Get Updates
Get notified of breaking news, exclusive insights, and must-see stories!

ಬಿಲ್‌ ಮರೆತ ಕ್ಲಿಂಟನ್‌ : ಸಂದಾಯ ಮಾಡಿದ ‘ಮಿರರ್‌’ ವರದಿಗಾರ

ಲಂಡನ್‌ : ಇಲ್ಲಿನ ಪಬ್ಬೊಂದರಲ್ಲಿ ಕಳೆದ ವಾರ ಮಧ್ಯಾಹ್ನದ ಊಟ ಮುಗಿಸಿ ಬಿಲ್‌ ಕೊಡುವುದನ್ನು ಮರೆತು ಹೊರ ನಡೆದಿದ್ದ ಅಮೆರಿಕದ ಅಧ್ಯಕ್ಷ ಬಿಲ್‌ ಕ್ಲಿಂಟನ್‌ರ ಬಿಲ್ಲನ್ನು ಬ್ರಿಟನ್‌ನ ಅತ್ಯಧಿಕ ಪ್ರಸಾರದ ಟ್ಯಾಬ್ಲಾಯಿಡ್‌ ಮಿರರ್‌ನ ವರದಿಗಾರನೊಬ್ಬ ತುಂಬಿದ್ದಾನೆ.

ಕ್ಲಿಂಟನ್‌ ಊಟ ಮಾಡುವಾಗ ಅಲ್ಲಿಯೇ ಇದ್ದ ಮಿರರ್‌ನ ವರದಿಗಾರ, ಅಧ್ಯಕ್ಷರು ಮರೆತು ಹೋದ 24.70 ಪೌಂಡ್‌ಗಳ ಬಿಲ್ಲನ್ನು ತುಂಬಿದ್ದಾನೆ. ಆನಂತರ ಲಂಡನ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಬಿಲ್‌ ಮೊತ್ತದ ಚೆಕ್ಕನ್ನು ಮಿರರ್‌ ಕಚೇರಿಗೆ ಕಳಿಸಿಕೊಟ್ಟಿದ್ದು , ಆ ವರದಿಗಾರನಿಗೆ ಕೃತಜ್ಞತೆ ಸಲ್ಲಿಸಿದೆ. ಆದರೆ, ಆ ಹಣವನ್ನು ಮಕ್ಕಳ ಧರ್ಮದತ್ತಿಗೆ ಕೊಡುಗೆಯಾಗಿ ನೀಡುವುದಾಗಿ ಮಿರರ್‌ ಪ್ರಕಟಿಸಿದೆ.

ವರದಿಗಾರರ ಸಮಯಪ್ರಜ್ಞೆಯನ್ನು ನಾವು ಅಭಿನಂದಿಸುತ್ತೇವೆ ಎಂದು ರಾಯಭಾರ ಕಚೇರಿ ಸಚಿವಾಲಯದ ಸಲಹೆಗಾರ ಲೀ ಆರ್‌. ಲೊಹ್‌ಮಾನ್‌ ಚೆಕ್‌ನೊಂದಿಗೆ ಕಳುಹಿಸಿರುವ ಅಭಿನಂದನಾ ಪತ್ರದಲ್ಲಿ ಬಿಲ್‌ ಸಲ್ಲಿಸಿದ ಪತ್ರಕರ್ತನನ್ನು ಶ್ಲಾಘಿಸಿದ್ದಾರೆ.

ಬ್ರಿಟನ್‌ ಹಾಗೂ ಐರಿಷ್‌ ಗಣರಾಜ್ಯದ ಭೇಟಿಯ ಸಂದರ್ಭದಲ್ಲಿ ಕ್ಲಿಂಟನ್‌ ಲಂಡನ್ನಿನ ಟ್ರೆಂಡಿ ನಾಟಿಂಗ್‌ ಹಿಲ್‌ ಪ್ರದೇಶದ ಪಬ್‌ಗೆ ಭೇಟಿ ಕೊಟ್ಟಿದ್ದರು.

ಬಾಲಂಗೋಚಿ : ಬಿಲ್‌ ಮರೆತ ಕ್ಲಿಂಟನ್ನರ ಮರೆವು ಸಹಜವಾದದ್ದೇ ಹೊರತು, ಅವರು ಲಂಡನ್ನಿನಲ್ಲೂ ಭಾರತೀಯರ(ಭಾರತ ಪ್ರವಾಸದಲ್ಲಿನ) ಆತಿಥ್ಯವನ್ನು ನೀರೀಕ್ಷಿಸಿರಲಿಕ್ಕಿಲ್ಲ !

(ರಾಯ್ಟರ್ಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+