Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ಕಾರ್ಪೊರೇಟ್‌ ಜಗತ್ತಿನಲ್ಲಿ ಐದು ಮೆಟ್ಟಿಲುಗಳ ಜಿಗಿಯುವಿರಿ. ಮಕ್ಕಳು ಮಿತಿಮೀರುತ್ತಿದ್ದಾರೆ. ಸ್ವಲ್ಪ ಬುದ್ಧಿ ಮಾತು ಹೇಳಿ.

ವೃಷಭ : ಆರೋಗ್ಯದ್ದೇ ಸಮಸ್ಯೆ. ಪೀಕಲಾಟದಲ್ಲಿರುವ ಗೆಳೆಯನ ಹೊರೆಗೆ ಭುಜ ಕೊಡಲೇಬೇಕು. ಈ ನಡುವೆ ನಿಮ್ಮ ಕೆಲಸವೆಲ್ಲಾ ಗೋತಾ ಆಗಲಿದೆ.

ಮಿಥುನ : ಇಲೆಕ್ಟ್ರಾನಿಕ್‌ ಅಂಗಡಿಯವರ ವ್ಯಾಪಾರ ಠುಸ್ಸು. ಇಲ್ಲ ಸಲ್ಲದ ಗುಲ್ಲುಗಳಿಗೆ ಕಿವಿಗೊಡದೆ, ಮದುವೆಯ ಬಗೆಗೆ ನೀವೇ ಖುದ್ದು ತೀರ್ಮಾನ ತೆಗೆದುಕೊಳ್ಳಿ.

ಕಟಕ : ಹೃದಯಕ್ಕೆ ಹತ್ತಿರಾದವರ ಜೊತೆ ಸಣ್ಣ ವಿಷಯಕ್ಕೆ ಮನಸ್ತಾಪ ಮಾಡಿಕೊಂಡಿದ್ದೀರಿ. ಏನೂ ಮುಚ್ಚಿಡದೆ, ವ್ಯವಧಾನದಿಂದ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ. ಇಲ್ಲವಾದರೆ ಅದು ದೊಡ್ಡದಾದೀತು.

ಸಿಂಹ : ಕಾಮನ್‌ ಸೆನ್ಸ್‌ ಪರೀಕ್ಷೆ. ನಿಮ್ಮ ಮಿದುಳಿಗೆ ತುಂಬಾ ಕೆಲಸ. ಛಲ ಬಿಡಬೇಡಿ. ಇಷ್ಟು ಮಾಡಿದಲ್ಲಿ ದಿ ಡೇ ವಿಲ್‌ ಬಿ ಯುವರ್ಸ್‌.

ಕನ್ಯಾ :ತೀರಾ ಮುಖ್ಯವಾದ ನಿರ್ಣಯ ಕೈಗೊಳ್ಳುವ ವಿಷಯದಲ್ಲಿ ತೊಳಲಾಟಕ್ಕೆ ಸಿಲುಕುವಿರಿ. ನಂಬಿಕಸ್ಥರ ಸಲಹೆ ಪಡೆಯೋದು ಒಳ್ಳೆಯದು.

ತುಲಾ : ಬೆಟ್ಟದಷ್ಟು ಆಸೆ ಬೇಡ. ಒಮ್ಮೆಲೇ ಜಿಗಿಯೋದಕ್ಕಿಂತ ಮೆಟ್ಟಿಲು ಮೆಟ್ಟಿಲಾಗಿ ಮೇಲೇರೋದೇ ಒಳಿತು. ಚಿನ್ನದ ಮೊಟ್ಟೆ ಇಡೋ ಕೊಳೀನ ಕುಯ್ಯೋ ಅತ್ಯಾಸೆ ಸಲ್ಲ.

ವೃಶ್ಚಿಕ : ಮರೀಚಿಕೆಯ ಹಿಂದೆ ಓಡುತ್ತಿದ್ದೀರಿ. ಓದು ಬರಹದಲ್ಲಿ ಮುಂದಿದ್ದೀರಲ್ಲ. ಅಷ್ಟು ಸಾಕು. ಮಿಕ್ಕೆಲ್ಲಾ ಕೆಲಸಕ್ಕೆ ಬಾರದ ವಿಷಯಗಳನ್ನು ಬದಿಗೊತ್ತಿ.

ಧನಸ್ಸು : ಬೆಳಗ್ಗೆ ಬಿಮ್ಮೆನ್ನುವ ಮನಸ್ಸು ಸಂಜೆ ಹೊತ್ತಿಗೆ ಹಾಯ್‌ ಎನ್ನುತ್ತದೆ. ಮನಸಲಿ ಮನೆ ಮಾಡಿರುವವರು ಕಣ್ಣ ಮುಂದೆ ಬರುತ್ತಾರೆ.

ಮಕರ : ದುಡ್ಡು ಕಾಸಿನ ವಿಷಯದಲ್ಲಿ ಸ್ನೇಹಿತನೊಂದಿಗೆ ಜಗಳವಾಗೋ ಸಾಧ್ಯತೆಯಿದೆ. ಅದನ್ನು ಅವಾಯ್ಡ್‌ ಮಾಡಿ. ಉಳಿದ ಯಾವ ತಲೆನೋವೂ ನಿಮಗಿಲ್ಲ.

ಕುಂಭ : ನೀವು ಆರಂಭ ಶೂರರೆನಿಸಿಕೊಳ್ಳುತ್ತೀರಿ. ದೊಡ್ಡ ಗಲಾಟೆ ಮಾಡುವ ಹುಮ್ಮಸ್ಸಿನಲ್ಲಿ ಸಣ್ಣ ಪುಟ್ಟ ಮುಖ್ಯ ವಿಷಯಗಳನ್ನು ಮರೆಯುವ ಸಾಧ್ಯತೆ ಇದೆ. ದೈವಾನುಗ್ರಹವಿರುವುದರಿಂದ ಅಂತಹ ತೊಂದರೆಯೇನೂ ಆಗದು.

ಮೀನ : ಆಡಿದಂತೆ ನಡೆಯದ್ದಕ್ಕೆ ನೀವು ಕೊಡುವ ಸಬೂಬಿಗೆ ಯಾರೂ ಕಿವಿಗೊಡರು. ಅದನ್ನು ಅರುಹುವ ಬದಲು ಸ್ಟೋರ್‌ ಮಾಡಿಟ್ಟುಕೊಳ್ಳಿ. ಮುಂದೆ ಕೆಲಸಕ್ಕೆ ಬಂದೀತು. ಒಲ್ಲದವರೊಡನೆ ನೀವೇ ರಾಜಿಯಾಗಬೇಕು. ಇಲ್ಲ ಮನೋರೋಗಿಯಾಗಬೇಕು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+