 ನಿಮಿಷಗಳು ಸಾಕಾದವು ಎಂದು ಹೇಳಿಕೊಂಡಿದ್ದಾನೆ.

ಇದಕ್ಕೂ ಮುನ್ನ ಇಂಡಿಯನ್‌ ಸೈನ್ಸ್‌ ಕಾಂಗ್ರೆಸ್‌ 2000 ಸೈಟ್‌ ಹ್ಯಾಕ್‌ ಮಾಡಿದ್ದ ಪಾಕಿಸ್ತಾನಿ ಹ್ಯಾಕರ್‌ಗಳು, ಅದರಲ್ಲಿ ಭಾರತ ವಿರೋಧಿ ವಿಷಯಗಳನ್ನು ಪ್ರಕಟಿಸಿದ್ದರು. ಅಂತೆಯೇ ಕಳೆದ ಆಗಸ್ಟ್‌ನಲ್ಲಿ ನ್ಯಾಶನಲ್‌ ಇನ್‌ಫಾರ್ಮಾಟಿಕ್ಸ್‌ನ ವೆಬ್‌ಸೈಟ್‌ ಹ್ಯಾಕ್‌ ಮಾಡಿ ಅದರಲ್ಲಿ ಭಾರತದ ವಿರುದ್ಧ ಬೈಗುಳನ್ನು ಪ್ರಕಟಿಸಿದ್ದರು. ವಿದೇಶ್‌ ಸಂಚಾರ್‌ ನಿಗಮ್‌ ಲಿಮಿಟೆಡ್‌ನ (ವಿಎಸ್‌ಎನ್‌ಎಲ್‌) ಸೈಟ್‌ ಕೂಡ ಹ್ಯಾಕರ್‌ಗಳಿಂದ ಇತ್ತೀಚೆಗೆ ತಾನೇ ಬಾಧೆಗೊಳಗಾಗಿತ್ತು .

(ಐಎಎನ್‌ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X